ಪೊಳಲಿ: ಕುಪ್ಪೆಪದವು- ಎಡಪದವು -ಗುರುಪುರ- ರೈಕಂಬ, ಮಳಲಿ, ಗಂಜಿಮಠ ಮುಂತಾದ ಕಡೆಗಳಿಂದ ಸೋಮವಾರ ಸಂಜೆ ಹೊರೆಕಾಣಿಕೆ ಅದ್ಧೂರಿ ಮೆರವಣಿಗೆಯಲ್ಲಿ ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರಕ್ಕೆ ಆಗಮಿಸಿತು.
ವಿವಿಧ ಭಜನ ತಂಡಗಳಿಂದ ಭಜನೆ, ವಾದ್ಯ- ಘೋಷ, ಬ್ಯಾಂಡ್- ಚೆಂಡೆವಾದನ ಗಳೊಂದಿಗೆ ಹಲವಾರು ಅಲಂಕೃತ ವಾಹನಗಳು ಬೃಹತ್ ಮೆರವಣಿಗೆಯಲ್ಲಿ ಗುರುಪುರ ಕೈಕಂಬದ ಪೊಳಲಿ ದ್ವಾರದ ಬಳಿ ಒಂದುಗೂಡಿ ಹೊರಕಾಣಿಕೆಯನ್ನು ತಂದು ದೇವಸ್ಥಾನಕ್ಕೆ ಅರ್ಪಿಸಲಾಯಿತು.
ಬ್ರಹ್ಮಕಲಶೋತ್ಸವಕ್ಕೆ ಅವಶ್ಯವಾಗಿರುವ ಅಕ್ಕಿ, ಅಕ್ಕಿಮುಡಿ, ವಿವಿಧ ತರಕಾರಿಗಳು, ಬಾಳೆ ಎಲೆ, ತೆಂಗಿನಕಾಯಿ, ಅಡಿಕೆ, ಫಲ ವಸ್ತುಗಳು, ಅಡಿಗೆ ಸಾಮಗ್ರಿಗಳು ನೂರಾರು ವಾಹನಗಳ ತುಂಬ ಆಗಮಿಸಿದ್ದು, ರಾಜ್ಯದ ಇನ್ನೂ ಹಲವೆಡೆಗಳಿಂದ ಹೊರೆಕಾಣಿಗೆ ಬರಲಿದೆ ಎನ್ನಲಾಗಿದೆ.
ಮೆರವಣಿಗೆಯಲ್ಲಿ ಸಾಗಿಬಂದವರಿಗೆ ದಾರಿಯುದ್ಧಕ್ಕೂ ಮಜ್ಜಿಗೆ, ಕಿತ್ತಳೆ ಹಣ್ಣು, ತಂಪು ಪಾನೀಯ ವ್ಯವಸ್ಥೆಯನ್ನು ಅಡ್ಡೂರು ಮತ್ತು ಪೊಳಲಿ ದ್ವಾರದ ಬಳಿ ಮುಸ್ಲಿಂ ಬಾಂಧವರು ವಿತರಿಸಿದರು.