Home ಧಾರ್ಮಿಕ ಸುದ್ದಿ ಇಚ್ಲಂಪಾಡಿ ಚರ್ಚ್‌: ವಾರ್ಷಿಕ ಹಬ್ಬ, ಧ್ವಜಾರೋಹಣ

ಇಚ್ಲಂಪಾಡಿ ಚರ್ಚ್‌: ವಾರ್ಷಿಕ ಹಬ್ಬ, ಧ್ವಜಾರೋಹಣ

1550
0
SHARE

ನೆಲ್ಯಾಡಿ ಮೇ 2: ಜಾರ್ಜಿಯನ್‌ ತೀರ್ಥಾಟನ ಕೇಂದ್ರವಾಗಿರುವ ಇಚ್ಲಂಪಾಡಿ ಸೈಂಟ್‌ ಜಾರ್ಜ್‌ ಆರ್ಥಡಾಕ್ಸ್‌ ಸಿರಿಯನ್‌ ಚರ್ಚ್‌ನ ವಾರ್ಷಿಕ ಹಬ್ಬದ ಅಂಗವಾಗಿ ಮಂಗಳವಾರ ಬೆಳಗ್ಗೆ ಧ್ವಜಾರೋಹಣ, ಪ್ರಭಾತ ಪ್ರಾರ್ಥನೆ, ಅನಂತರ ಬ್ರಹ್ಮಾವರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಯಾಕೋಬ್‌ ಮಾರ್‌ ಎಲಿಯಾಸ್‌ ಪವಿತ್ರ ದಿವ್ಯಬಲಿಪೂಜೆ ನೆರವೇರಿಸಿದರು.

ಸಂತ ಜಾರ್ಜ್‌ರೊಂದಿಗಿನ ಮಧ್ಯಸ್ಥ ಪ್ರಾರ್ಥನೆ ಬಳಿಕ ಬಿಷಪ್‌ ಯಾಕೋಬ್‌ ಮಾರ್‌ ಎಲಿಯಾಸ್‌ ಅವರು ಹಬ್ಬದ ಧ್ವಜಾರೋಹಣ ನೆರವೇರಿಸಿದರು. ಮಧ್ಯಾಹ್ನದ ಪ್ರಾರ್ಥನೆ, ಸಂಧ್ಯಾ ಪ್ರಾರ್ಥನೆ ನಡೆಯಿತು. ಚರ್ಚ್‌ನ ಧರ್ಮಗುರು ವಂ| ಜಿ.ಎಂ. ಸ್ಕರಿಯ ರಂಬಾನ್‌, ಸೆಕ್ರೆಟರಿ ಟಿ.ಪಿ. ಕುರಿಯನ್‌, ಟ್ರಸ್ಟಿ ಮೇಹಿ ಜಾರ್ಜ್‌ ಹಾಗೂ ಆಡಳಿತ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ವಾರ್ಷಿಕ ಹಬ್ಬ ಮೇ 7ರ ತನಕ ವಾರ್ಷಿಕ ಹಬ್ಬ ನಡೆಯಲಿದ್ದು, ಪ್ರತಿದಿನ ಬೆಳಗ್ಗೆ ಪ್ರಭಾತ ಪ್ರಾರ್ಥನೆ, ಪವಿತ್ರ ದಿವ್ಯ ಬಲಿಪೂಜೆ, ಸಂತ ಜಾರ್ಜ್‌ರೊಂದಿಗಿನ ಮಧ್ಯಸ್ಥ ಪ್ರಾರ್ಥನೆ, ಮಧ್ಯಾಹ್ನದ ಪ್ರಾರ್ಥನೆ, ಸಂಧ್ಯಾ ಪ್ರಾರ್ಥನೆ ನಡೆಯಲಿದೆ. ಮೇ 2ರಂದು ರೆಂಜಿಲಾಡಿ ಸೈಂಟ್‌ ಥಾಮಸ್‌ ಆರ್ಥಡಾಕ್ಸ್‌ ಚರ್ಚ್‌ನ ವಿಕಾರ್‌ ವಂ| ಕುರಿಯಕೋಸ್‌ ತೋಮಸ್‌ ಪಳ್ಳಿಚ್ಚಿರ ಪ್ರಾರ್ಥನೆ ನೆರವೇರಿಸಿದರು. ಮೇ 3ರಂದು ನೆಲ್ಯಾಡಿ ಸೈಂಟ್‌ ಗ್ರಿಗೋರಿಯೋಸ್‌ ಆರ್ಥಡಾಕ್ಸ್‌ ಚರ್ಚ್‌ನ ಅಸಿ ವಿಕಾರ್‌ ವಂ| ವಿ.ಸಿ. ಮಾಣಿ ಕೋರ್‌ ಎಪಿಸ್ಕೋಪಾ, ಮೇ 4ರಂದು ಸಂಪ್ಯಾಡಿ ಸೈಂಟ್‌ ಮೇರೀಸ್‌ ಆರ್ಥಡಾಕ್ಸ್‌ ಚರ್ಚ್‌ನ ವಿಕಾರ್‌ ವಂ| ಎಂ.ಸಿ. ಮತ್ತಾಯಿ, ಮೇ 5 ಪದವು
ಸೈಂಟ್‌ ಜಾರ್ಜ್‌ ಆರ್ಥಡಾಕ್ಸ್‌ ಚರ್ಚ್‌ನ ವಿಕಾರ್‌ ವಂ| ವರ್ಗೀಸ್‌ μಲಿಪ್ಪೋಸ್‌, ಮೇ 6ರಂದು ನೆಲ್ಯಾಡಿ ಸೈಂಟ್‌ ಗ್ರಿಗೋರಿಯೋಸ್‌ ಆರ್ಥಡಾಕ್ಸ್‌ ಚರ್ಚ್‌ನ ವಿಕಾರ್‌ ವಂ| ವರ್ಗೀಸ್‌ ತೋಮಸ್‌ ಪವಿತ್ರ ದಿವ್ಯಬಲಿ ಪೂಜೆ ನೆರವೇರಿಸಲಿದ್ದಾರೆ.

