Home ಧಾರ್ಮಿಕ ಸುದ್ದಿ “ಜೀರ್ಣೋದ್ಧಾರಕ್ಕೆ ಕೈಜೋಡಿಸಿ ಗತವೈಭವ ಮರುಕಳಿಸಲಿ’

“ಜೀರ್ಣೋದ್ಧಾರಕ್ಕೆ ಕೈಜೋಡಿಸಿ ಗತವೈಭವ ಮರುಕಳಿಸಲಿ’

1992
0
SHARE

ಕಟಪಾಡಿ: ದೇವಾಲಯ ಮತ್ತು ವಿದ್ಯಾಲಯಗಳು ಸುಸ್ಥಿರವಾಗಿದ್ದಲ್ಲಿ ಗ್ರಾಮವು ಸುಭಿಕ್ಷೆ ಯಿಂದ ಕೂಡಿರುತ್ತದೆ. ಪ್ರಾಚೀನ ದೇವಸ್ಥಾನದ ಜೀರ್ಣೋದ್ಧಾರದಲ್ಲಿ ಪಾಲ್ಗೊಳ್ಳುವ ಯೋಗ ಭಾಗ್ಯದ ಸತ್ಕಾರ್ಯ ಬಂದೊದಗಿದ್ದು, ಭಗವದ್ಭಕ್ತರೆಲ್ಲರೂ ಜೀರ್ಣೋದ್ಧಾರಕ್ಕೆ ಕೈಜೋಡಿಸುವ ಯೋಗ ಭಾಗ್ಯದ ಸತ್ಕಾರ್ಯದ ಮೂಲಕ ದೇವಾಲಯದ ಗತ ವೈಭವವನ್ನು ಮರುಕಳಿಸುವಂತೆ ಮಾಡಬೇಕು ಎಂದು ಶ್ರೀ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಕರೆ ನೀಡಿದರು.

ಡಿ. 14ರಂದು ಅಂದಾಜು 4.5 ಕೋ. ರೂ. ವೆಚ್ಚದಲ್ಲಿ ಸಮಗ್ರ ಜೀರ್ಣೋದ್ಧಾರ ಗೊಳ್ಳಲಿರುವ ಉದ್ಯಾವರ ಕೇದಾರ್‌ ಶ್ರೀ ಬ್ರಹ್ಮೆಶ್ವರ ಮಹಾಲಿಂಗೇಶ್ವರ ದೇವಸ್ಥಾನ ಶ್ರೀ ಹರಿಹರ ಪುಣ್ಯಕ್ಷೇತ್ರದಲ್ಲಿ ಶಿಲಾಮುಹೂರ್ತ ನೆರವೇರಿಸಿ, ಅನಂತರ ನಡೆದ ಧಾರ್ಮಿಕ ಸಭೆಯಲ್ಲಿ ಮನವಿ ಪತ್ರ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿ ಮಾತನಾಡಿದರು.

ದೇವಸ್ಥಾನದ ತಂತ್ರಿಗಳಾದ ವೇ|ಮೂ| ಕೃಷ್ಣಮೂರ್ತಿ ತಂತ್ರಿ ಮಾತನಾಡಿ, ಭಕ್ತರ ಸಂಪೂರ್ಣ ಸಹಕಾರದೊಂದಿಗೆ ಡಿ.27, 28ರಂದು ಸಾನ್ನಿಧ್ಯ ಸಂಕೋಚ, ಬಾಲಾಲಯ ಪ್ರತಿಷ್ಠೆ, ಜ.18ಕ್ಕೆ ಷಢಾಧಾರ ಪೂರ್ವಕ ಶಿಲಾನ್ಯಾಸ ನಿಗದಿಪಡಿಸಲಾಗಿದ್ದು ಭಗವದ್‌ ಪ್ರೀತ್ಯರ್ಥವಾಗಿ ಎಲ್ಲರೂ ಜೀರ್ಣೋದ್ಧಾರ ಪ್ರಕ್ರಿಯೆಯಲ್ಲಿ ತೊಡಗಿಸುವಂತೆ ಕೋರಿಕೊಂಡರು.

ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ,ಮಾಜಿ ಶಾಸಕ ವಿನಯ ಕುಮಾರ್‌ ಸೊರಕೆ ಮಾತನಾಡಿ, ಸ್ವಾಮೀಜಿಗಳು ಶಿಲಾನ್ಯಾಸ ನೆರವೇರಿಸುವ ಮೂಲಕ ಸಮಸ್ತರಲ್ಲಿ ಭರವಸೆ ಮತ್ತು ಆತ್ಮಸ್ಥೈರ್ಯವನ್ನು ತುಂಬಿಸಿದ್ದಾರೆ ಎಂದರು.

ಉದ್ಯಾವರ ಹಲಿಮಾ ಸಾಬು ಟ್ರಸ್ಟ್‌ ಅಧ್ಯಕ್ಷ ಹಾಜಿ ಅಬ್ದುಲ್‌ ಜಲೀಲ್‌ ಸಾಹೇಬ್‌ ಅವರು ತಮ್ಮ ಹೆತ್ತವರ ನೆನಪಿಗಾಗಿ ದೇಣಿಗೆಯನ್ನು ಘೋಷಿಸಿದರು. ಅಧ್ಯಕ್ಷತೆ ವಹಿಸಿದ್ದ
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರವೀಣ್‌ ಶೆಟ್ಟಿ ಕೊರಂಗ್ರಪಾಡಿ ಶುಭ ಹಾರೈಸಿದರು.

ಈ ಸಂದರ್ಭ ದೇವಸ್ಥಾನದ ಪುನರ್ನಿರ್ಮಾಣ ಉಪಕ್ರಮ – “ನಿಮ್ಮಲ್ಲಿ ನಮ್ಮ ನಿವೇದನೆ’ ಪತ್ರವನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ಜೀಣೋದ್ಧಾರ
ಸಮಿತಿಯ ಗೌರವಾಧ್ಯಕ್ಷ ಯು. ವಾದಿರಾಜ ಆಚಾರ್ಯ ಮೇಲ್ಮಠ, ಅರ್ಚಕ ಸುಧೀಂದ್ರ ಉಪಾಧ್ಯ, ತಾ.ಪಂ. ಸದಸ್ಯೆ ರಜನಿ ಆರ್‌. ಅಂಚನ್‌, ಉದ್ಯಾವರ ಗ್ರಾ. ಪಂ. ಅಧ್ಯಕ್ಷೆ ಸುಗಂಧಿ ಶೇಖರ್‌, ಉದ್ಯಾವರ ಶಂಭುಕಲ್ಲು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪಠೇಲರ ಮನೆ ಉಲ್ಲಾಸ್‌ ಶೆಟ್ಟಿ, ಎಂಜಿನಿಯರ್‌ ತ್ರಿವಿಕ್ರಮ ಭಟ್‌, ಶಿಲ್ಪಿ ಅಶೋಕ್‌ ಕಾರ್ಕಳ, ವಾಸ್ತು ಸಲಹೆಗಾರ ಸದಾನಂದದಾಸ್‌ ವೇದಿಕೆಯಲ್ಲಿದ್ದರು.

ವ್ಯವಸ್ಥಾಪನ ಸಮಿತಿ ಹಾಗೂ ಜೀರ್ಣೋದ್ಧಾರದ ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಭಕ್ತರು ಉಪಸ್ಥಿತರಿದ್ದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶೇಖರ್‌ ಕೆ. ಕೋಟ್ಯಾನ್‌ ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ / ವೀರವಿಟ್ಠಲ ದೇವಸ್ಥಾನದ ಮೊಕ್ತೇಸರ ನಾಗೇಶ್‌ ಕಾಮತ್‌ ಪ್ರಸ್ತಾವನೆಗೈದರು. ಕಾರ್ಯದರ್ಶಿಗಳಾದ ಅನೂಪ್‌ ಕುಮಾರ್‌ ವಂದಿಸಿದರು.ಸುರೇಶ್‌ ಸಿ. ಸಾಲ್ಯಾನ್‌ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here