Home ಧಾರ್ಮಿಕ ಕಾರ್ಯಕ್ರಮ ಹಿರಿಯಡಕ: 83 ಅಡಿ ಉದ್ದದ ಧ್ವಜಸ್ತಂಭಕ್ಕೆ ಕಲಶಾಭಿಷೇಕ

ಹಿರಿಯಡಕ: 83 ಅಡಿ ಉದ್ದದ ಧ್ವಜಸ್ತಂಭಕ್ಕೆ ಕಲಶಾಭಿಷೇಕ

1711
0
SHARE

ಹೆಬ್ರಿ : ಸುಮಾರು 800 ವರ್ಷ ಇತಿಹಾಸವಿರುವ ಹಿರಿಯಡಕ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವ ಸ್ಥಾನದ ಜೀರ್ಣೋದ್ಧಾರ ಪ್ರತಿಷ್ಠಾಪಿಸಿದ ಕರಾವಳಿ ಭಾಗದಲ್ಲೇ ಅತಿ ಎತ್ತರದ 83 ಅಡಿ ಉದ್ದದ ಧ್ವಜಸ್ತಂಭವನ್ನು ಪ್ರತಿಷ್ಠಾಪಿಸಿ ಕಲಶಾಭಿಷೇಕ ಎ. 21ರಂದು ನಡೆಯಿತು.

ದೇವಳದ ತಂತ್ರಿಗಳಾದ ಲಕ್ಷ್ಮೀ ನಾರಾಯಣ ತಂತ್ರಿ ಹಾಗೂ ಗುರುರಾಜ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಹಾಗೂ ಮಹಾ ರುದ್ರ ಯಾಗ ನಡೆಯಿತು.

ಚರಿಷ್ಮಾ ಬಿಲ್ಡರ್ಸ್‌ ಮುಂಬಯಿಯ ಸುಧೀರ್‌ ಶೆಟ್ಟಿ, ಮುಂಬಯಿ ಕೃಷ್ಣಾ ಪ್ಯಾಲೇಸ್‌ಕೃಷ್ಣಾ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಅಂಜಾರು ಬೀಡು ಸುಭಾಶ್ಚಂದ್ರ ಹೆಗ್ಡೆ, ಪಡ್ಡಮ್‌ ಬೀಡು ಹರ್ಷವರ್ಧನ ಹೆಗ್ಡೆ, ಕಾರ್ಯಾಧ್ಯಕ್ಷ ಗೋವರ್ಧನದಾಸ್‌ ಹೆಗ್ಡೆ, ಕಾರ್ಯದರ್ಶಿ ಅಮರನಾಥ ಶೆಟ್ಟಿ, ಖಜಾಂಚಿ ಎಚ್‌. ಕೃಷ್ಣಮೂರ್ತಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಸುಮಾರು 15 ಸಾವಿರಕ್ಕೂ ಮಿಕ್ಕಿ ಭಕ್ತರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here