Home ನಂಬಿಕೆ ಸುತ್ತಮುತ್ತ ಜೀವಯಾನ: ಬದುಕನ್ನು ಬೆಳಗಿಸಬೇಕು ವಿಜ್ಞಾನ, ವೈಜ್ಞಾನಿಕ ದೃಷ್ಟಿಕೋನ

ಜೀವಯಾನ: ಬದುಕನ್ನು ಬೆಳಗಿಸಬೇಕು ವಿಜ್ಞಾನ, ವೈಜ್ಞಾನಿಕ ದೃಷ್ಟಿಕೋನ

4209
0
SHARE

ವಿಜ್ಞಾನ, ವೈಜ್ಞಾನಿಕ ಚಿಂತನೆ ಅಂದರೆ ಕೆಲವರಿಗೆ ಅದೇನೋ ಒಂದು ಬಗೆಯ ಹೆದರಿಕೆ, ಹಿಂಜರಿಕೆ.

ವಿಜ್ಞಾನವು ಬದುಕನ್ನು ಕ್ಲಿಷ್ಟಗೊಳಿಸುತ್ತದೆ ಎಂಬ ತಪ್ಪು ತಿಳಿವಳಿಕೆ ಅನೇಕರಲ್ಲಿದೆ.

ವೈಜ್ಞಾನಿಕ ಮನೋಭಾವ ಎಂದರೆ ಸತ್ಯಾಂಶಗಳ ಕಡೆಗೆ ಗೌರವ, ವಸ್ತುನಿಷ್ಠತೆ ಮತ್ತು ಬದುಕಿನತ್ತ ಪ್ರಾಯೋಗಿಕ ದೃಷ್ಟಿಕೋನ ಎನ್ನುತ್ತಾರೆ ಭೂದಾನ ಚಳುವಳಿ, ಸರ್ವೋದಯ ಚಳುವಳಿಗಳ ರೂವಾರಿ ಆಚಾರ್ಯ ವಿನೋಬಾ ಭಾವೆ. ನಾವು ವೈಜ್ಞಾನಿಕ ಮನೋಭಾವವನ್ನು ಬೆಳೆಸಿ ಕೊಂಡರೆ ಬದುಕಿನ ಪ್ರತಿಯೊಂದು ಆಯಾಮ ವನ್ನೂ ಅಧ್ಯಯನ ದೃಷ್ಟಿಯಿಂದ ಕಾಣುತ್ತೇವೆ, ಪ್ರತಿಯೊಂದನ್ನೂ ಪರಿಶೀಲನ ದೃಷ್ಟಿಯಿಂದ ನೋಡುತ್ತೇವೆ ಎನ್ನುತ್ತಾರೆ ಅವರು.

ಉದಾಹರಣೆಗೆ, ವಿಜ್ಞಾನವು ನಮಗೆ ಪರಿಶುದ್ಧವಾದ ತಾಜಾ ಗಾಳಿ ಎಷ್ಟು ಅಮೂಲ್ಯವಾದದ್ದು ಎಂಬುದನ್ನು ತಿಳಿಸಿ ಕೊಡುತ್ತದೆ. ಆದರೆ ನಮ್ಮ ಮನೆಯ ಕಿಟಕಿ ಬಾಗಿಲುಗಳು ಸದಾ ಮುಚ್ಚಿರುತ್ತವೆ. ನಾವೀಗ ಇಡೀ ಮೈಯನ್ನು ದಿನದ ಇಪ್ಪತ್ತನಾಲ್ಕು ತಾಸುಗಳ ಕಾಲವೂ ಬಟ್ಟೆ ಯಿಂದ ಆಚ್ಛಾದಿಸಿಕೊಳ್ಳು ತ್ತಿದ್ದೇವೆ. ಆದರೆ ನಿಜವಾದ ವೈಜ್ಞಾನಿಕ ದೃಷ್ಟಿಕೋನವಿದ್ದ ವರು, ವಿಜ್ಞಾನವನ್ನು ತಿಳಿ ದವರು ಹೀಗೆ ಮಾಡುವು ದಿಲ್ಲ. ತಾಜಾ ಗಾಳಿಗೆ, ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳದ ದೇಹ ತನ್ನ ಸತ್ವವನ್ನು ಕಳೆದುಕೊಳ್ಳುತ್ತದೆ ಎಂಬುದನ್ನು ಅವರು ತಿಳಿದುಕೊಂಡಿರುತ್ತಾರೆ, ಅಂತೆಯೇ ಬದುಕುತ್ತಾರೆ.

ಹಾಗೆಯೇ, ವೈಜ್ಞಾನಿಕ ದೃಷ್ಟಿಕೋನವುಳ್ಳ ಸಮಾಜದಲ್ಲಿ ಜನರು ಹತ್ತು ಮಹಡಿಗಳುಳ್ಳ, ಮುಚ್ಚಿದ ಕಿಟಕಿ- ಬಾಗಿಲುಗಳ ಮನೆಗಳನ್ನು ಕಟ್ಟುವುದಿಲ್ಲ. ನೆಲಕ್ಕೆ ಹತ್ತಿರವಾಗಿ, ತಾಜಾ ಗಾಳಿ ಬೆಳಕು ಓಡಿಯಾಡಲು ಸಮೃದ್ಧ ಅವಕಾಶವುಳ್ಳ ಮನೆಗಳನ್ನು ನಿರ್ಮಿಸುತ್ತಾರೆ. ಇದು ವಿಜ್ಞಾನವನ್ನು ಅದರ ನಿಜಾರ್ಥದಲ್ಲಿ ಅರಿತುಕೊಳ್ಳಬೇಕಾದ ಬಗೆ, ನಿಜವಾದ ವೈಜ್ಞಾನಿಕ ದೃಷ್ಟಿಕೋನ ಅಲ್ಲವೆ?

