ಉಡುಪಿ : ಹೆರ್ಗ ಕೊಡಂಗೆ ಪರಿಸರದಲ್ಲಿ ದಿ| ಅಂಗರ ಪೂಜಾರಿ ಕುಟುಂಬಸ್ಥರು ಹಾಗೂ ಪರಿಸರದವರು ಆರಾಧಿಸಿಕೊಂಡು ಬರುತ್ತಿದ್ದ ಶ್ರೀ ನಾಗಬ್ರಹ್ಮಾದಿ ಪರಿವಾರ ದೇವತಾ ಸಾನಿಧ್ಯದ ಜೀರ್ಣೊದ್ಧಾರ, ಪ್ರತಿಷ್ಠಾ ಮಹೋತ್ಸವ ನಡೆಯಿತು.
ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಧಾರ್ಮಿಕ ಸಭೆಯನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದರು. ಸಮಿತಿ ಅಧ್ಯಕ್ಷ ಕೊಡಂಗೆ ಸುಧಾಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ವೇ|ಮೂ| ವಿದ್ವಾನ್ ಹೆರ್ಗ ರವೀಂದ್ರ ಭಟ್, ಹರಿಪ್ರಸಾದ್ ಭಟ್ ಶುಭಾಶಂಸನೆಗೈದರು. ಪರ್ಕಳ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಹಿರಿಯಣ್ಣ ಪೂಜಾರಿ, ಸಾನ್ನಿಧ್ಯದ ವಾಸ್ತು ಶಿಲ್ಪಿ ಹೇಮಂತ್ ಕುಮಾರ್ ಪರ್ಕಳ, ಕಾರ್ಯಾಧ್ಯಕ್ಷ ಪ್ರಭಾಕರ್ ಪೂಜಾರಿ, ಕೋಶಾಧಿಕಾರಿ ಶಂಕರ ಪೂಜಾರಿ ಉಪಸ್ಥಿತರಿದ್ದರು. ಸಮಿತಿ ಪದಾಧಿಕಾರಿಗಳು, ಗೌ| ಸಲಹೆಗಾರರು, ಯುವ ಸಮಿತಿ, ಮಹಿಳಾ ಮಂಡಳಿ ಸದಸ್ಯರು, ಭಕ್ತರು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಸಹಕರಿಸಿದ ದಾನಿಗಳನ್ನು ಸಮ್ಮಾನಿಸಲಾಯಿತು. ಪ್ರ.ಕಾರ್ಯದರ್ಶಿ ರಮೇಶ್ ಸುವರ್ಣ ಸ್ವಾಗತಿಸಿ, ವಂದಿಸಿದರು.