Home ಧಾರ್ಮಿಕ ಸುದ್ದಿ ಶ್ರೀ ಗುರು ರಾಘವೇಂದ್ರ ಮಠದಲ್ಲಿ ದೃಢಕಲಶಾಭಿಷೇಕ

ಶ್ರೀ ಗುರು ರಾಘವೇಂದ್ರ ಮಠದಲ್ಲಿ ದೃಢಕಲಶಾಭಿಷೇಕ

720
0
SHARE
ಶ್ರೀ ಗುರು ರಾಘವೇಂದ್ರ ಮಠದಲ್ಲಿ ದೃಢ ಕಲಶ ಸಂಪ್ರೋಕ್ಷಣೆ ಜರಗಿತು.

ಹೊಸಬೆಟ್ಟು: ಶ್ರೀ ಗುರು ರಾಘವೇಂದ್ರ ಮಠ ಹೊಸಬೆಟ್ಟು ಇಲ್ಲಿ ಸಾರ್ವಭೌಮರ ಮೂಲ ಮೃತ್ತಿಕಾ ಪ್ರತಿಷ್ಠಾಪನೆಯಾದ ಬೃಂದಾವನಕ್ಕೆ ನೆರವೇರಿಸಿದ್ದ ಬ್ರಹ್ಮ ಕಲಶೋತ್ಸವದ ಬಳಿಕ ಗುರುವಾರ ದೃಢ ಕಲಶ ಸಂಪ್ರೋಕ್ಷಣೆ ಜರಗಿತು.

ಬೆಳಗ್ಗೆ ಪುಣ್ಯಾಹ, 48 ಕಲಶ ಪೂಜೆ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ ನೆರವೇರಿತು. ಸಂಜೆ ಗಂಟೆ 6ರಿಂದ ರಂಗಪೂಜೆ, ಉತ್ಸವ, ರಥೋತ್ಸವ, ಅಷ್ಟಾವಧಾನ, ಪ್ರಸಾದ ವಿತರಣೆ ನಡೆಯಿತು. ವೇದಮೂರ್ತಿ ಕಗ್ಗಿ ಗೋಪಾಲಕೃಷ್ಣ ಆಚಾರ್ಯರ ನೇತೃತ್ವದಲ್ಲಿ ಕಗ್ಗಿ ಶ್ರೀನಿವಾಸ ಆಚಾರ್ಯರು ಹಾಗೂ ಪುರೋಹಿತರು ಧಾರ್ಮಿಕ ವಿವಿಧಾನವನ್ನು ನೆರವೇರಿಸಿದರು. ಈ ಸಂದರ್ಭ ಬ್ರಹ್ಮ ಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು, ಮಠದ ಆನುವಂಶಿಕ ಮೊಕ್ತೇಸರ ರಾಘವೇಂದ್ರ ಎಚ್., ಅಧ್ಯಕ್ಷ ವಿಶ್ವೇಶ್ವರ ಭಟ್ ಬದವಿದೆ, ಸಂಚಾಲಕ ಪುಂಡಲೀಕ ಹೊಸಬೆಟ್ಟು, ಕಾರ್ಯಾಧ್ಯಕ್ಷ ಆನಂದ್‌ ಪಿ.ಎಚ್., ಕಾರ್ಯದರ್ಶಿ ಮೋನಪ್ಪ ಗೌಡ, ಮಾತೃ ಮಂಡಳಿಯ ಕಲಾವತಿ ಕೆ., ಜಗದೀಶ್‌ ಶಿವಗಿರಿ, ಬಾಬುಗೌಡ ಬಲ್ನಾಡ್‌, ಹರಿಕೃಷ್ಣ ಸಾಲ್ಯಾನ್‌, ಶ್ರೀನಿವಾಸ ಕುಳಾಯಿ, ಸುಧಿಧೀರ್‌ ಶ್ರೀಯಾನ್‌ ಗುಡ್ಡೆಕೊಪ್ಲ, ಮಹೇಶ್‌ ಮೂರ್ತಿ, ಬಿ.ಜಿ. ರಾವ್‌, ಮ್ಯಾನೇಜರ್‌ ಕೃಷ್ಣ ಭಟ್, ಗೌರಿ ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here