Home ಧಾರ್ಮಿಕ ಸುದ್ದಿ ಮಾನವೀಯ ಕಳಕಳಿಯ ಜನ್ಮಾಷ್ಟಮಿ

ಮಾನವೀಯ ಕಳಕಳಿಯ ಜನ್ಮಾಷ್ಟಮಿ

2332
0
SHARE

ಉಡುಪಿ: ಜನ್ಮಾಷ್ಟಮಿ ಅಂದರೆ ವಿಶಿಷ್ಟಗಳ ಕಲರವ. ಲೀಲೋತ್ಸವದ ಸೊಬಗನ್ನು ಅಸ್ವಾದಿಸಲು ಸೇರಿರುವ ಜನಸಾಗರ. ಅಪ್ಪನ ಹೆಗಲ ಮೇಲೆ ಕೂತು ಉತ್ಸವದ ಮೆರಗನ್ನು ನೋಡುವ ಪುಟ್ಟ ಮಗುವಿನ ನೋಟ. ಇದನ್ನೆಲ್ಲ ಸೆರೆಹಿಡಿಯಲು ಕಾಯುವ ಛಾಯಾಗ್ರಾಹಕನ ಕ್ಯಾಮರಾ ಕಣ್ಣು. ಮನೋರಂಜನೆಯೊಂದಿಗೆ ಮಾನವೀಯತೆಯನ್ನು ಸಾರುವ ನಾನಾ ವೇಷಧಾರಿಗಳು.

ಉಡುಪಿಯ ಬೀದಿಯಲ್ಲಿ ಮಳೆಯನ್ನು ಲೆಕ್ಕಿಸದೆ ಒಂದಿಷ್ಟು ವಿವಿಧ ವೇಷಗಳ ತಂಡಗಳು ಆರ್ಥಿಕವಾಗಿ ಚಿಕಿತ್ಸೆ ನೆರವನ್ನು ನೀಡಲು ಧನಸಂಗ್ರಹ ಮಾಡುತ್ತಿದ್ದಾರೆ. ಉಡುಪಿಯ ಯಂಗ್ ಫ್ರೆಂಡ್ಸ್ ಡಯಾನ ಎನ್ನುವ ತಂಡ ವಿಶಿಷ್ಟವಾದ ವೇಷವನ್ನು ಧರಿಸಿ ‘ವೇಷಕ್ಕೊಂದು ಮಾನವೀಯ ಅರ್ಥ’ ಎನ್ನುವ ಪರಿಕಲ್ಪನೆಯನ್ನು ಇಟ್ಟುಕೊಂಡು ಅನಾರೋಗ್ಯ ಪೀಡಿತ ಎರಡು ಪುಟ್ಟ ಮಕ್ಕಳ ಚಿಕಿತ್ಸೆ ನೆರವನ್ನು ನೀಡಲು ಮುಂದಾಗಿದೆ.

ಕಳೆದ ವರ್ಷದಂತೆ ಈ ವರ್ಷವೂ ವೇಷಧಾರಿಯಾಗಿ ಅನಾರೋಗ್ಯ ಪೀಡಿತ ಮಕ್ಕಳಿಗೆ ನೆರವಾಗುವ ಇವರ ಕಾಯಕಲ್ಪಕ್ಕೆ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದ್ದು.

ಚರ್ಮ ರೋಗದಿಂದ ತತ್ತರಿಸುತ್ತಿರುವ ಮೂಡುಬಿದಿರೆಯ ಪಣಪಿಲ ಗ್ರಾಮದ ಮೂರು ವರ್ಷದ ಲಾವಣ್ಯ ಎನ್ನುವ ಪುಟ್ಟ ಮಗುವಿನ ಚಿಕಿತ್ಸೆಗೆ ಆರ್ಥಿಕವಾಗಿ ನೆರವಾಗುತ್ತಿದೆ ಈ ಯಂಗ್ ಫ್ರೆಂಡ್ಸ್ ತಂಡ.ಇದರ ಜೊತೆಗೆ ಉಡುಪಿಯ ಹೂಡೆ ಕದಿಕೆಯ ನಾಲ್ಕು ವರ್ಷದ ಜೀವನ್ ರಕ್ತ ಕ್ಯಾನ್ಸರ್ ಪೀಡಿಗಿನಿಂದ ನರಳುತ್ತಿದ್ದಾನೆ.ಇವನ ಚಿಕಿತ್ಸೆಗೆ ನೆರವಾಗುವ ನಿಟ್ಟಿನಲ್ಲಿ ಯಂಗ್ ಫ್ರೆಂಡ್ಸ್ ಡಯಾನ ತಂಡದ ಸದಸ್ಯರು ನಗರದ ನಾನಾ ಬೀದಿಯಲ್ಲಿ ಸಹಾಯದ ಧನದ ಡಬ್ಬಿ ಹಿಡಿದು ಮಾನವೀತೆಯನ್ನು ಸಾರುತ್ತಿದ್ದಾರೆ.ಇಂಥ ವೇಷಧಾರಿಗಳ ಪ್ರಯತ್ನಕ್ಕೆ ‌ನಾವು ನೀವೂ ಕೈ ಜೋಡಿಸಿಕೊಂಡು ವೇಷಕ್ಕೊಂದು ಮಾನವೀಯತೆಯ ಅರ್ಥವನ್ನು ಕೊಡುವ.

ಸುಹಾನ್ ಶೇಕ್

LEAVE A REPLY

Please enter your comment!
Please enter your name here