Home ಧಾರ್ಮಿಕ ಸುದ್ದಿ ಇಡ್ಯಾ: ಹೊರೆ ಕಾಣಿಕೆ ಮೆರವಣಿಗೆ ಗೆ ಶೀರೂರು ಶ್ರೀ ಚಾಲನೆ

ಇಡ್ಯಾ: ಹೊರೆ ಕಾಣಿಕೆ ಮೆರವಣಿಗೆ ಗೆ ಶೀರೂರು ಶ್ರೀ ಚಾಲನೆ

1459
0
SHARE

ಸುರತ್ಕಲ್‌, ಫೆ. 21: ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಪ್ರಯುಕ್ತ ಸುರತ್ಕಲ್‌ ವಲಯದ ಹೊರೆ ಕಾಣಿಕೆ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಮೆರವಣಿಗೆ ಮೂಲಕ ಶ್ರೀ ಕ್ಷೇತ್ರಕ್ಕೆ ಸಾಗಿಸಲಾಯಿತು.

ಎಲ್ಲರ ಸಹಕಾರದಿಂದ ಯಶಸ್ವಿ
ಉಡುಪಿ ಶೀರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥಸ್ವಾಮೀಜಿ ದೀಪ ಬೆಳಗಿಸಿ ಚಾಲನೆ ನೀಡಿ, ಬ್ರಹ್ಮ ಕಲಶೋತ್ಸವದ ದಂತಹ ದೇವತಾ ಕಾರ್ಯಗಳಲ್ಲಿ ಭಕ್ತರ ಸಹಭಾಗಿತ್ವದಿಂದ ಲೋಕಕಲ್ಯಾಣವಾಗುತ್ತದೆ. ಮಾತ್ರವಲ್ಲ ಸರ್ವರೂ ಕೈ ಜೋಡಿಸುವುದರಿಂದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆ ಸಲು ಸಾಧ್ಯವಾಗುತ್ತದೆ ಎಂದರು.

ನಮ್ಮ ಭಾಗ್ಯ
ಫೆ. 18ರಂದು ಮಂಗಳೂರಿನಿಂದ 430ಕ್ಕೂ ಮಿಕ್ಕಿ ವಾಹನದಲ್ಲಿ ಕುಡುಪು ಕ್ಷೇತ್ರಕ್ಕೆ ಹೊರೆ ಕಾಣಿಕೆ ತಲುಪಿದರೆ ಇದೀಗ ಸುರತ್ಕಲ್‌, ಪಣಂಬೂರು ಕ್ಷೇತ್ರದಿಂದ ಸುಮಾರು 200ಕ್ಕೂ ಮಿಕ್ಕಿ ವಾಹನದಲ್ಲಿ ಹಸುರುವಾಣಿ ಸಹಿತ ಪಾತ್ರ, ಗ್ರೈಂಡರ್‌ ಮತ್ತಿತರ ಪರಿಕರಗಳನ್ನು ಭಕ್ತರ ಸಹಕಾರದಿಂದ ಶ್ರೀ ಕ್ಷೇತ್ರಕ್ಕೆ ಮುಟ್ಟಿಸಲು ಸಂತಸವೆನಿಸುತ್ತದೆ. ಅನಂತ ಪದ್ಮನಾಭನ ಸೇವೆಗೆ ಅವಕಾಶ ಸಿಕ್ಕಿರುವುದು ನಮ್ಮ ಭಾಗ್ಯ ಎಂದು ಹೊರೆ ಕಾಣಿಕೆ ಸಮಿತಿಯ ಮಹಾಬಲ ಪೂಜಾರಿ ಕಡಂಬೋಡಿ ಹೇಳಿದರು.

ಗಣ್ಯರ ಉಪಸ್ಥಿತಿ
ಇಡ್ಯಾ ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ಐ. ರಮಾನಂದ ಭಟ್‌, ಐ.ಕೆ. ನಾರಾಯಣ ರಾವ್‌, ಅಗರಿ ರಾಘ ವೇಂದ್ರ ರಾವ್‌, ಮಹೇಶ್‌ ಮೂರ್ತಿ ಸುರತ್ಕಲ್‌, ಕುಡುಪು ಕ್ಷೇತ್ರದ ಮೊಕ್ತೇಸರ ಭಾಸ್ಕರ ಮೊಲಿ ಕಾರ್ಯ ನಿರ್ವಹಣಾ ಧಿಕಾರಿ ಅರವಿಂದ್‌ ಅಯ್ಯಪ್ಪ ಸುತಂಗಡಿ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಚಂದ್ರಹಾಸ ರೈ, ಅಧ್ಯಕ್ಷ ಸುದರ್ಶನ ಕುಡುಪು, ಉಪಾಧ್ಯಕ್ಷ ಉಮಾನಾಥ ಕೊಟ್ಟಾರಿ, ಧಾರ್ಮಿಕ ದತ್ತಿ ಪರಿಷತ್‌ ಸದಸ್ಯ ಪದ್ಮನಾಭ ಕೋಟ್ಯಾನ್‌, ಸಮಿತಿಯ ಶರಣ್‌ ಪಂಪ್‌ ವೆಲ್‌, ಉಮೇಶ್‌ ಶೆಟ್ಟಿ, ಉದಯಕುಮಾರ್‌, ಆನಂದ ಸರಿಪಲ್ಲ, ಗಣೇಶ್‌ ಭಟ್‌ ಶರವು, ಪುಷ್ಪರಾಜ್‌ ಪೂಜಾರಿ, ಕಿಶೋರ್‌ ಕೊಟ್ಟಾರಿ, ಮಹೇಶ್‌ ಕುಮಾರ್‌ ಕೆ., ವಿಶ್ವನಾಥ್‌ ಸರಿಪಲ್ಲ, ದುರ್ಗಾಪ್ರಸಾದ್‌ ಶೆಟ್ಟಿ, ಸು ಧೀರ್‌ ಕುಡುಪು, ಅರುಣ್‌ ಮಂಗಳನಗರ, ದೇವದಾಸ ಕುಡುಪು, ನಾಗೇಶ್‌ ಮಂಗಳನಗರ, ಸತೀಶ್‌ ಕುಡುಪು ಮೊದ ಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here