Home ಧಾರ್ಮಿಕ ಸುದ್ದಿ ಆಮಂತ್ರಣ ಪತ್ರಿಕೆ ಬಿಡುಗಡೆ, ಕಚೇರಿ ಉದ್ಘಾಟನೆ

ಆಮಂತ್ರಣ ಪತ್ರಿಕೆ ಬಿಡುಗಡೆ, ಕಚೇರಿ ಉದ್ಘಾಟನೆ

600
0
SHARE
ಶ್ರೀ ಕ್ಷೇತ್ರ ಬಲಮುರಿ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.

ಮಹಾನಗರ : ನಗರದ ಬಿಕರ್ನಕಟ್ಟೆ ನಾಯ್ಗರಲೇನ್‌ ಶ್ರೀ ಕ್ಷೇತ್ರ ಬಲಮುರಿ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವವು ಮಾ. 1ರಿಂದ 5ರ ವರೆಗೆ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಶುಕ್ರವಾರ ದೇಗುಲದಲ್ಲಿ ದೇರೆಬೈಲು ಬ್ರಹ್ಮಶ್ರೀ ವಿಟ್ಠಲದಾಸ ತಂತ್ರಿ ನೇತೃತ್ವದಲ್ಲಿ ನಡೆಯಿತು.

ಬಿಜೆಪಿ ನಗರ ದಕ್ಷಿಣ ಅಧ್ಯಕ್ಷ ವೇದವ್ಯಾಸ ಕಾಮತ್‌, ಕಾರ್ಪೊರೇಟರ್‌ ಸಬಿತಾ ಮಿಸ್ಕಿತ್‌, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ರವೀಂದ್ರ ಮಾರುತಿ ನಿಕಂ, ಸಮಿತಿ ಅಧ್ಯಕ್ಷ ಗಣೇಶ್‌ ಎ. ಬಂಗೇರ, ದೇಗುಲದ ಮೊಕ್ತೇಸರ ವಿವೇಕಾನಂದ ನೀಗ್ಲೆ, ಕಾರ್ಯಾಧ್ಯಕ್ಷ ಜಗದೀಶ್‌ ಕೆ.ಗರೋಡಿ ಮೊದಲಾದವರು ಉಪಸ್ಥಿತರಿದ್ದರು.

ಬಳಿಕ ಬಿಕರ್ನಕಟ್ಟೆ ಶ್ರೀ ಪಾಂಡುರಂಗ ವಿಟ್ಠಲ ಭಜನ ಮಂದಿರದಲ್ಲಿ ಬ್ರಹ್ಮಕಲಶೋತ್ಸವದ ಕಾರ್ಯಾಲಯ ಉದ್ಘಾಟಿಸಲಾಯಿತು. ಮಂದಿರದ ಅಧ್ಯಕ್ಷ ವಿ. ಜಯರಾಮ್‌, ಬಿರುವೆರ್‌ ಕುಡ್ಲ ಸ್ಥಾಪಕ ಅಧ್ಯಕ್ಷ ಉದಯ್‌ ಪೂಜಾರಿ, ಬಿರುವೆರ್‌ ಕುಡ್ಲದ ಅಭಿಷೇಕ್‌ ಅಮೀನ್‌ ಬಿಕರ್ನಕಟ್ಟೆ, ಸಮಿತಿಯ ಪದಾಧಿಕಾರಿಗಳಾದ ರಿತೇಶ್‌ ದಾಸ್‌, ಗಿರೀಶ್‌ ಕೊಟ್ಟಾರಿ, ಶೋಭಾ ಶೇಖರ್‌, ರಾಘವೇಂದ್ರ ಕಾಮತ್‌ ಮೊದಲಾದವರು ಉಪಸ್ಥಿತರಿದ್ದರು. ಸಮಿತಿ ಪ್ರಧಾನ ಕಾರ್ಯದರ್ಶಿ ಸುಧಾಕರ ರಾವ್‌ ಪೇಜಾವರ ಕಾರ್ಯಕ್ರಮ ನಿರ್ವಹಿಸಿದರು.

ಬ್ರಹ್ಮಕಲಶೋತ್ಸವ
ಬ್ರಹ್ಮಕಲಶೋತ್ಸವವು ಮಾ. 1ರಂದು ಬೆಳಗ್ಗೆ 7.30ಕ್ಕೆ ಆಚಾರ್ಯಾದಿ ಋತ್ವಿಜರ ಆಗಮನ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಸಂಜೆ 6ಕ್ಕೆ ಹೊರೆಕಾಣಿಕೆ ಮೆರವಣಿಗೆ ಉದ್ಘಾಟನೆ, ಮಾ. 2ರಂದು ಬೆಳಗ್ಗೆ 7.30ಕ್ಕೆ ಗಣಪತಿ ಹೋಮ, ಮಂಟಪ ಶುದ್ಧಿ, ಸಂಸ್ಕಾರ ಶುದ್ಧಿ, ಕುಂಭೇಶ ಕರ್ಕರಿ ಪೂಜೆ, ಸಂಜೆ 6ಕ್ಕೆ ಆಚಾರ್ಯಾದಿ ಋತ್ವಿಗ್ವರಣ, ಸ್ಥಳ ಶುದ್ಧಿ, ಸಪ್ತ ಶುದ್ಧಿ, ಭೂ ಶುದ್ಧಿ ಹವನ ನಡೆಯಲಿದೆ.

