Home ಧಾರ್ಮಿಕ ಸುದ್ದಿ ಜ. 25-29: ಮಾಣಿಬೈಲು ದೈವಸ್ಥಾನದ ಬ್ರಹ್ಮಕಲಶೋತ್ಸವ

ಜ. 25-29: ಮಾಣಿಬೈಲು ದೈವಸ್ಥಾನದ ಬ್ರಹ್ಮಕಲಶೋತ್ಸವ

1520
0
SHARE

ಸುಬ್ರಹ್ಮಣ್ಯ: ಶ್ರೀ ನಾಗದೇವರು, ಪೂಮಾಣಿ-ಕಿನ್ನಿಮಾಣಿ ದೈಯರು, ಶಿರಾಡಿ ದೈವ, ಪುರುಷ ದೈವ, ವರ್ಣಾರ ಪಂಜುರ್ಲಿ, ಶ್ರೀರಕ್ತೇಶ್ವರಿ ದೈವಗಳ ಸಾನಿಧ್ಯ ಮಾಣಿಬೈಲು ಇದರ ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಮತ್ತು ಸಭಾ ಕಾರ್ಯಕ್ರಮಗಳೊಂದಿಗೆ ಜ. 25ರಿಂದ 29ರ ತನಕ ನಡೆಯಲಿದೆ ಎಂದು ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲೊಕೇಶ್‌ ಬಿ.ಎನ್‌. ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಜ. 25ರಂದು ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಗಳು ಆಗಮಿಸಲಿರುವರು. ಅವರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಿದ ಬಳಿಕ ಶ್ರೀಗಳ ಪಾದಪೂಜೆ, ಆಶೀರ್ವಚನ ನಡೆಯಲಿದೆ. ಬಳಿಕ ಪ್ರಾಸಾದ ಪರಿಗ್ರಹ, ಅನ್ನಸಂತರ್ಪಣೆ ನಡೆಯಲಿದೆ. ಜ. 26ಕ್ಕೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ಆಗಮನ, ಪೂರ್ಣ ಕುಂಭ ಸ್ವಾಗತ, ರಾತ್ರಿ ದೇವತಾ ಪ್ರಾರ್ಥನೆ, ಆಚಾರ್ಯವರಣೆ, ಸ್ವಸ್ತಿ ಪುಣ್ಯಾಹವಾಚನ, ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾ ಬಲಿ, ನೂತನ ಬಿಂಬ ಜಲಾವಾಸ, ಪ್ರಾಕಾರ ಬಲಿ, ಪ್ರಸಾದ ವಿತರಣೆ ನಡೆಯಲಿದೆ.

ಜ. 27ರಂದು ಮಹಾಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ಕುಂಭಪೂಜೆ ಬಳಿಕ ಶ್ರೀ ಉಳ್ಳಾಕುಲು, ಶಿರಾಡಿ ದೈವ, ಪುರುಷ ದೈವ, ವರ್ಣಾರ ಪಂಜುರ್ಲಿ, ಶ್ರೀರಕ್ತೇಶ್ವರಿ ಹಾಗೂ ಪರಿವಾರ ದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ತಂಬಿಲ ಸೇವೆ, ಮಂಗಳಾರತಿ, ಪ್ರಸಾದ ವಿತರಣೆಯಾಗಲಿದೆ.

ಅಂದು ನಡೆಯುವ ಸಭಾ ಕಾರ್ಯ ಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲೊಕೇಶ್‌ ಬಿ.ಎನ್‌. ಅಧ್ಯಕ್ಷತೆ ವಹಿಸುವರು. ಶಾಸಕ ಎಸ್‌. ಅಂಗಾರ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಮಂಗಳೂರು ದ.ಕ.ಜಿ.ಸ. ಬ್ಯಾಂಕ್‌ ನಿರ್ದೇಶಕ ದೇವರಾಜ್‌ ಕೆ.ಎಸ್‌., ಸುಬ್ರಹ್ಮಣ್ಯ ಗ್ರಾ.ಪಂ. ಅಧ್ಯಕ್ಷೆ ಸುಶೀಲಾ ಹೊಸಮನೆ ಅತಿಥಿಗಳಾಗಿರುವರು.

ಸಂಜೆ ಶ್ರೀ ದುರ್ಗಾ ಭಜನಾ ಮಂಡಳಿ ಮರಕತ, ನಡುಗಲ್ಲು ಅವರಿಂದ ಭಜನ ಕಾರ್ಯ ಕ್ರಮ, ಬಳಿಕ ಉಳ್ಳಾಕುಲು ದೈವದ ಭಂಡಾರ ತೆಗೆಯುವುದು, ಅನಂತರ ಸುಬ್ರಹ್ಮಣ್ಯದ ಯಜ್ಞೇಶ್‌ ಆಚಾರ್‌ ಮತ್ತು ಬಳಗದವರಿಂದ ಸಂಗೀತ ಕಾರ್ಯಕ್ರಮ, ಅನ್ನ ಸಂತರ್ಪಣೆ ನಡೆಯಲಿದೆ. ಶ್ರೀ ಗೋಪಾಲ ಕೃಷ್ಣ ಯಕ್ಷಗಾನ ತಂಡ ಮುಗುಳಿ ಮತ್ತು ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆ ಯಿಂದ ಶ್ರೀದೇವಿ ಮಹಿಷಮರ್ದಿನಿ ಯಕ್ಷಗಾನ ಬಯಲಾಟ ನಡೆಯಲಿದೆ.

ಜ. 28ಕ್ಕೆ ಪೂಮಾಣಿ ದೈವದ ನೇಮ, ಕಿನ್ನಿಮಾಣಿ ದೈವದ ನೇಮ, ಅನ್ನಸಂತರ್ಪಣೆ, ಶಿರಾಡಿ ದೈವ ಮತ್ತು ಗಿಣಿರಾಮ ದೈವದ ನೇಮ, ರಾತ್ರಿ ವರ್ಣಾರ ಪಂಜುರ್ಲಿ ದೈವದ ನೇಮ, ಅನ್ನಸಂತರ್ಪಣೆ, ರಕ್ತೇಶ್ವರಿ ಮತ್ತು ಗುಳಿಗ ದೈವದ ನೇಮ, ಬಳಿಕ ಪುರುಷ ದೈವದ ನೇಮ ನಡೆಯಲಿದೆ. ಜ. 29ರಂದು ಮಲೆಚಾಮುಂಡಿ, ಕೂಜಿಗ ಮತ್ತು ರಾಹು-ಗುಳಿಗ ದೈವಗಳಿಗೆ ತಂಬಿಲ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿರುವುದು ಎಂದವರು ತಿಳಿಸಿದರು. ಜೀರ್ಣೋದ್ಧಾರ ಸಮಿತಿ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿದ್ದರು.

LEAVE A REPLY

Please enter your comment!
Please enter your name here