Home ನಂಬಿಕೆ ಸುತ್ತಮುತ್ತ ಹಿತೋಪದೇಶ ಹೇಳಿದ ಬದುಕಿನ ಗುಟ್ಟು!

ಹಿತೋಪದೇಶ ಹೇಳಿದ ಬದುಕಿನ ಗುಟ್ಟು!

1308
0
SHARE

ಈ ಪ್ರಪಂಚದಲ್ಲಿ ಯಾವುದೂ ಸರಿಯಿಲ್ಲ, ಯಾರೂ ಸರಿಯಲ್ಲ! ಯಾವುದಕ್ಕೆ ಹೇಗೆ ಸ್ಪಂದಿಸುವುದೋ ತಿಳಿಯುತ್ತಿಲ್ಲ. ಒಂದು ಸ್ವೀಕಾರ ಅಥವಾ ನಕಾರ ನಾಳೆಯನ್ನು ಉಳಿಸುತ್ತದೋ ಅಥವಾ ಕೆಡಿಸುತ್ತದೋ ಎಂಬುದೇ ಗೊತ್ತಾಗದ ಸ್ಥಿತಿ. ಬದುಕು ಎಂದರೆ ಬದುಕುವುದಾ? ಅಥವಾ ನಾಳೆಗಾಗಿ ಸಾಯುವುದಾ? ಸಾವಿನತ್ತ ಚಲಿಸುವುದಾ? ಬದುಕು ಎಂದರೆ ಗುರಿಯತ್ತ ದಾರಿ ಹುಡುಕುತ್ತ ಚಲಿಸುವುದಾ? ಈ ಚಲನೆಗೆ ಯಾವುದು ಸರಿಯಾದ
ಮಾರ್ಗ? ಬದುಕು ವಿಶಾಲವಾ? ಸಂಕುಚಿತವಾ? ಈ ಜಗದಲ್ಲಿ ನಾನೊಬ್ಬನೇ ಸರಿಯಾ? ಅಥವಾ ಸರಿಯಾದುದು ಇಲ್ಲವೇ ಇಲ್ಲವಾ? ನಾನಾದರೂ ಪೂರ್ತಿಯಾಗಿ ಸರಿಯಾಗಿ ಇದ್ದೇನೆಯಾ? ಯಾವುದು ಸರಿ? ಯಾವುದು ತಪ್ಪು ಹೀಗೆ ಬೆಳೆಯುತ್ತ ಬೆಳೆಯುತ್ತ ಕಾಡುವ ಪ್ರಶ್ನೆಗಳಿಗೆ ಕೊನೆಯಿಲ್ಲ. ಕೊನೆಗೂ ಗೊಂದಲದ ಅಂತ್ಯ. ಈ ಎಲ್ಲ ಪ್ರಶ್ನೆಗೆ ಉತ್ತರವಾಗಿ ಧರ್ಮ ಬದುಕಿನ ಮರ್ಮವನ್ನು ಹೇಳುತ್ತದೆ. ಧರ್ಮೋ ರಕ್ಷತಿ ರಕ್ಷಿತಃ!
ಒಂದಿಷ್ಟು ಸುಲಭದ ದಾರಿಗಳು ಇದ್ದಾಗ ಬದುಕು ಸುಂದರ. ನಮ್ಮೊಳಗಿನ ನಾವು ಒಂದು ಸರಳ ತತ್ತ್ವಗಳಿಗೆ ನಮ್ಮನ್ನು ಒಗ್ಗಿಸಿಕೊಂಡು, ಆ ದಾರಿಯಲ್ಲಿ ಸಾಗಿದಾಗ ಬದುಕು ಪ್ರಶ್ನೆಯಾಗಿ ಕಾಡದು. ಅಂತಹ ಬದುಕಿಗೆ ತೀರಾ ಸರಳವೂ ಅನುಸರಿಸಲು ಯೋಗ್ಯವೂ ಆದ ಸೂತ್ರವನ್ನು ಹಿತೋಪದೇಶ ಹೇಳುತ್ತದೆ.

