Home ಧಾರ್ಮಿಕ ಸುದ್ದಿ ಹೊಸಬೆಟ್ಟು: ಶ್ರೀ ರಾಘವೇಂದ್ರ ಮಠ ಬ್ರಹ್ಮಕಲಶೋತ್ಸವ ಸಭೆ, ಆಮಂತ್ರಣ ಪತ್ರಿಕೆ ಬಿಡುಗಡೆ

ಹೊಸಬೆಟ್ಟು: ಶ್ರೀ ರಾಘವೇಂದ್ರ ಮಠ ಬ್ರಹ್ಮಕಲಶೋತ್ಸವ ಸಭೆ, ಆಮಂತ್ರಣ ಪತ್ರಿಕೆ ಬಿಡುಗಡೆ

1524
0
SHARE

ಹೊಸಬೆಟ್ಟು : ಹೊಸಬೆಟ್ಟು ಶ್ರೀ ರಾಘವೇಂದ್ರ ಮಠದಲ್ಲಿ ನಡೆ ಯುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ಪೂರ್ವಭಾವಿಯಾಗಿ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ರವಿವಾರ ಜರಗಿತು.

ಕಟೀಲು ವೇ| ಮೂ| ಲಕ್ಷ್ಮೀ ನಾರಾಯಣ ಆಸ್ರಣ್ಣ ಅವರು ಕಾರ್ಯಕ್ರಮ ಹಾಗೂ ಆಮಂತ್ರಣ ಪತ್ರಿಕೆ ಉದ್ಘಾಟಿಸಿ ಮಾತನಾಡಿ, ಹರಿ ವಾಯು ಗುರುಗಳ ಮತ್ತು ಮಠದ ಪರಿವಾರ ದೇವರುಗಳಿಗೆ ನಡೆಯುವ ಬ್ರಹ್ಮಕಲಶೋ ತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಾವೆಲ್ಲ ಪುಣ್ಯವಂತರು. ಗುರುಗಳು ನಮ್ಮಿಂದ ಕೆಲಸ ಮಾಡಿಸುತ್ತಿದ್ದಾರೆ. ನಮ್ಮ ದುಡಿಮೆಯ ಒಂದಿಷ್ಟು ಸಂಪತ್ತಿನಲ್ಲಿ ಧಾರ್ಮಿಕ ಕಾರ್ಯಗಳಿಗೆ ವಿನಿಯೋಗಿ ಸುವ ಮೂಲಕ ನಮ್ಮ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳಬೇಕಿದೆ ಎಂದರು.

