Home ಧಾರ್ಮಿಕ ಸುದ್ದಿ ಬಡಾನಿಡಿಯೂರು ಬೊಬ್ಬರ್ಯ ಬ್ರಹ್ಮಸ್ಥಾನ: ನವೀಕೃತ ದೈವಾಲಯ ಉದ್ಘಾಟನೆ

ಬಡಾನಿಡಿಯೂರು ಬೊಬ್ಬರ್ಯ ಬ್ರಹ್ಮಸ್ಥಾನ: ನವೀಕೃತ ದೈವಾಲಯ ಉದ್ಘಾಟನೆ

880
0
SHARE

ಮಲ್ಪೆ: ತೊಟ್ಟಂ ಬಡಾನಿಡಿಯೂರು 1ನೇ ಮತ್ತು 2ನೇ ಮೊಗವೀರ ಗ್ರಾಮಸಭಾ ಶ್ರೀ ಬೊಬ್ಬರ್ಯ ಸ್ಥಾನದ ಶ್ರೀ ಬೊಬ್ಬರ್ಯ ಮತ್ತು ಪರಿವಾರ ಶಕ್ತಿಗಳ ನವೀಕೃತ ದೈವಾಲಯ ಸಮರ್ಪಣೆ ಮತ್ತು ಉದ್ಘಾಟನಾ ಕಾರ್ಯಕ್ರಮ ಜರಗಿತು. ಮಲ್ಪೆ ಏಳೂರು ಮೊಗವೀರ ಮಹಾ ಜನ ಸಂಘದ ಅಧ್ಯಕ್ಷ, ಮಾಜಿ ಮೀನುಗಾರಿಕಾ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ನೂತನ ದೈವಾಲಯವನ್ನು ಉದ್ಘಾಟಿಸಿದರು.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರನ್ನು ಸಮ್ಮಾನಿಸಿ ಗೌರವಿಸಲಾಯಿತು. ಬೊಬ್ಬರ್ಯ ಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶೇಖರ ತಿಂಗಳಾಯ ಬೀಚ್‌, ಕಾರ್ಯಾಧ್ಯಕ್ಷ ಆನಂದ ಟಿ. ಕೋಟ್ಯಾನ್‌, ಆಡಳಿತ ಸಮಿತಿಯ ಅಧ್ಯಕ್ಷ ಜನಾರ್ದನ ತಿಂಗಳಾಯ, ಬಡಾನಿಡಿಯೂರು ಒಂದನೇ ಮೊಗವೀರ ಗ್ರಾಮಸಭೆಯ ಗುರಿಕಾರ ರಾಮ ಜೆ. ಸುವರ್ಣ, ತೊಟ್ಟಂ ಎರಡನೇ ಮೊಗವೀರ ಗ್ರಾಮಸಭೆಯ ಗುರಿಕಾರ ದಾಮೋದರ ಸಾಲ್ಯಾನ್‌, ಜೀರ್ಣೋದ್ದಾರ ಮತ್ತು ಆಡಳಿತ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಬೆಳಗ್ಗೆ ಬೊಬ್ಬರ್ಯ ಸ್ಥಾನದಲ್ಲಿ ವೇ. ಮೂ| ಕುತ್ಯಾರು ಕೇಂಜ ಶ್ರೀಧರ ತಂತ್ರಿ ಮತ್ತು ವಾಸ್ತುತಜ್ಞ ಸುಬ್ರಹ್ಮಣ್ಯ ಭಟ್‌ ಗುಂಡಿಬೈಲು ಅವರ ಮಾರ್ಗದರ್ಶನದಲ್ಲಿ ದೈವಗಳ ಪುನಃ ಪ್ರತಿಷ್ಠೆ, ಬ್ರಹ್ಮಕಲಶೋತ್ಸವದ ಧಾರ್ಮಿಕ ವಿಧಿ ವಿಧಾನಗಳು ಜರಗಿದವು. ರಾತ್ರಿ ಸಾನಿಧ್ಯಾಭಿವೃದ್ಧಿಗೋಸ್ಕರ ಶ್ರೀ ನಂದೀಕೇಶ್ವರ, ಶ್ರೀ ಬೊಬ್ಬರ್ಯ ನೀಚ ದೈವಗಳ ನೇಮವು ಜರಗಿತು. ಸತೀಶ್ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here