ಉಪ್ಪಿನಂಗಡಿ: ಹಿರೇಬಂಡಾಡಿ ಸಮೀಪದ ಉಳತ್ತೋಡಿ ಶ್ರೀ ಷಣ್ಮುಖ ದೇವಸ್ಥಾನ ಜೀರ್ಣೋದ್ಧಾರ, ಬ್ರಹ್ಮಕಲಶ ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗ್ರಾಮಸ್ಥರ ಸಭೆ ದೇವಸ್ಥಾನದ ವಠಾರದಲ್ಲಿ ಜರಗಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ ಪಡ್ಪು ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ಪ್ರಧಾನ ಅರ್ಚಕ ಗೋಪಾಲಕೃಷ್ಣ ತೋಳ್ಪಾಡಿತ್ತಾಯ ಪ್ರಾಸ್ತಾವಿಕ ಮಾತನಾಡಿ, 18 ವರ್ಷಗಳ ಹಿಂದೆ ದೇವಸ್ಥಾನದ ಬ್ರಹ್ಮಕಲಶೋತ್ಸವ ನೆರವೇರಿತ್ತು. ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಂತೆ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶ ನಡೆಯಬೇಕಿದೆ. ಸುಮಾರು 2.50 ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನ ಸಂಪೂರ್ಣ ಶಿಲಾಮಯಗೊಂಡು, ಜೀರ್ಣೋದ್ಧಾರ ಗೊಳ್ಳಲಿದೆ. ಎರಡು ವರ್ಷಗಳೊಳಗೆ ಬ್ರಹ್ಮಕಲಶ ನಡೆಯಬೇಕಿದೆ. ಇದಕ್ಕಾಗಿ ಕೆಲವು ಕಮಿಟಿಗಳನ್ನು ರಚಿಸಬೇಕಿದೆ. ಗ್ರಾಮದ ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು.
ಜೀರ್ಣೋದ್ಧಾರ ಸಮಿತಿ
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಜನಾರ್ದನ ಗೌಡ ಶಾಂತಿತ್ತಡ್ಡ, ಉಪಾಧ್ಯಕ್ಷರಾಗಿ ಮಾಧವ ಹೆನ್ನಾಳ, ನೀಲಯ್ಯ ಬಾರ್ಲ, ಕಾರ್ಯದರ್ಶಿಯಾಗಿ ಬಾಲಚಂದ್ರ ಗುಂಡ್ಯ, ನಿತಿನ್ ತಾರಿತ್ತಡಿ, ಅಶೋಕ ಕುಮಾರ್ಪಡ್ಪು, ಬೆಳಿಯಪ್ಪ ಜಾಲು, ಖಜಾಂಚಿಯಾಗಿ ನಾರಾಯಣ ಕನ್ಯಾನ, ಸದಸ್ಯರಾಗಿ ಶ್ರೀಧರ ಮಠಂದೂರು, ಕುಶಾಲಪ್ಪ ಕೋಟ್ಯಾನ್, ಪುಷ್ಪಾವತಿ, ಪರ್ವಾತಿ, ದೇವಮ್ಮ ಕುಬಲ, ವಿಠ್ಠಲ ಪರಕೊಡಂಗೆ, ದೇವಪ್ಪ ಪೂಜಾರಿಪಡ್ಪು , ಸತೀಶ್ ಶೆಟ್ಟಿ ಹೆನ್ನಾಳ, ರೋಹಿತ್ ಸರೋಳಿ ಅವರನ್ನು ಆಯ್ಕೆ ಮಾಡಲಾಯಿತು. ವಿದ್ಯಾ, ಬಾಬು ನಾೖಕ ಗುಂಡಿಗದೆ ಉಪಸ್ಥಿತರಿದ್ದರು. ರೋಹಿತ್ ಸರೋಳಿ ಸ್ವಾಗತಿಸಿ, ಚಂದ್ರಾವತಿ ವಂದಿಸಿದರು.