Home ಧಾರ್ಮಿಕ ಸುದ್ದಿ ಹೊಸದುರ್ಗ: ಅತಿರಾತ್ರ ಸೋಮಯಾಗ ಸಮಿತಿ ರಚನೆ

ಹೊಸದುರ್ಗ: ಅತಿರಾತ್ರ ಸೋಮಯಾಗ ಸಮಿತಿ ರಚನೆ

1200
0
SHARE

ಹೊಸದುರ್ಗ: ಮುಂದಿನ ವರ್ಷ ಕೊಂಡೆವೂರಿನಲ್ಲಿ ನಡೆಯಲಿರುವ ಅತಿರಾತ್ರ ಸೋಮಯಾಗದ ಅಂಗವಾಗಿ ಹೊಸದುರ್ಗದ ಶ್ರೀ ಅಮ್ಮನವರ ದೇವಸ್ಥಾನದಲ್ಲಿ ಸೋಮಯಾಗ ಸಮಿತಿಯನ್ನು ಕೊಂಡೆವೂರಿನ ಪೂಜ್ಯ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ರಚಿಸಲಾಯಿತು.

2019ರ ಫೆ. 18ರಿಂದ 24ರ ವರೆಗೆ ಕಟೀಲು ಶ್ರೀ ಕ್ಷೇತ್ರದ ಆನುವಂಶಿಕ ಮೊಕ್ತೇಸರ ಆಸ್ರಣ್ಣ ಅವರ ನೇತೃತ್ವದಲ್ಲಿ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು. ಸಭೆಯ ಅಧ್ಯಕ್ಷತೆಯನ್ನು ಪ್ರಭಾ ಶಂಕರ್‌ ಹೊಸದುರ್ಗ ಅವರು ವಹಿಸಿದ್ದರು. ನಗರಸಭಾ ಕೌನ್ಸಿಲರ್‌ಗಳಾದ ಬಾಲರಾಜ್‌, ಎಚ್‌.ಆರ್‌. ಶ್ರೀಧರ, ರಾಘವನ್‌, ಶ್ರೀಧರನ್‌, ಚೇತನಾ ಕಾಂಞಂಗಾಡ್‌ ಮೊದಲಾದವರು ಉಪಸ್ಥಿತರಿದ್ದರು. ಲತಾ ಚಂದ್ರಶೇಖರ್‌ ಪ್ರಾರ್ಥನೆ ಹಾಡಿದರು. ಜಯಾನಂದ ಕುಮಾರ್‌ ಹೊಸದುರ್ಗ ಸ್ವಾಗತಿಸಿದರು. ಸುಕನ್ಯಾ ಕಿಶೋರ್‌ ಹೊಸದುರ್ಗ ವಂದಿಸಿದರು.

LEAVE A REPLY

Please enter your comment!
Please enter your name here