ವಿಟ್ಲ : ವಿಟ್ಲ ಸೀಮೆಯ ಡೊಂಬ ಹೆಗ್ಗಡೆ ಅರಸು ಮನೆತನದ ಪಾರ್ಥಂಪಾಡಿ ಚಾವಡಿಯ ಪಟ್ಟದ ದೈವ ಶ್ರೀ ಜಠಾಧಾರಿ ದೈವದ ದೈವಸ್ಥಾನ, ಶ್ರೀ ನಾಗ ಸಾನ್ನಿಧ್ಯ ಮತ್ತು ಗುಳಿಗನ (ರಾಜನ್ ದೈವ) ಕಟ್ಟೆಗಳು ಪುನರ್ ನಿರ್ಮಾಣಗೊಂಡಿದ್ದು, ಗುರುವಾರ ಸ್ಥಾನ ಪ್ರದಾನ, ಪುನಃಪ್ರತಿಷ್ಠೆ ನೆರವೇರಿತು.
ಕುಂಟುಕುಡೇಲು ರಘುರಾಮ ತಂತ್ರಿ ಗಳ ನೇತೃತ್ವದಲ್ಲಿ ಸ್ಥಾನ ಪ್ರದಾನ, ಪುನಃ ಪ್ರತಿಷ್ಠೆ, ಶಿಖರ ಕಲಶ ಪ್ರತಿಷ್ಠೆ ನೆರವೇರಿಸ ಲಾಯಿತು. ವಿಟ್ಲ ಅರಮನೆಯ ವಿ. ಜನಾರ್ದನ ವರ್ಮ ಅರಸರು,
ಶ್ರೀ ಜಠಾಧಾರಿ ದೈವದ ದೈವಸ್ಥಾನದಲ್ಲಿ ಶಿಖರ ಕಲಶ ಪ್ರತಿಷ್ಠೆ ಹಾಗೂ ಗುಳಿಗನ (ರಾಜನ್ ದೈವ) ಕಟ್ಟೆಯ ಸ್ಥಾನ ಪ್ರದಾನ ನಡೆಯಿತು.