Home ಧಾರ್ಮಿಕ ಸುದ್ದಿ ಜೆಪ್ಪುವಿನಲ್ಲಿ ದಿವ್ಯ ಬಲಿಪೂಜೆ

ಜೆಪ್ಪುವಿನಲ್ಲಿ ದಿವ್ಯ ಬಲಿಪೂಜೆ

ಸಂತ ಆಂತೋನಿ ಆಶ್ರಮ

90
0
SHARE

ಮಹಾನಗರ: ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಹಬ್ಬಕ್ಕೆ ತಯಾರಿಯಾಗಿ ಸಂತ ಆಂತೋನಿ ದೇವಾಲಯ ಅಲ್ಲಿಪಾದೆಯಲ್ಲಿ ಧರ್ಮಗುರು ವಂ| ಫೆಡ್ರಿಕ್‌ ಮೊಂತೇರೊ ಅವರು ಎಂಟನೇ ದಿನದ ದಿವ್ಯ ಬಲಿಪೂಜೆ ಅರ್ಪಿಸಿದರು.

ವಂ| ಮೊಂತೇರೊ ಅವರು ಪವಿತ್ರ ಬೈಬಲಿನಲ್ಲಿ ದೇವರು ಯಾವ ರೀತಿ ವಿಧವೆಯರ ಕಾಳಜಿ ವಹಿಸಲು ಪ್ರವಾದಿಗಳ ಮೂಲಕ ಕರೆ ನೀಡುತ್ತಿದ್ದರು ಎಂಬುದನ್ನು ತಮ್ಮ ಪ್ರವಚನದಲ್ಲಿ ತಿಳಿಸಿದರು. ವಿಧವೆಯರು ಮತ್ತು ಅಸಹಾಯಕರು ಅವರು ತಮ್ಮ ಅಸ್ತಿತ್ವಕ್ಕಾಗಿ ಇತರರ ಮೇಲೆ ಅವಲಂಬನೆಯಾಗಿರುತ್ತಿದ್ದರು. ಅದಕ್ಕಾಗಿ ಹೊಲಗದ್ದೆಗಳಲ್ಲಿ ಬೆಳೆದ ಪೈರಿನಲ್ಲಿ ವಿಧವೆಯರಿಗೆ ಪಾಲು ನೀಡಲು ದೇವರು ಕರೆ ನೀಡಿದ್ದರು ಎಂದರು.

ನಾವೂ ಕೂಡ ನಮ್ಮ ಜೀವನದಲ್ಲಿ ದೀನರ, ಅಸಹಾಯಕರ ಮೇಲೆ ಕರುಣೆ ತೋರಿ ಸಹಾಯ ಮಾಡಲು ಮುಂದಾಗೋಣ ಎಂದು ಅವರು ಕರೆಕೊಟ್ಟರು. ಸಂಸ್ಥೆಯ ಸಹಾಯಕ ನಿರ್ದೇಶಕ ವಂ| ತೃಶಾನ್‌ ಡಿ’ಸೋಜಾ ಅವರು ಜೆಪ್ಪು ಆಶ್ರಮದಲ್ಲಿ ಭಕ್ತರಿಗೆ ಬಲಿಪೂಜೆ ಅರ್ಪಿಸಿದರು. ಸಂಸ್ಥೆಯ ನಿರ್ದೇಶಕ ವಂ| ಒನಿಲ್‌ ಡಿ’ಸೋಜಾ ಅವರು ಜಪಸರ ಪ್ರಾರ್ಥನೆ, ಆರಾಧನೆ ನಡೆಸಿಕೊಟ್ಟರು.
ಸಂಸ್ಥೆಯ ಇನ್ನೋರ್ವ ಸಹಾಯಕ ನಿರ್ದೇಶಕ ವಂ| ರೋಶನ್‌ ಡಿ’ಸೋಜಾ ಅವರು ಸಂಸ್ಥೆಯ ಮುಖ್ಯದ್ವಾರದ ಬಳಿ ವಿದ್ಯಾರ್ಥಿಗಳಿಗೆ ನವೇನ ಪ್ರಾರ್ಥನೆ ನೆರವೇರಿಸಿಕೊಟ್ಟರು.

ಸಂಸ್ಥೆಯ ನಿರ್ದೇಶಕ ವಂ| ಒನಿಲ್‌ ಡಿ’ಸೋಜಾ ಅವರು ಬಲಿಪೂಜೆಯ ಸಮಯದಲ್ಲಿ ಗೀತೆಗಳನ್ನು ಹಾಡಿದ ಅಪೊಸ್ತಲಿಕ್‌ ಕಾರ್ಮೆಲ್‌ ಧರ್ಮ ಭಗಿನಿಯರ ಉಪಕಾರ ಸ್ಮರಣೆ ಮಾಡಿದರು. ಸಾವಿರಾರು ಮಂದಿ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಓಂ ಶ್ರೀ ಸಾಯಿ ಜ್ಯೋತಿಷ್ಯಾಲಯ
South Canara’s Famous Asrologer
Family issue, ಮದುವೆಯಲ್ಲಿ ವಿಘ್ನ, ಸತಿ-ಪತಿ ಕಲಹ, Court Case, ವಶೀಕರಣ, Love problems, ಸದಾ ಕುಟುಂಬದಲ್ಲಿ ಕಲಹ, Money problem, ಕೆಲಸದಲ್ಲಿ ಕಿರಿಕಿರಿ, ಮಕ್ಕಳ ಸಮಸ್ಯೆ, ವ್ಯಾಪಾರದಲ್ಲಿ ಅಡೆ-ತಡೆ, Loan Issue, ನಿಮ್ಮ ಯಾವುದೇ ಸಮಸ್ಯೆಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ.
ಹೊಟೇಲ್ ದುರ್ಗಾ ಇಂಟರ್ ನ್ಯಾಶನಲ್, ರೂಂ. ನಂ. 310, 3ನೇ ಮಹಡಿ, ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ, ಉಡುಪಿ.
ಪಂಡಿತ್ ಸಾಯಿನಾಥ್ ಜೋಶಿ : Ph- 98449-44242

LEAVE A REPLY

Please enter your comment!
Please enter your name here