Home ಧಾರ್ಮಿಕ ಸುದ್ದಿ ನೊವೇನ ಪ್ರಾರ್ಥನೆ; ಬಲಿಪೂಜೆ

ನೊವೇನ ಪ್ರಾರ್ಥನೆ; ಬಲಿಪೂಜೆ

ವಾರ್ಷಿಕ ಮಹೋತ್ಸವ

1132
0
SHARE
ಐದನೇ ದಿನದ ನೊವೇನ ಪ್ರಾರ್ಥನೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು.

ಜೆಪ್ಪು: ಸಂತ ಆಂತೋನಿ ಆಶ್ರಮದಲ್ಲಿ ಸಂತ ಆಂತೋನಿಯವರ ವಾರ್ಷಿಕ ಮಹೋತ್ಸವಕ್ಕೆ ತಯಾರಿಯಾಗಿ ನಡೆಯುತ್ತಿರುವ ಐದನೇ ದಿನದ ನೊವೇನ ಪ್ರಾರ್ಥನೆಯಂದು ಜೆಪ್ಪು ಸಂತ ಅಂತೋನಿ ಆಶ್ರಮದ ಸಹಾಯಕ ಧರ್ಮಗುರು ವಂ| ರೋಶನ್‌ ಡಿ’ಸೋಜಾ ಬಲಿಪೂಜೆ ಅರ್ಪಿಸಿದರು.

ದೇವರ ಸೇವೆಗಾಗಿ ತಮ್ಮನ್ನೇ ಸಮರ್ಪಿಸಿದ ಧಾರ್ಮಿಕ ವ್ಯಕ್ತಿಗಳಿಗಾಗಿ ಪ್ರತ್ಯೇಕ ಪ್ರಾರ್ಥನೆ ಸಲ್ಲಿಸಲಾಯಿತು. ತಿಂಗಳ ಪ್ರಥಮ ಮಂಗಳವಾರವಾದ ಹಿನ್ನೆಲೆಯಲ್ಲಿ ಅರ್ಧ ದಿನದ ಧ್ಯಾನಕೂಟ ನಡೆಯಿತು.

ಆಶ್ರಮದ ನಿರ್ದೇಶಕ ವಂ| ಒನಿಲ್ ಡಿ’ಸೋಜಾ ಮಾತನಾಡಿ, ದೇವರು ನಮಗೆ ನೀಡಿರುವ ಸಮಯ, ಸಂಪತ್ತು ಮತ್ತು ಕೊಡುಗೆಗಳನ್ನು ದೇವರ ಸಾಮ್ರಾಜ್ಯಕ್ಕಾಗಿ ನಾವು ವಿನಿಯೋಗಿಸಿದರೆ ನಮಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ. ದೇವರೊಂದಿಗೆ ಅನಂತ ಜೀವನ ನಾವು ಪಡೆಯಬಹುದು. ಸಿರಿ ಸಂಪತ್ತು ಕಳ್ಳರು ಕದ್ದುಕೊಳ್ಳಬಹುದು. ಆದರೆ ನಮ್ಮ ಒಳ್ಳೆಯ ಗುಣಗಳನ್ನು, ಪುಣ್ಯಮಯ ಜೀವನವನ್ನು ಯಾರೂ ಕದ್ದುಕೊಳ್ಳಲು ಸಾಧ್ಯವಲ್ಲ ಎಂದು ಹೇಳಿದರು.

ಸಹಾಯಕ ನಿರ್ದೇಶಕ ವಂ| ತೃಶಾನ್‌ ಡಿ’ಸೋಜಾ ಆಶ್ರಮದ ನವೇನ ಪ್ರಾರ್ಥನೆಯನ್ನು ನಡೆಸಿಕೊಟ್ಟರು. ಬ್ರದರ್‌ ರೊನಾಲ್ಡ್ ಡಿ’ಸೋಜಾ, ಶಾಂತಿ ಪಿಂಟೊ ಸ್ತುತಿ ಆರಾಧನೆ ನಡೆಸಿದರು.

LEAVE A REPLY

Please enter your comment!
Please enter your name here