Home ಧಾರ್ಮಿಕ ಸುದ್ದಿ ಹಿಂದೂ ಯುವಸೇನೆ ಗಣೇಶೋತ್ಸವ ಸಮಿತಿ: ಧಾರ್ಮಿಕ ಸಭೆ

ಹಿಂದೂ ಯುವಸೇನೆ ಗಣೇಶೋತ್ಸವ ಸಮಿತಿ: ಧಾರ್ಮಿಕ ಸಭೆ

1120
0
SHARE

ಆರೋಗ್ಯಕರ ಸಮಾಜ ನಿರ್ಮಾಣವಾಗಲಿ: ನಳಿನ್‌
ಮಂಗಳೂರು : ಯುವ ಜನಾಂಗ ಮಾದಕ ಪ್ರಿಯರಾಗದೆ, ಮೋದಕಪ್ರಿಯರಾಗಿ ತಮ್ಮತನವನ್ನು ಗಟ್ಟಿ ಗೊಳಿಸಬೇಕು. ಹಿಂದೂ ಸಂಘಟನೆಯ ಮೂಲಕ ಯುವಕರನ್ನು ಆರೋಗ್ಯಕರ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ತಯಾರಿಸಲಾಗುತ್ತಿರುವುದು ಭಾರತ ಮಾತೆಗೆ ಸಲ್ಲಿಸುತ್ತಿರುವ ಸೇವೆಯಾಗಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಅಭಿಪ್ರಾಯಪಟ್ಟರು.

ಹಿಂದೂ ಯುವ ಸೇನಾ ಆಶ್ರಯದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಯಲ್ಲಿ 25 ವರ್ಷಗಳಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಶಶಿಕಾಂತ್‌ ನಾಗ್ವೇಕರ್‌ ಅವರನ್ನು 26ನೇ ವರ್ಷದ ಮಂಗಳೂರು ಗಣೇಶೋತ್ಸವದ ಧಾರ್ಮಿಕ ಸಭೆಯಲ್ಲಿ ಅಭಿನಂದಿಸಿ ಅವರು ಮಾತನಾಡಿದರು. 75 ವರ್ಷದ ಇತಿಹಾಸ ಇರುವ ಗಣೇಶೋತ್ಸವವನ್ನು ತಾನು ನೋಡಿ ದ್ದೇನೆ. ಆದರೆ ಗಣೇಶೋತ್ಸವ ಅಧ್ಯಕ್ಷರಾಗಿ 25 ವರ್ಷಗಳವರೆಗೆ ಮುನ್ನಡೆಸಿದನ್ನು ಪ್ರಥಮ ಬಾರಿಗೆ ನೋಡುತ್ತಿದ್ದೇನೆ ಎಂದು ಅವರು ಹೇಳಿದರು.

ಬಿಕರ್ನಕಟ್ಟೆ ಸಿದ್ಧಿವಿನಾಯಕ ದೇವ ಸ್ಥಾನದ ಮೊಕ್ತೇಸರ ವಿವೇಕಾನಂದ ನೀಗ್ಲೆ, ಉದ್ಯಮಿ ನವೀನ್‌ಚಂದ್ರ ರೈ, ಮ್ಯುಥಾಯಿ ಅಸೋಸಿಯೇಶನ್‌ ರಾಜ್ಯಾಧ್ಯಕ್ಷ ರಾಜಗೋಪಾಲ ರೈ, ಸಂಸ್ಕಾರ ಭಾರತಿಯ ಜಿಲ್ಲಾಧ್ಯಕ್ಷ ಪುರುಷೋತ್ತಮ ಭಂಡಾರಿ, ಬಂಟ್ವಾಳ ಭೂನ್ಯಾಯ ಮಂಡಳಿಯ ಸದಸ್ಯ ದಿವಾಕರ ಪಂಬದಬೆಟ್ಟು, ಜಿಲ್ಲಾ ಟ್ಯಾಕ್ಸಿ ಮೆನ್‌- ಮ್ಯಾಕ್ಸಿಕ್ಯಾಬ್‌ ಅಸೋಸಿಯೇಶನ್‌ ಕಾರ್ಯದರ್ಶಿ ಆನಂದ ಕೆ. ಮುಖ್ಯ ಅತಿಥಿಗಳಾಗಿದ್ದರು.

ಹಿಂದೂ ಯುವ ಸೇನಾ ಅಧ್ಯಕ್ಷ ಯಶೋಧರ ಚೌಟ, ಗಣೇಶೋತ್ಸವ ಸಮಿತಿ ಪ್ರ.ಕಾರ್ಯದರ್ಶಿ ರಾಮಚಂದ್ರ ಚೌಟ, ಖಜಾಂಚಿ ಸುರೇಶ್‌ ಶೆಟ್ಟಿ ಕೊಟ್ಟಾರ ಕ್ರಾಸ್‌, ಉಪಾಧ್ಯಕ್ಷ ಉಮೇಶ್‌ ಪೈ, ಕಿರಣ್‌ ರೈ ಬಜಾಲ್‌, ಜಿಲ್ಲಾಧ್ಯಕ್ಷ ವೀರಪ್ಪ ಮೂಡುಶೆಡ್ಡೆ, ಕಾರ್ಯದರ್ಶಿ ರವಿಚಂದ್ರ ಎಕ್ಕೂರು, ದೇವದಾಸ್‌ ಭವಾನಿ ಮೋಟಾರ್ಸ್‌, ನವೀನ್‌ ಪೂಜಾರಿ ಮೂಡುಶೆಡ್ಡೆ, ಚಿದಾನಂದ ಕಲ್ಲಡ್ಕ, ಸ್ನೇಹಾ ಹೇಮಂತ್‌, ಸುಜಾತಾ ಕೊಟ್ಟಾರಿ, ಸುಮತಿ ಉಪಸ್ಥಿತರಿದ್ದರು.

1994ರಿಂದ 2018ರವರೆಗೆ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿರುವ ಕಲ್ಪನಾ ಸ್ವೀಟ್ಸ್‌ನ ಶಶಿಕಾಂತ್‌ ನಾಗ್ವೇಕರ್‌ ಅವರನ್ನು ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿ ಮತ್ತು ವಿವಿಧ ಶಾಖೆಗಳಿಂದ ಅಭಿನಂದಿಸಲಾಯಿತು. ಪ್ರವೀಣ್‌ ಎಸ್‌. ಕುಂಪಲ ಅಭಿನಂದನಾ ಭಾಷಣಗೈದರು.

ಸಮಿತಿ ಗೌರವಾಧ್ಯಕ್ಷ ಭಾಸ್ಕರಚಂದ್ರ ಶೆಟ್ಟಿ ಪ್ರಸ್ತಾವನೆಗೈದರು. ಕಿರಣ್‌ ಬಜಾಲ್‌ ಸ್ವಾಗತಿಸಿದರು. ವೀಣಾ ಮಂಗಳ ವಂದಿಸಿದರು. ಭರತ್‌ರಾಜ್‌ ಕೃಷ್ಣಾಪುರ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here