Home ಧಾರ್ಮಿಕ ಸುದ್ದಿ ಜನ್ಮಾಷ್ಟಮಿಯಂದು ರಾತ್ರಿ 11.48ಕ್ಕೆ ಅರ್ಘ್ಯಪ್ರದಾನ

ಜನ್ಮಾಷ್ಟಮಿಯಂದು ರಾತ್ರಿ 11.48ಕ್ಕೆ ಅರ್ಘ್ಯಪ್ರದಾನ

1614
0
SHARE

ಉಡುಪಿ: ಶ್ರೀ ಕೃಷ್ಣಮಠದಲ್ಲಿ ಸೆ.2, 3ರಂದು ಅದ್ದೂರಿಯಾಗಿ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ನಡೆಯಲಿದೆ. ಈ ಎರಡು ದಿನ ಭಜನೆ ಅರ್ಚನೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮ ಉತ್ಸವಗಳು ಜರಗಲಿದೆ.

ಜನ್ಮಾಷ್ಟಮಿಯ ದಿನ ಕೃಷ್ಣಮಠದಲ್ಲಿ ಶ್ರೀಕೃಷ್ಣನಿಗೆ ಮೂರು ಹೊತ್ತು ಲಕ್ಷ ತುಳಸಿ ಅರ್ಚನೆ ನಡೆಯಲಿದೆ. ಸಂಜೆ ಜನ್ಮಾಷ್ಟಮಿಯ ವಿಶೇಷ ಪೂಜೆಗಳು ನಡೆಯಲಿದೆ. ಜನ್ಮಾಷ್ಟಮಿಗೆ ಚಂದ್ರೋದಯದ ಸಂದರ್ಭ ಅರ್ಘ್ಯಪ್ರದಾನ ನಡೆಯಲಿವೆ. ಅಂದು ರಾತ್ರಿ 11.48ಕ್ಕೆ ಚಂದ್ರೋದಯವಾಗಲಿದ್ದು. ಚಂದ್ರೋದಯಕ್ಕೆ ಪೂರ್ವದಲ್ಲಿ ದೇವರಿಗೆ ಅರ್ಘ್ಯಪ್ರದಾನ ನಡೆಯಲಿದೆ. ಆ ಬಳಿಕ ಚಂದ್ರೋದಯದ ಸಮಯದಲ್ಲಿ ತುಳಸಿ ಗಿಡದ ಬಳಿ ಬಂದು ಚಂದ್ರನ ದರ್ಶನ ಮಾಡಿ ಅಘÂì ಪ್ರದಾನ ಮಾಡಲಾಗುತ್ತದೆ.

ವಿಟ್ಲಪಿಂಡಿಯಂದು ಇಸ್ಕಾನ್‌ ಅವರಿಂದ ನಿರಂತರ ಭಜನ ನಡೆಯಲಿದೆ. ದೈನಂದಿನ ಪೂಜೆಗಳು ಲಕ್ಷ ತುಳಸಿ ಅರ್ಚನೆ ನಡೆಯಲಿದ್ದು ಮಧ್ಯಾಹ್ನ 3ಕ್ಕೆ ಉತ್ಸವ ಆರಂಭಗೊಳ್ಳಲಿದೆ. ರಥದಲ್ಲಿ ಶ್ರೀಕೃಷ್ಣನ ಮೂರ್ತಿಯನ್ನು ರಥಬೀದಿಗೆ ಒಂದು ಸುತ್ತು ಪ್ರದಕ್ಷಿಣೆ ತಂದು, ಅನಂತರ ಆ ಮೂರ್ತಿಯನ್ನು ಮಧ್ವಸರೋವರದಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಈಗ ಚಾತುರ್ಮಾಸ್ಯವ್ರತವಾದ ಕಾರಣ ಉತ್ಸವ ಮೂರ್ತಿಯನ್ನು ಗರ್ಭಗುಡಿಯ ಹೊರಗೆ ತರುವುದಿಲ್ಲ. ಹೀಗಾಗಿ ಮಣ್ಣಿನ ಮೂರ್ತಿಗೆ ಪೂಜೆ ಸಲ್ಲಿಸಿ ಅದನ್ನು ಉತ್ಸವದಲ್ಲಿ ತರಲಾಗುವುದು.

ಅಡಿಕೆ ಕಂಬಕ್ಕೆ ಈ ಬಾರಿ ಅವಕಾಶ
ಮಠದ ಸಂಪ್ರದಾಯದಂತೆ ಕನಕ ಗೋಪುರದೆದುರು ಅಡಿಕೆ ಮರದ ಕಂಬವನ್ನು ನೆಟ್ಟು ಎಣ್ಣೆ ಹಚ್ಚಿ ಕಂಬವನ್ನೇರುವ ಸ್ಪರ್ಧೆ ನಡೆಯುತ್ತಿತ್ತು. ಈ ಹಿಂದೆ ನಡೆದ ಅಹಿತಕರ ಘಟನೆಯಿಂದ ಅದನ್ನು ನಿಲ್ಲಿಸಲಾಗಿತ್ತು. ಆದರೆ ಈ ಬಾರಿ ಈ ಸಂಪ್ರದಾಯ ನಡೆಯಲಿದೆ ಎಂದು ಪರ್ಯಾಯ ಪಲಿಮಾರು ಶ್ರೀಗಳು ತಿಳಿಸಿದ್ದಾರೆ.

20ಸಾವಿರ ಜನರಿಗೆ ಅನ್ನಸಂತರ್ಪಣೆ

ಜನ್ಮಾಷ್ಟಮಿಯಂದು ಸುಮಾರು 20ಸಾವಿರ ಜನರಿಗೆ ಅನ್ನಸಂತರ್ಪಣೆಗೆ ಸಿದ್ಧತೆ ನಡೆಸಲಾಗಿದೆ. ಉತ್ಸವ ಸಂದರ್ಭ ಹಂಚಲು 20ಬಗೆಯ ಉಂಡೆ ಚಕ್ಕುಲಿಯನ್ನು ಹಂಚಲಾಗುತ್ತದೆ. ಶ್ರೀಕೃಷ್ಣಮಠದ ಚಿಣ್ಣರ ಸಂತರ್ಪಣೆ ಶಾಲೆಗಳಿಗೂ ಕೂಡ ಇದನ್ನು ಹಂಚಲಾಗುತ್ತಿದೆ. ಸುಮಾರು 120 ಶಾಲೆಗಳಿಗೆ ಇದನ್ನು ಹಂಚಲಾಗುತ್ತದೆ. ಈ ಬಾರಿ ಪ್ರವಾಹದಿಂದ ಕೊಡಗು ಮತ್ತು ಸಕಲೇಶಪುರಗಳಲ್ಲಿ ಸಾಕಷ್ಟು ಹಾನಿಯಾದ ಹಿನ್ನೆಲೆ ದೂರದೂರಿನ ಪ್ರವಾಸಿಗರು ಬರುವುದು ಅನುಮಾನವಾದ ಕಾರಣ ಉತ್ಸವಕ್ಕೆ ಪ್ರವಾಸಿಗರ ಕೊರತೆ ಉಂಟಾಗಲೂಬಹುದು.

LEAVE A REPLY

Please enter your comment!
Please enter your name here