Home ಧಾರ್ಮಿಕ ಸುದ್ದಿ ‘ಯೇಸುಕ್ರಿಸ್ತರು ಮನುಕುಲದ ಉದ್ಧಾರಕ್ಕೆ ಜೀವನ ಮುಡಿಪಾಗಿಟ್ಟವರು’

‘ಯೇಸುಕ್ರಿಸ್ತರು ಮನುಕುಲದ ಉದ್ಧಾರಕ್ಕೆ ಜೀವನ ಮುಡಿಪಾಗಿಟ್ಟವರು’

1444
0
SHARE

ಶಿರ್ವ: ಕ್ರಿಸ್ತ ಜಯಂತಿಯು ಯೇಸು ಕ್ರಿಸ್ತರ ಜನ್ಮ ದಿನವನ್ನಾಗಿ ಹಾಗೂ ಎಲ್ಲ ಧರ್ಮದವರನ್ನು ಒಗ್ಗೂಡಿಸಿ ಆಚರಿಸುವ ಹಬ್ಬವಾಗಿದೆ ಎಂದು ಪಾಂಬೂರು ಹೋಲಿ ಕ್ರಾಸ್‌ ಚರ್ಚ್‌ನ ಧರ್ಮಗುರು ರೆ| ಫಾ| ಪಾವ್‌್ಲ ರೇಗೊ ಹೇಳಿದರು.

ಅವರು ಸೋಮವಾರ ಕ್ರಿಸ್‌ಮಸ್‌ ರಜೆಯ ಬಳಿಕ ಸಂತ ಮೇರಿ ಕಾಲೇಜಿನ ಹಾರ್ಮನಿ ಕ್ಲಬ್‌ ಆಯೋಜಿಸಿದ ಕ್ರಿಸ್ತ ಜಯಂತಿ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದದರು. ಇದು ಪ್ರೀತಿ, ಶಾಂತಿ, ಹರುಷ, ಭರವಸೆಯ ಸಂದೇಶ ನೀಡುವ ಮೂಲಕ ಮನುಕುಲದ ಉದ್ಧಾರಕ್ಕಾಗಿ ಜೀವನ ಮುಡಿಪಾಗಿಟ್ಟಿದ್ದರು ಎಂದರು.

ಡೊನ್‌ ಬೊಸ್ಕೊ ಹಾಗೂ ಸಂತ ಮೇರಿ ಕಾಲೇಜಿನ ಸಂಚಾಲಕ ರೆ|ಫಾ| ಡೆನಿಸ್‌ ಡೇಸಾ ಅಧ್ಯಕ್ಷತೆ ವಹಿಸಿ ಮಾತನಾಡಿ ಕ್ರಿಸ್ತ ಜಯಂತಿ ಹಬ್ಬ ಪ್ರೀತಿಯನ್ನು ಸಾರುವ ಮೂಲಕ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವ ಸಾಮರಸ್ಯದ ಸಂಕೇತವೆಂದರು. ಪ್ರಾಂಶುಪಾಲ ಪ್ರೊ| ರಾಜನ್‌ ವಿ. ಎನ್‌. ಅಭಿನಂದನೆ ಸಲ್ಲಿಸಿದರು.

ಹಾರ್ಮನಿ ಕ್ಲಬ್‌ನ ಸಂಯೋಜಕಿ ಅಸಿಸ್ಟೆಂಟ್ ಪ್ರೊ| ರೆಬೆಕ್ಕಾ ವೇದಿಕೆಯಲ್ಲಿದ್ದರು. ವಿದ್ಯಾರ್ಥಿನಿ ಲವಿಟಾ ಸ್ವಾಗತಿಸಿ, ಅಂತಿಮ ಬಿ.ಕಾಂ . ವಿದ್ಯಾರ್ಥಿ ಐವನ್‌ ಕಾರ್ಯಕ್ರಮ ನಿರೂಪಿಸಿ, ರೇಷ್ಮಾ ವಂದಿಸಿದರು. ಸಾಂಸ್ಕೃತಿಕ ‌ ಕಾರ್ಯಕ್ರಮದ ಅಂಗವಾಗಿ ಯೇಸುಕ್ರಿಸ್ತರ ಜನನ ಸಾರುವ ನೃತ್ಯರೂಪಕ, ಕ್ಯಾರಲ್‌ ಹಾಡು ಹಾಡಿದರು. ಆಕರ್ಷಣೆಯಾಗಿ ಸಂತ ಕ್ಲಾಸ್‌ ರಂಜಿಸಿದರು.

LEAVE A REPLY

Please enter your comment!
Please enter your name here