ಧರ್ಮದರ್ಶಿ ಹರಿಕೃಷ್ಣ ಪುನರೂರು, ಮಂಗಳಾದೇವಿ ದೇವಸ್ಥಾನದ ವೇ| ಮೂ| ಚಂದ್ರಶೇಖರ ಐತಾಳ್‌ ಶುಭ ಹಾರೈಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಿಶ್ವೇಶ್ವರ ಭಟ್‌ ಬದವಿದೆ ಅಧ್ಯಕ್ಷತೆ ವಹಿಸಿದ್ದರು. ಡಾ| ಮಂಜಯ್ಯ ಶೆಟ್ಟಿ ಕಡಂಬೋಡಿ, ವಕೀಲರ ಸಂಘದ ಮಾಜಿ ಅಧ್ಯಕ್ಷ ಎಸ್‌.ಪಿ. ಚೆಂಗಪ್ಪ, ಲಯನ್ಸ್‌ ಕ್ಲಬ್‌ ನವಮಂಗಳೂರು ಇದರ ಅಧ್ಯಕ್ಷ ಮನೋಜ್‌ ಕುಮಾರ್‌ ತಣ್ಣೀರು ಬಾವಿ, ಕೆ. ಮೋನಪ್ಪ, ವೀಣಾ ಕೃಷ್ಣಮೂರ್ತಿ ರಾವ್‌, ಕೆ. ಕಲಾವತಿ, ಎಚ್‌. ಹರಿಕೃಷ್ಣ ಸಾಲ್ಯಾನ್‌, ಬಂಟ್ವಾಳ ಮೋನಪ್ಪ ಗೌಡ, ಜಯಶಂಕರ್‌, ಬಿ.ಎ. ಶೆಟ್ಟಿ, ಬಿ.ಆರ್‌. ಸಾಮಗ, ಎ.ವಿ.ಎಸ್‌. ಶಗ್ರಿತ್ತಾಯ, ಕೆ.ಸಿ. ನಾಗೇಂದ್ರ ಭಾರದ್ವಾಜ್‌, ಪಿ.ಎಚ್‌. ಆನಂದ, ಹರಿಶ್ಚಂದ್ರ ಎಚ್‌., ರಜನಿ ದುಗ್ಗಣ್ಣ, ಅಗರಿ ರಾಘವೇಂದ್ರ ರಾವ್‌, ಬಾಬು ಗೌಡ ಬಲಾಡ್‌, ಗುಣಶೇಖರ ಶೆಟ್ಟಿ , ಇಂದುಮತಿ, ರಮಾ ವೆಂಕಟ್ರಾವ್‌, ಮಂಜುನಾಥ್‌ ಸುರತ್ಕಲ್‌, ವೇ| ಮೂ| ಶ್ರೀನಿವಾಸ ಆಚಾರ್ಯ, ವೇ| ಮೂ| ಶ್ರೀಕಾಂತ್‌ ಭಟ್‌ ಕೋಟೆಕಾರ್‌, ಸುಕುಮಾರ್‌ ಸುರತ್ಕಲ್‌, ರಾಜೇಂದ್ರ ಎಚ್‌., ರಾಘವೇಂದ್ರ ಕುಲಕರ್ಣಿ, ಟಿ. ಕೃಷ್ಣ ಮೂರ್ತಿ ರಾವ್‌, ಜೆ.ಡಿ. ವೀರಪ್ಪ ಉದ್ಯಮಿ ಸುರತ್ಕಲ್‌, ಮಂಜು ಕಾವ ಪಣಂಬೂರು, ಶ್ರೀರಂಗ ಎಚ್‌., ರಮೇಶ್‌ ಟಿ.ಎನ್‌., ರಾಘವೇಂದ್ರ ರಾವ್‌, ಯೋಗೀಶ್‌ ಸನಿಲ್‌, ಸುಧಿಧೀರ್‌ ಶ್ರೀಯಾನ್‌ ಗುಡೆಕೊಪ್ಲ, ಗಣೇಶ ರಾವ್‌, ಯೋಗೇಶ್‌ ಕರ್ಕೇರ, ವಿಕ್ರಮ್‌ ಮೈರ್ಪಾಡಿ, ಪವನ್‌ ಮೈರ್ಪಾಡಿ, ಪ್ರಸನ್ನ ಎಂ., ಸಾವಿತ್ರಿ ಎಚ್‌. ಭಟ್‌, ಯಜ್ಞೆàಶ್‌ ಎಚ್‌., ಶೋಭಾ ಚಿತ್ರಾಪುರ, ಸುರೇಶ್‌ ಸಿ., ಪದ್ಮನಾಭ ಸುವರ್ಣ, ಸುಶೀಲಾ ರಾಮಕೃಷ್ಣ, ಗೌರಿ ರಾಘವೇಂದ್ರ, ಕುಸುಮಾ ವಾದೀಶ ಆಚಾರ್ಯ, ಬಿ. ಗೋಪಾಲ ಕೃಷ್ಣ ರಾವ್‌, ಹರಿಣಿ ಜಯಶಂಕರ್‌, ದಿನೇಶ್‌ ದೇವಾಡಿಗ ಮೊದಲಾದವರು ಹಾಗೂ ಹಲವು ಸಂಘ – ಸಂಸ್ಥೆಗಳ
ಪದಾ ಧಿಕಾರಿಗಳು ಉಪಸ್ಥಿತರಿದ್ದರು.

ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಪುಂಡಲೀಕ ಹೊಸಬೆಟ್ಟು ಸ್ವಾಗತಿಸಿದರು. ನವ ವೃಂದಾವನ ಸೇವಾ ಪ್ರತಿಷ್ಠಾನ ಹೊಸ ಬೆಟ್ಟು ಆನುವಂಶಿಕ ಆಡಳಿತ ಮೊಕ್ತೇಸರರು
ರಾಘವೇಂದ್ರ ಎಚ್‌.ವಿ. ವಂದಿಸಿದರು. ಶ್ರೀನಿವಾಸ ಕುಳಾಯಿ ನಿರೂಪಿಸಿದರು.

LEAVE A REPLY

Please enter your comment!
Please enter your name here