ಮಲ್ಪೆ: ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ಶ್ರೀ ಮನ್ಮಹಾರಥೋತ್ಸವ ಮಹಾರಂಗಪೂಜೆ, ಢಕ್ಕೆಬಲಿ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ದೇಗುಲದ ಪ್ರಧಾನ ತಂತ್ರಿ ವೇ. ಮೂ. ಪುತ್ತೂರು ಹಯವದನ ತಂತ್ರಿಗಳ ನೇತೃತ್ವದಲ್ಲಿ ಜ. 18ರಿಂದ ಜ. 26ರವೆರೆಗೆ ನಡೆಯಲಿದೆ.
ಆ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಜ. 18, 19 ಮತ್ತು ಜ. 20ರಂದು ಸಂಜೆ 6.40ಕ್ಕೆ ರಾತ್ರಿ ಬಲಿ, ಓಲಗ ಮಂಟಪ ಪೂಜೆ, ಜ. 21ರಂದು ಕಾನಂಗಿ ರಾಯರ ಮನೆಯಿಂದ ಹೂಕಾಯಿ ಮೆರವಣಿಗೆ, ಚಂದ್ರಮಂಡಲೋತ್ಸವವಾಗಿ ಮಹಾರಂಗಪೂಜೆ ನಡೆಯಲಿದೆ. ಜ. 22ರಂದು ಸಂಜೆ ಪೀಠ ಪೂಜೆ, ರಾತ್ರಿ ಬಲಿ, ಗ್ರಾಮಕಟ್ಟೆಪೂಜೆ ನೇರವೇರಲಿದೆ.
ಜ. 23: ರಥೋತ್ಸವ
ಜ. 23ರಂದು ಬೆಳಗ್ಗೆ ರಥಾರೋಹಣ, ಮಧ್ಯಾಹ್ನ 12.30ರಿಂದ ಮಹಾ ಅನ್ನಸಂತರ್ಪಣೆ, ರಾತ್ರಿ ಮಹಾರಥೋತ್ಸವ, ದರ್ಶನ ಸೇವೆ, ತೊಟ್ಟಿಲೋತ್ಸವ, ಭೂತಬಲಿ, ಶಯನೋತ್ಸವ, ಕವಾಟ ಬಂಧನ ನಡೆಯಲಿದೆ. ಜ. 24ರಂದು ಬೆಳಗ್ಗೆ ಕವಾಟೋದ್ಘಾಟನೆ, ತುಲಭಾರ ಸೇವೆ, ಮಧ್ಯಾಹ್ನ ಕಟ್ಟೆಪೂಜೆ, ಸಂಜೆ ತೆಪ್ಪೋತ್ಸವ, ಜ. 25ರಂದು ಶ್ರೀ ವರಮಹಾಲಕ್ಷ್ಮೀ ಪೂಜೆ, ಮಹಾ ಮಂತ್ರಾಕ್ಷತೆ, ಜ. 26ರಂದು ಬೆಳಗ್ಗೆ ನಾಗಬನದಲ್ಲಿ ಆಶ್ಲೇಷಾ ಬಲಿ, ರಾತ್ರಿ ಹಾಲಿಟ್ಟು ಸೇವೆ ಮತ್ತು ಬ್ರಹ್ಮಮಂಡಲ- ಢಕ್ಕೆಬಲಿ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ
ಜ. 18ರಂದು ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ, ಅಂದು ರಾತ್ರಿ. 7.30ಕ್ಕೆ ಕೊಡವೂರು ಸುಮನಸಾ ತಂಡದಿಂದ ಪ್ರಶಸ್ತಿ ವಿಜೇತ ಕನ್ನಡ ನಾಟಕ ಅವ್ವ, ಜ. 19ರಂದು ರಾತ್ರಿ 8ಕ್ಕೆ ವಿದ್ವಾನ್ ಸುಧೀರ್ ಕೊಡವೂರು ಮತ್ತು ವಿದುಷಿ ಮಾನಸಿ ಸುಧೀರ್ ನೇತೃತ್ವದ ನೃತ್ಯನಿಕೇತನ ಕೊಡವೂರು ಕಲಾವಿದರಿಂದ ಭರತನಾಟ್ಯ ಮತ್ತು ನೃತ್ಯನಾಟಕ ಚಿತ್ರಾ, ಜ. 20ರಂದು ಸಂಜೆ 5. 30ಕ್ಕೆ ಸುರೇಖಾ ಪರ್ಕಳ ಹಾಗೂ ತಂಡದವರಿಂದ ಭಕ್ತಿಗಾನ ಲಹರಿ, ಜ. 21ರಂದು ಸಂಜೆ 4.30ಕ್ಕೆ ವಿದ್ವಾನ್ ಅನಂತಕೃಷ್ಣ ಆಚಾರ್ಯ ಅವರಿಂದ ಪ್ರವಚನ, 5.30ಕ್ಕೆ ಭಜನಾ ಸಾಮ್ರಾಟ್ ಯು. ನಾಗರಾಜ್ ಶೇಟ್ ಮತ್ತು ಬಳಗದವರಿಂದ ಭಕ್ತಿಗಾನ ಸಿಂಚನ, ಜ.22ರಂದು ರಾತ್ರಿ 7.30ಕ್ಕೆ ಸೃಷ್ಠಿ ನೃತ್ಯಕಲಾ ಕುಟೀರ ಉಡುಪಿ ಅವರಿಂದ ನೃತ್ಯರಾಧನಾ, 23ರಂದು ಬೆಳಗ್ಗೆ 11ಕ್ಕೆ ಸದಾನಂದ ಸೇರಿಗಾರ್ ಮತ್ತು ಬಳಗ ಕೊಡವೂರು ಅವರಿಂದ ಸ್ಯಾಕ್ಸೋಫೋನ್ ವಾದನ, ಸಂಜೆ 5.30ಕ್ಕೆ ಜಯಶ್ರೀ ಅರವಿಂದ್ ಹಾಗೂ ಬಳಗ, ಬೆಂಗಳೂರು ಅವರಿಂದ ಭಕ್ತಿಗಾನ ಸುಧೆ, ಈ ಸಂದರ್ಭದಲ್ಲಿ ನಿರಂತರ 28 ವರ್ಷಗಳಿಂದ ಸಂಗೀತ ಸೇವೆಯನ್ನು ಶ್ರೀ ದೇವಳದಲ್ಲಿ ಉಚಿತವಾಗಿ ನಡೆಸಿ ಕೊಡುತ್ತಿರುವ ಅರವಿಂದ ಕಿಗ್ಗಾಲ್ ಮತ್ತು ಜಯಶ್ರೀ ಅರವಿಂದ್ ಬೆಂಗಳೂರು ಅವರಿಗೆ ಶ್ರೀ ಶಂಕರನಾರಾಯಣಾನುಗ್ರಹ ಪ್ರಶಸ್ತಿ ಪ್ರಧಾನ ನಡೆಯಲಿರುವುದು. ಜ. 24ರಂದು ರಾತ್ರಿ 9.30ಕ್ಕೆ ಬಪ್ಪನಾಡು ಮೇಳದವರಿಂದ ಬೊಳ್ಳಿದ ಬೊಲುಗಡೆ ತುಳು ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.