ನೈಜ ವಿಜ್ಞಾನ ಹೇಗೆಂದರೆ, ಅದು ನಮ್ಮ ಆರೋಗ್ಯವನ್ನು ಉತ್ತಮಪಡಿಸಬೇಕು, ಎಷ್ಟರಮಟ್ಟಿಗೆ ಎಂದರೆ, ವೈಜ್ಞಾನಿಕ ಜ್ಞಾನದ ಉತ್ಪನ್ನಗಳೇ ಆಗಿರುವ ಔಷಧಗಳ ಅಗತ್ಯ ನಮಗೆ ಬರಬಾರದು. ಎಲ್ಲ ಚಿಕಿತ್ಸೆಗಳೂ ಲಭ್ಯವಿವೆ, ಆದರೆ ಅವುಗಳ ಅಗತ್ಯ ಬೀಳು ತ್ತಿಲ್ಲ, ಎಲ್ಲರೂ ಅಷ್ಟು ಆರೋಗ್ಯವಂತರಾಗಿ ದ್ದಾರೆ. ಮಾರುಕಟ್ಟೆಯಲ್ಲಿ ಅತ್ಯುತ್ತಮ ಕನ್ನಡಕಗಳು ಲಭ್ಯವಿವೆ, ಆದರೆ ವೈಜ್ಞಾನಿಕ ಜ್ಞಾನವುಳ್ಳ ಜನರು ತಮ್ಮ ದೃಷ್ಟಿಯ ರಕ್ಷಣೆ ಯನ್ನು ಚೆನ್ನಾಗಿಯೇ ಮಾಡಿಕೊಳ್ಳುತ್ತಿದ್ದಾರೆ. ವಾಹನಗಳು, ರೈಲು, ವಿಮಾನ ಯಾನ ಇವೆ; ಆದರೆ ಅವುಗಳ ಉಪಯೋಗ ಅಗತ್ಯವಿದ್ದಾಗ ಮಾತ್ರ. ಏಕೆಂದರೆ ಜನರು ಆರೋಗ್ಯ ಕಾಪಾಡಿಕೊಳ್ಳುವುದಕ್ಕಾಗಿ ಕಾಲ್ನಡಿಗೆಯನ್ನೇ ಹೆಚ್ಚು ಆರಿಸಿಕೊಳ್ಳುತ್ತಾರೆ.

ರಾತ್ರಿಯ ಕೃತಕ ಬೆಳಕಿನ ಅಗತ್ಯ ಅತ್ಯಂತ ಕಡಿಮೆ. ಏಕೆಂದರೆ ಜನರು ಬೇಗನೆ ಉಂಡು ನಕ್ಷತ್ರಗಳ ಕೆಳಗೆ ಮಲಗುವುದು, ಬೆಳಗ್ಗೆ ಬೇಗನೆ ಏಳುವುದು ಹೆಚ್ಚು ಆರೋಗ್ಯಯುತ ಅಭ್ಯಾಸ ಎಂದು ಅರಿತುಕೊಂಡಿರುತ್ತಾರೆ. ನೈಜ ವೈಜ್ಞಾನಿಕ ಪ್ರಗತಿ ಎಂದರೆ ಹೀಗಿರಬೇಕು.

ಈಗ ವಿಜ್ಞಾನವು ಅಗಾಧವಾಗಿ ಬೆಳೆದಿದೆ ಯೇನೋ ನಿಜ; ಆದರೆ ವೈಜ್ಞಾನಿಕ ದೃಷ್ಟಿಕೋನ, ನಡವಳಿಕೆ ಇನ್ನೂ ವಿಸ್ತರಿಸಿಲ್ಲ ಎನ್ನುತ್ತಾರೆ ಆಚಾರ್ಯ ವಿನೋಬಾ ಭಾವೆಯವರು. ವಿಜ್ಞಾನವು ಮನುಕುಲದ ಒಳಿತಿಗಾಗಿ ಹೆಕ್ಕಿ ತೆಗೆದ ಸತ್ಯಾಂಶಗಳು ಜನರ ಜೀವನದಲ್ಲಿ ಹಾಸುಹೊಕ್ಕಾಗಿಲ್ಲ, ಜನಜೀವನ ವೈಜ್ಞಾನಿಕ ಮನೋಭಾವವನ್ನು ರಕ್ತಗತ ಮಾಡಿಕೊಂಡಿಲ್ಲ ಎನ್ನುತ್ತಾರೆ ಅವರು.

(ಸಂಗ್ರಹ)

LEAVE A REPLY

Please enter your comment!
Please enter your name here