ಹೊಸಬೆಟ್ಟು: ಇಲ್ಲಿನ ಶ್ರೀ ಗುರುರಾಘವೇಂದ್ರ ಮಠದಲ್ಲಿ ಮೇ 26ರಂದು ಬ್ರಹ್ಮಕಲಶೋತ್ಸವ ಜರಗಲಿದ್ದು, ಈ ಪ್ರಯುಕ್ತ ಮುಷ್ಟಿ ಕಾಣಿಕೆ ಸಮರ್ಪಣೆ, ಸಾಮೂಹಿಕ ಪ್ರಾರ್ಥನೆ ಮತ್ತು ವಿಶೇಷ ಪೂಜೆ ಜರಗಿತು.
ಶ್ರೀನಿವಾಸ ಆಚಾರ್ಯ ಪೂಜಾವಿಧಿ ನೆರವೇರಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು, ಅಧ್ಯಕ್ಷ ವಿಶ್ವೇಶ್ವರ ಬದವಿದೆ, ವ್ಯವಸ್ಥಾಪನ ಸಮಿತಿ ಸಂಚಾಲಕ ಪುಂಡಲೀಕ ಹೊಸಬೆಟ್ಟು, ಹೊಸಬೆಟ್ಟು ಗಣೇಶೋತ್ಸವ ಸಮಿತಿ ಅಧ್ಯಕ್ಷ ಹರಿಕೃಷ್ಣ ಸಾಲ್ಯಾನ್, ನವ ವೃಂದಾವನ ಸೇವಾ ಪ್ರತಿಷ್ಠಾನದ ಮೊಕ್ತೇಸರ ರಾಘವೇಂದ್ರ ಎಚ್.ವಿ., ಸಮಿತಿಯ ಕಾರ್ಯದರ್ಶಿ ಬಂಟ್ವಾಳ ಮೋನಪ್ಪ ಗೌಡ, ಪ್ರಧಾನ ಕಾರ್ಯದರ್ಶಿ ಅಗರಿ ರಾಘವೇಂದ್ರ ರಾವ್, ಗುರಿಕಾರರಾದ ಶಶಿಧರ ಗುರಿಕಾರ, ಎವಿಎಸ್ ಶಗ್ರಿತ್ತಾಯ, ರಾಘವೇಂದ್ರ ಸ್ವಾಮಿ ಮಠದ ಮ್ಯಾನೇಜರ್ ಕೃಷ್ಣ ಭಟ್, ಬಿ.ಆರ್. ಸಾಮಗ, ಸುಕುಮಾರ್ ಸುರತ್ಕಲ್, ರಾಜೇಂದ್ರ ಎಚ್., ಕೆ. ಕಲಾವತಿ, ಕೆ. ರಾಘವೇಂದ್ರ ರಾವ್, ಗೌರಿ ರಾಘವೇಂದ್ರ, ದೇವರಾಜ್ ಹೊಸಬೆಟ್ಟು, ಶ್ರೀನಿವಾಸ ಕುಳಾಯಿ, ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು, ಉಪ ಸಮಿತಿಯ ಸಂಚಾಲಕರು, ಸಹ ಸಂಚಾಲಕರು, ಹಲವು ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಊರ ಪರವೂರ ಭಕ್ತರು ಪಾಲ್ಗೊಂಡಿದ್ದರು.