Home ಧಾರ್ಮಿಕ ಸುದ್ದಿ ಹೊರಾಡಿ ಶ್ರೀ ರೌದ್ರ ಭೈರವಿ ಸಹಪರಿವಾರ ದೈವಸ್ಥಾನ: ಪುನರ್‌ ಪ್ರತಿಷ್ಠಾ ಮಹೋತ್ಸವ

ಹೊರಾಡಿ ಶ್ರೀ ರೌದ್ರ ಭೈರವಿ ಸಹಪರಿವಾರ ದೈವಸ್ಥಾನ: ಪುನರ್‌ ಪ್ರತಿಷ್ಠಾ ಮಹೋತ್ಸವ

1444
0
SHARE

ಬೆಳ್ತಂಗಡಿ : ನವೀಕರಣ ಗೊಂಡಿರುವ ಅಳದಂಗಡಿ ಸನಿಹದ ಹೊರಾಡಿ ಶ್ರೀ ರೌದ್ರ ಭೈರವಿ ಸಹಪರಿವಾರ ದೈವಸ್ಥಾನ ಸೂಳಬೆಟ್ಟು ಪುನರ್‌ ಪ್ರತಿಷ್ಠಾ ಮಹೋತ್ಸವ ಅರಸಿನಮಕ್ಕಿಯ ಪುರೋ ಹಿತ ಕಂಬ್ಳಿರಾಮ ಕೃಷ್ಣಖಾಡಿಲ್ಕರ್‌ ನೇತೃತ್ವದಲ್ಲಿ ನೆರವೇರಿತು.

ವಾಸ್ತು, ರಾಕ್ಷೋಘ್ನ ಹೋಮಗಳು, ದೀಪಾರಾಧನೆ ಸಂಪನ್ನಗೊಂಡವು. ನಾಗ ಪ್ರತಿಷ್ಠೆ, ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ ಸೇವೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆದವು.

ದೈವಸ್ಥಾನದ ಪರಿಸರದಲ್ಲಿ ಅಳದಂಗಡಿ ಅರಮನೆಯ ಡಾ| ಪದ್ಮಪ್ರಸಾದ ಅಜಿಲರು ಬಿಲ್ವದ ಸಸಿ, ಮುಂಡಾಜೆ ಸಿಎ ಬ್ಯಾಂಕ್‌ ಅಧ್ಯಕ್ಷ ಎನ್‌.ಎಸ್‌. ಗೋಖಲೆ ಕಹಿಬೇವು, ರಾಮಕೃಷ್ಣ ಖಾಡಿಲ್ಕರ್‌ ಸಂಪಿಗೆ ಹಾಗೂ ವಕೀಲ ಪ್ರತಾಪಸಿಂಹ ನಾಯಕ್‌ರೆಂಜೆ ಸಸಿ ನೆಟ್ಟು ನೀರೆರೆದರು.

ಹೆಬ್ಟಾರ ವೆಂಕಟೇಶ ಗೋಖಲೆ ನೇತೃತ್ವ ದಲ್ಲಿ ವಿಶ್ವನಾಥ ಡೋಂಗ್ರೆ ಅವರಲ್ಲಿಂದ ಭೂತದ ಭಂಡಾರ ತರಲಾಯಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಿರಂ ಜನ ಜೋಶಿ, ಕಾರ್ಯದರ್ಶಿ ರಾಜೇಂದ್ರ ಗೋಖಲೆ, ಉಪಾಧ್ಯಕ್ಷ ವಿಶ್ವನಾಥ ಡೋಂಗ್ರೆ, ಜತೆ ಕಾರ್ಯದರ್ಶಿ ದೀಪಕ್‌ ಆಠವಳೆ, ಕೋಶಾಧಿಕಾರಿ ಪ್ರವೀಣ ಚಂದ್ರ ಮೆಹೆಂದಳೆ ಸ್ವಾಗತಿಸಿದರು.

ಅಳದಂಗಡಿ ಶ್ರೀ ಮಹಾಗಣಪತಿ ದೇವ ಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ| ಶಶಿಧರ ಡೋಂಗ್ರೆ, ಅಳದಂಗಡಿ ಸಿಎ ಬ್ಯಾಂಕ್‌ಅಧ್ಯಕ್ಷ ಶಿವಭಟ್‌ ಕಟ್ಟೂರು, ಮಾಜಿ ಅಧ್ಯಕ್ಷ ಸುಭಾಶ್ಚಂದ್ರ ರೈ, ಮುಂಡಾಜೆ ಸಿಎ ಬ್ಯಾಂಕ್‌ ನಿರ್ದೇಶಕ ಪ್ರಕಾಶ ನಾರಾಯಣ ರಾವ್‌, ಬರಯ ಶ್ರೀ ಗೋಪಾಲಕೃಷ್ಣ ದೇವ ಸ್ಥಾನದ ಸಹಮೊಕ್ತೇಸರ ಪುರುಷೋತ್ತಮ ತಾಮØಣಕರ್‌, ಶಂಕರ ಹೆಗ್ಡೆ ಬೆಳ್ತಂಗಡಿ, ಉದ್ಯಮಿ ಪ್ರಸನ್ನ ಹೆಬ್ಟಾರ್‌, ನಿವೃತ್ತ ಶಿಕ್ಷಕ ಶ್ರೀರಂಗ ಜೋಶಿ, ನಿವೃತ್ತ ಅರಣ್ಯಾಧಿಕಾರಿ ಗಜಾನನ ನಾತು, ಸ್ಥಳೀಯರಾದ ಅಮ್ಮಿ ಪೂಜಾರಿ, ಜನಜಾಗೃತಿ ವೇದಿಕೆಯ ನಾರಾಯಣ ಸಾಲ್ಯಾನ್‌, ಸೂಳಬೆಟ್ಟು ಸ. ಕಿರಿಯ ಪ್ರಾಥಮಿಕ ಶಾಲಾಭಿವೃದ್ಧಿ ಮತ್ತು ಮೇಲುಸ್ತು ವಾರಿ ಸಮಿತಿ ಅಧ್ಯಕ್ಷ ಪ್ರಮೋದ್‌ ಪೂಜಾರಿ, ಸೂಳಬೆಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಹರೀಶ್‌ ಪೂಜಾರಿ, ಡಾ| ಎನ್‌.ಎಂ. ತುಳುಪುಳೆ, ಡಾ| ಅನಂತ ಭಟ್‌ ಗೇರುಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here