ವರಂ ಕಾರ್ಯಂ ಮೌನಂ ನ ಚ ವಚನ ಮುಕ್ತಂ ಯದನೃತಂ
ವರಂ ಕೈಬ್ಯಂ ಪುಂಸಾಂ ನ ಚ ಪರಕಲತ್ರಾಭಿಗಮ್ಮನಮ್|
ವರಂ ಪ್ರಾಣತ್ಯಾಗೋ ನ ಚ ಪಿಶುನವಾದೇಷ್ವಭಿರತಿಃ
ವರಂ ಭಿಕ್ಷಾಶಿತ್ವಂ ನ ಚ ಪರಧನಾಸ್ವಾದನಬಲಮ್ ||
ಮೌನವಾಗಿದ್ದರೂ ಒಳ್ಳೆಯದೇ; ಆದರೆ ಸುಳ್ಳು ಮಾತುಗಳನ್ನು ಆಡುವುದು ಸಲ್ಲದು. ಅನಗತ್ಯ ವಿಚಾರಗಳಲ್ಲಿ, ಕೆಲವೊಮ್ಮೆ ಅನಗತ್ಯವಾಗಿ ಮಾತನಾಡುವ ಅಭ್ಯಾಸ ಮನುಷ್ಯನ ಹೀನ ಸ್ಥಿತಿ. ಅಂತಹ ಸಂಧರ್ಬಗಳಲ್ಲಿ ಮಾತೇ ಮಖ್ಯವಾಗಿ, ಸುಳ್ಳನ್ನು ಹೇಳುವ ಅವಕಾಶ
ಹೆಚ್ಚು. ಈ ಸುಳ್ಳುಮಾತುಗಳು ನಮ್ಮ ಹಾಗೂ ಪರರ ಬದುಕಿಗೂ ಮಾರಕವೇ ಆಗಿದೆ. ಪುರುಷನಾದವನಿಗೆ ನಪುಂಸಕತ್ವವಿದ್ದರೂ ತೊಂದರೆಯಿಲ್ಲ; ಆತ ಪರಸ್ತ್ರೀ ಗಮನನಾಗಬಾರದು. ಇದು ಜೀವನಕ್ಕೆ ಅಮೂಲ್ಯವಾದ ನುಡಿ. ಯಾರು ಪರಸ್ತ್ರೀಮೋಹಿತನೋ ಅವನಿಂದ ಅವನ ಸ್ವಂತ ಜೀವನವೂ ಸಮಾಜವೂ ಸಂಸ್ಕೃತಿಯೂ ಅಧೋಗತಿಯನ್ನು ಕಾಣುತ್ತದೆ. ಪ್ರಾಣತ್ಯಾಗವಾದರೂ ಸರಿ; ಆದರೆ ಚಾಡಿ ಹೇಳುವುದರಲ್ಲಿ ಆಸಕ್ತಿ ಸಲ್ಲದು. ಭಿಕ್ಷೆ ಬೇಡಿ ಹೊಟ್ಟೆ ಹೊರೆದುಕೊಳ್ಳುವುದೂ ಶ್ರೇಷ್ಠ; ಆದರೆ ಮತ್ತೊಬ್ಬರ ಧನದ ಸವಿಯಿಂದ ಬರುವ ಬಲ ಮಾತ್ರ ಬೇಡ.

ಇದು ತುಂಬಾ ಸೂಕ್ಷ್ಮವೂ ಸರಳವೂ ಆದ ಸೂತ್ರ. ಮಾತು ಮತ್ತು ಪರಸ್ತ್ರೀ ಮೋಹ ನಮ್ಮ ದೌರ್ಬಲ್ಯ. ಇದನ್ನು ಮೊದಲು ಜಯಿಸಬೇಕು. ಚಾಡಿ ಹೇಳುವುದು ಪ್ರಾಣತ್ಯಾಗಕ್ಕಿಂತಲೂ ಕೆಟ್ಟದ್ದಂತೆ. ಇದು ಕಲಹಕ್ಕೆ ಕಾರಣವಾಗುವ ಸಂಗತಿಯೂ ಹೌದು. ಇದರಿಂದ ಬಲು ದೂರ ಇರಬೇಕು. ಪರರ ಧನದ ಮೇಲಿನ ಆಸೆ ಅಥವಾ ಆಸರೆ ಹಂಗಿನರಮನೆಯೇ ಆಗಿದೆ. ಹಾಗಾಗಿ ಸ್ವಂತ ಸುಖದ ಬದುಕಿಗೆ ಇಂತಹ ಹಣ ಯಾವತ್ತೂ ಸಹಾಯಕ್ಕೊದಗಿಬರದು. ಇವಿಷ್ಟನ್ನು ಅರಿತುಕೊಂಡು ಅನುಸರಿಸಿಕೊಂಡು ಬಂದರೆ ಬದುಕು ಸರಳ ಮತ್ತು ಸುಸೂತ್ರವಾಗಿ ಸಾಗುವಲ್ಲಿ ದಾಪುಗಾಲು ಇಟ್ಟಂತೆಯೇ!

ವಿಷ್ಣು ಭಟ್ ಹೊಸ್ಮನೆ.

ಓಂ ಶ್ರೀ ಸಾಯಿ ಜ್ಯೋತಿಷ್ಯಾಲಯ
South Canara’s Famous Asrologer
Family issue, ಮದುವೆಯಲ್ಲಿ ವಿಘ್ನ, ಸತಿ-ಪತಿ ಕಲಹ, Court Case, ವಶೀಕರಣ, Love problems, ಸದಾ ಕುಟುಂಬದಲ್ಲಿ ಕಲಹ, Money problem, ಕೆಲಸದಲ್ಲಿ ಕಿರಿಕಿರಿ, ಮಕ್ಕಳ ಸಮಸ್ಯೆ, ವ್ಯಾಪಾರದಲ್ಲಿ ಅಡೆ-ತಡೆ, Loan Issue, ನಿಮ್ಮ ಯಾವುದೇ ಸಮಸ್ಯೆಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ.
ಹೊಟೇಲ್ ದುರ್ಗಾ ಇಂಟರ್ ನ್ಯಾಶನಲ್, ರೂಂ. ನಂ. 310, 3ನೇ ಮಹಡಿ, ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ, ಉಡುಪಿ.
ಪಂಡಿತ್ ಸಾಯಿನಾಥ್ ಜೋಶಿ : Ph- 98449-44242

LEAVE A REPLY

Please enter your comment!
Please enter your name here