ಮೇ 6ರ ಸಂಜೆ ಬಿಷಪ್‌ ಆಗಮನ ಮೇ 6ರಂದು ಸಂಜೆ ಮಾವೇಲಿಕ್ಕರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ| ಅಲೆಕ್ಸಿಯೋಸ್‌ ಮಾರ್‌ ಯೌಸೇಬಿಯೋಸ್‌ ಬಿಷಪ್‌ ಈವರಿಗೆ ಸ್ವಾಗತ, ಬಳಿಕ ಪಾದಯಾತ್ರಿಕರಿಗೆ ಸ್ವಾಗತ ನಡೆಯಲಿದೆ. ಸಂಧ್ಯಾ ಪ್ರಾರ್ಥನೆ, ಹಬ್ಬದ ಸಂದೇಶ, ಕಾಯರ್ತಡ್ಕ ಶಿಲುಬೆ ತನಕ ಮೆರವಣಿಗೆ, ರಾತ್ರಿ ಆಶೀರ್ವಾದ, ಅನ್ನಸಂತರ್ಪಣೆ ನಡೆಯಲಿದೆ. ಮೇ 7ರಂದು ಬೆಳಗ್ಗೆ ಪ್ರಭಾತ ಪ್ರಾರ್ಥನೆ, ಮಾವೇಲಿಕ್ಕರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಿಂದ ಪವಿತ್ರ ದಿವ್ಯ ಬಲಿಪೂಜೆ, ಸಂತ ಜಾರ್ಜ್‌ರೊಂದಿಗಿನ ಮಧ್ಯಸ್ಥ ಪ್ರಾರ್ಥನೆ, ಹಬ್ಬದ ಸಂದೇಶ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ, ಏಲಂ, ಹೊಸಂಗಡಿಯ ಶಿಲುಬೆ ಗೋಪುರದವರೆಗೆ ಮೆರವಣಿಗೆ, ಬಿಷಪ್‌ ಅವರಿಂದ ಆಶೀರ್ವಾದ, ಪ್ರಸಾದ ವಿತರಣೆ, ಹಬ್ಬದ ಧ್ವಜ ಇಳಿಸುವಿಕೆ, ಸಮಾರೋಪ ಪ್ರಾರ್ಥನೆ ನಡೆಯಲಿದೆ ಎಂದು ಚರ್ಚ್‌ನ ವಿಕಾರ್‌ ವಂ| ಜಿ.ಪಂ. ಸ್ಕರಿಯಾ ರಂಬಾನ್‌, ಸೆಕ್ರೆಟರಿ ಟಿ.ಪಿ. ಕುರಿಯನ್‌, ಟ್ರಸ್ಟಿ ಮೇಹಿ ಜಾರ್ಜ್‌ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here