ಮಾ. 3ರಂದು ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಗಣಪತಿ ಅಥರ್ವಶೀರ್ಷ ಮೋದಕ ಹವನ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಅಧಿವಾಸ ಹವನ, ಶಯ್ನಾ ರಚನೆ, ಶಿಖರಾಧಿವಾಸ, ಅಧಿವಾಸ ಹವನ, ಪೀಠಾಧಿವಾಸ, ಅಷ್ಟಬಂಧ ಶುದ್ಧಿ, ರತ್ನನ್ಯಾಸ-ಶಕ್ತಿಹವನ, ಸಂಜೆ 6.30ಕ್ಕೆ ಧಾರ್ಮಿಕ ಸಭೆ, ಮಾ. 4ರಂದು ಬೆಳಗ್ಗೆ 7.30ರಿಂದ ವಿವಿಧ
ಧಾರ್ಮಿಕ ಕಾರ್ಯಕ್ರಮಗಳು, ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ಕಲಶಾಧಿವಾಸ ಹವನ, ತತ್ವ ಕಲಶ, ತತ್ವಹವನ, ರತ್ನಾನ್ಯಾಸ ಪೂರ್ವಕ ಪೀಠ ಪ್ರತಿಷ್ಠೆ, ಅಷ್ಟಬಂಧ ಲೇಪನ, ಬ್ರಹ್ಮಕಲಶ ಪ್ರತಿಷ್ಠೆ ಪೂಜೆ ನಡೆಯಲಿದೆ.

ಮಾ. 5ರಂದು ಬೆಳಗ್ಗೆ 7.40ರ ಮೀನ ಲಗ್ನ ಸುಮುಹೂರ್ತದಲ್ಲಿ ನವೀಕೃತ ಆಲಯದಲ್ಲಿ ಬಲಮುರಿ ಶ್ರೀ ಸಿದ್ಧಿವಿನಾಯಕ ದೇವರಿಗೆ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ, ಗಣೇಶ ಪ್ರೋಕ್ತ, ಪ್ರಾಯಶ್ಚಿತ್ತ ಹವನ, ಅಲಂಕಾರ ಪೂಜೆ, 108 ಕಾಯಿ ಗಣಯಾಗ, ಮಹಾಪೂಜೆ, ಪ್ರಸಾದ ವಿತರಣೆ, ಮಹಾಮಂತ್ರಾಕ್ಷತೆ, ಮಧ್ಯಾಹ್ನ ಮಹಾಅನ್ನಸಂತರ್ಪಣೆ, ಸಂಜೆ 7ಕ್ಕೆ ರಂಗಪೂಜೆ, ಸಂಕಷ್ಟ ಹರ ಪೂಜೆ ಜರಗಲಿದೆ.

 

ಓಂ ಶ್ರೀ ಸಾಯಿ ಜ್ಯೋತಿಷ್ಯಾಲಯ
South Canara’s Famous Asrologer
Family issue, ಮದುವೆಯಲ್ಲಿ ವಿಘ್ನ, ಸತಿ-ಪತಿ ಕಲಹ, Court Case, ವಶೀಕರಣ, Love problems, ಸದಾ ಕುಟುಂಬದಲ್ಲಿ ಕಲಹ, Money problem, ಕೆಲಸದಲ್ಲಿ ಕಿರಿಕಿರಿ, ಮಕ್ಕಳ ಸಮಸ್ಯೆ, ವ್ಯಾಪಾರದಲ್ಲಿ ಅಡೆ-ತಡೆ, Loan Issue, ನಿಮ್ಮ ಯಾವುದೇ ಸಮಸ್ಯೆಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ.
ಹೊಟೇಲ್ ದುರ್ಗಾ ಇಂಟರ್ ನ್ಯಾಶನಲ್, ರೂಂ. ನಂ. 310, 3ನೇ ಮಹಡಿ, ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ, ಉಡುಪಿ.
ಪಂಡಿತ್ ಸಾಯಿನಾಥ್ ಜೋಶಿ : Ph- 98449-44242

LEAVE A REPLY

Please enter your comment!
Please enter your name here