Home ಧಾರ್ಮಿಕ ಸುದ್ದಿ ಪ್ರಭಾವಳಿ ರಜತ ದ್ವಾರ ಸಮರ್ಪಣೆ

ಪ್ರಭಾವಳಿ ರಜತ ದ್ವಾರ ಸಮರ್ಪಣೆ

1651
0
SHARE

ಕಾಪು: ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಶ್ರೀ ಲಕ್ಷ್ಮೀ ಜನಾರ್ದನ ದೇವರ ಉತ್ಸವ ಬಲಿ ಮೂರ್ತಿಗೆ ಸ್ವರ್ಣ ಕವಚ, ಸ್ವರ್ಣ ಪ್ರಭಾವಳಿ, ಗರ್ಭಗುಡಿಯ ದ್ವಾರ ಬಾಗಿಲುಗಳಿಗೆ ರಜತ ಕವಚ ಸಮರ್ಪಣೆ ಜ. 13ರಂದು ನಡೆಯಲಿದೆ.

ಶ್ರೀ ಲಕ್ಷ್ಮೀ ಜನಾರ್ದನ ದೇವರ ಸನ್ನಿಧಿಯಲ್ಲಿ 2002ರಿಂದ ಮೊದಲ್ಗೊಂಡು ಇದುವರೆಗೆ ಸುಮಾರು 15 ಕೋ. ರೂ. ವೆಚ್ಚದಲ್ಲಿ ವಿವಿಧ ಹಂತಗಳಲ್ಲಿ ಸಮಗ್ರ ಜೀರ್ಣೋದ್ಧಾರ ಕಾರ್ಯ ನಡೆದಿವೆ. ಇದರ ಮುಂದಿನ ಭಾಗವಾಗಿ ಅಲಂಕಾರ ಪ್ರಿಯ ಜನಾರ್ದನ ದೇವರಿಗೆ ಚಿನ್ನದ ಪ್ರಭಾವಳಿ, ಉತ್ಸವ ಮೂರ್ತಿಗೆ ಚಿನ್ನದ ಪ್ರಭಾವಳಿ, ಗರ್ಭಗುಡಿಯ ದ್ವಾರಕ್ಕೆ ರಜತ ಕವಚ ಸಮರ್ಪಣೆಗೆ ಯೋಜನೆ ರೂಪಿಸಲಾಗಿತ್ತು.

ಸುಮಾರು 75 ಲಕ್ಷ ರೂ. ವೆಚ್ಚದ ಬೃಹತ್‌ ಯೋಜನೆ ಇದಾಗಿದ್ದು, ಈ ಯೋಜನೆಯ ಸಾಕಾರಕ್ಕೆ ಊರ – ಪರವೂರ ಭಕ್ತರು, ದಾನಿಗಳ ಸಹಕಾರ ಪಡೆಯಲಾಗಿದೆ. ದೇಗುಲದಲ್ಲಿ ನಡೆಯುವ ದಿನನಿತ್ಯದ ಪೂಜಾ ವಿಧಾನ ಸೇರಿದಂತೆ ವಾರ್ಷಿಕ ಉತ್ಸವ, ರಾಶಿ ಪೂಜೆ ಸಹಿತ ವಿವಿಧ ಪೂಜೆ ನಡೆಯುತ್ತಿದ್ದು, ನಿತ್ಯ ಅನ್ನಸಂತರ್ಪಣೆ ನಡೆಯುತ್ತಿದೆ. ಸ್ವರ್ಣ ಕವಚ , ಪ್ರಭಾವಳಿ, ರಜತ ದ್ವಾರ ಸಮರ್ಪಣೆ ಅಂಗವಾಗಿ ಜ. 12ರಂದು ಸಂಜೆ 4.00ಕ್ಕೆ ಕಾಪು ಶ್ರೀ ಮೂರನೇ ಮಾರಿಯಮ್ಮ ದೇವಸ್ಥಾನದಿಂದ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದವರೆಗೆ ಸ್ವರ್ಣ ಕವಚ, ಸ್ವರ್ಣ ಪ್ರಭಾವಳಿ ಮೆರವಣಿಗೆ ನಡೆಯಲಿದೆ. ಬಳಿಕ ರಾತ್ರಿ ವಾಸ್ತುಪೂಜೆ, ವಾಸ್ತುಬಲಿ, ರಾಕೋÒಘ್ನ ಹೋಮ ನಡೆಯಲಿದೆ. ಜ. 13ರಂದು ಬೆಳಗ್ಗೆ ಕಲಶ ಪ್ರತಿಷ್ಠೆ, ಅದಿವಾಸ ಹೋಮ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಸಂಜೆ 6.00ಕ್ಕೆ ದೊಡ್ಡ ರಂಗಪೂಜೆ, ರಾತ್ರಿ 7.00ಕ್ಕೆ ಸ್ವರ್ಣ ಕವಚ, ಸ್ವರ್ಣ ಪ್ರಭಾವಳಿ, ರಜತ ದ್ವಾರ ಸಮರ್ಪಣೆ, ಬಳಿಕ ಉತ್ಸವ ಬಲಿ, ರಾತ್ರಿ 8.00ಕ್ಕೆ ಕಡುಬು ಮತ್ತು ಅನ್ನಸಂತರ್ಪಣೆ ಜರಗಲಿದೆ ಎಂದು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಮೋಹನ್‌ ಬಂಗೇರ, ಸ್ವರ್ಣ ಪ್ರಭಾವಳಿ ಮತ್ತು ರಜತ ದ್ವಾರ ಸಮರ್ಪಣ ಸಮಿತಿಯ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ ಜಂಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here