ಸುಳ್ಯ: ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ ಎಸ್ಸೆಸ್ಸೆಫ್ ಗಾಂ ನಗರ ಶಾಖಾ ವತಿಯಿಂದ ಮಹ್ರೂಮ್ ಖಲಂದರ್ ಶಾಫಿ ಹಾಗೂ ಸತ್ತಾರ್ ಸಂಗಂ ಸ್ಮರಣಾರ್ಥ
ತಹ್ಲೀಲ್, ದುಃವಾ ಮಜ್ಲಿಸ್ ಹಾಗೂ ಇಫ್ತಾರ್ ಸಂಗಮ ಅನ್ಸಾರ್ ಸಭಾಭವನದಲ್ಲಿ ನಡೆಯಿತು.
ಗಾಂಧಿನಗರ ಕೇಂದ್ರ ಜುಮಾ ಮಸೀದಿ ಖತೀಬ ಅಶ್ರಫ್ ಕಾಮಿಲ್ ಸಖಾಫಿ ವಯನಾಡ್ ಅನುಸ್ಮರಣೆ ಪ್ರಭಾಷಣೆ ಮಾಡಿ, ಖಲಂದರ್ ಶಾಫಿ ಹಾಗೂ ಸತ್ತಾರ್ ಸಂಗಂ ಸುಳ್ಯದ ಯುವ ಜನತೆಗೆ ಮಾದರಿಯಾಗಿದ್ದಾರೆ. ಸಾಮಾಜಿಕ ಕ್ಷೇತ್ರಗಳಲ್ಲಿ ಅವರು ಮಾಡಿದ ಕಾರ್ಯಚರಣೆಗಳು ಶ್ಲಾಘನೀಯ ಎಂದರು. ತ್ವಾಹಿರ್ ಸಅದಿ ತಂಙಳ್ ಅಧ್ಯಕ್ಷತೆ
ವಹಿಸಿದರು. ಅಬ್ದುರ್ರಹ್ಮಾನ್ ಸಅದಿ ಉಪಸ್ಥಿತರಿದ್ದರು.