Home ಧಾರ್ಮಿಕ ಕಾರ್ಯಕ್ರಮ ಮೇ 16: ಜಲಂಚಾರು ಶ್ರೀ ಮಹಾಲಿಂಗೇಶ್ವರ ವಾರ್ಷಿಕ ಮಹೋತ್ಸವ

ಮೇ 16: ಜಲಂಚಾರು ಶ್ರೀ ಮಹಾಲಿಂಗೇಶ್ವರ ವಾರ್ಷಿಕ ಮಹೋತ್ಸವ

289
0
SHARE

ಕಾಪು: ಸುಮಾರು 4.50 ಕೋ. ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡು, ಬ್ರಹ್ಮಕಲಶೋತ್ಸವ ಸಂಪನ್ನಗೊಂಡಿರುವ ಜಲಂಚಾರು ಶ್ರೀ ಮಹಾಲಿಂಗೇಶ್ವರ ಮತ್ತು ಮಹಾಗಣಪತಿ ದೇವಸ್ಥಾನದ ವಾರ್ಷಿಕ ಮಹೋತ್ಸವವು ವೇ| ಮೂ| ಕಳತ್ತೂರು ಉದಯ ತಂತ್ರಿಗಳ ನೇತೃತ್ವದಲ್ಲಿ ಮೇ 16ರಂದು ಜರಗಲಿರುವುದು.

ಆ ಪ್ರಯುಕ್ತ ಮೇ 15ರಂದು ಸಂಜೆ ಪ್ರಾರ್ಥನೆ ಮತ್ತು ವಸಂತ ಪೂಜೆ ನಡೆಯಲಿದೆ. ಮೇ 16ರಂದು ಬೆಳಗ್ಗೆ 9 ಗಂಟೆಗೆ ಕಲಶಾಭಿಷೇಕ, 11ಕ್ಕೆ ಮಹಾಪೂಜೆ, 12.30ರಿಂದ ಅನ್ನಸಂತರ್ಪಣೆ, ರಾತ್ರಿ 8 ಗಂಟೆಗೆ ಮಹಾರಂಗಪೂಜೆ, ಭಜನಾ ಕಾರ್ಯಕ್ರಮ, 10 ಗಂಟೆಗೆ ಉತ್ಸವ ಬಲಿ ನಡೆಯಲಿದೆ.

ಮೇ 17ರಂದು ರಾತ್ರಿ 7.30ಕ್ಕೆ ತಪ್ಪಂಗಾಯಿ ಬಲಿ, ಮೇ 18ರಂದು ಬೆಳಗ್ಗೆ 8 ಗಂಟೆಗೆ ಸಂಪ್ರೋಕ್ಷಣೆ, 9 ಗಂಟೆಯಿಂದ ಸಾಮೂಹಿಕ ಆಶ್ಲೇಷಾ ಬಲಿ, 11.30ಕ್ಕೆ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಪಂಜಿತ್ತೂರುಗುತ್ತು ರವಿರಾಜ ಶೆಟ್ಟಿ ಮತ್ತು ಅನುವಂಶಿಕ ಆಡಳಿತ ಮೊಕ್ತೇಸರ ಗೋಪಾಲ ಶೆಟ್ಟಿ ಪಂಜಿತ್ತೂರುಗುತ್ತು ಹಾಗೂ ಸಮಿತಿಯ ಪದಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here