ಪಡುಬಿದ್ರಿ: ಪುರಾತನ ಮಂದಿರ, ದೇಗುಲಗಳನ್ನು ಪುನರ್‌ನಿರ್ಮಾಣ ಮಾಡುವುದುರಿಂದ ಸಾಮಾಜಿಕ ಅಭಿವೃದ್ಧಿಯೊಂದಿಗೆ ಗ್ರಾಮಮಾಭಿವೃದ್ಧಿಯೂ ಸಾಧ್ಯವಾಗುತ್ತದೆ ಎಂದು ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಕಾಂತು ಲಕ್ಕಣ ಗುರಿಕಾರ ಯಾನೆ ಪಟೇಲ್ ಯಾದವ ಜಿ. ಬಂಗೇರ ಹೇಳಿದರು.
ಅವರು ಮೇ 26ರಂದು ಹೆಜಮಾಡಿ ಕೋಡಿ ಬಿಲ್ಲವರ ಶ್ರೀ ವಿಠೊಭ ಗೋಪಾಲಕೃಷ್ಣ ಭಜನಾ ಮಂದಿರದ ನೂತನ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಂಬಯಿ ಭಾರತ್ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಹಾಗೂ ಮಾಜಿ ಕಾರ್ಯಾಧ್ಯಕ್ಷ ವಾಸುದೇವ ಆರ್. ಕೋಟ್ಯಾನ್ ಮುಖ್ಯ ಅತಿಥಿಯಾಗಿ ಮಾತನಾಡಿ, ಪೂಜೆ ಪುರಸ್ಕಾರಗಳಿಂದ ಸಮೃದ್ಧಿ ಖಚಿತ. ಮಂದಿರವು ಮುಂದಿನ ಎಪ್ರಿಲ್ ಒಳಗೆ ನಿರ್ಮಾಣಗೊಳ್ಳಲಿ. ಇದಕ್ಕೆ ಬೇಕಾದ ಸಹಕಾರ ನೀಡಲು ತಾವು ಸಿದ್ಧ ಎಂದರು.
ಸುಮಾರು 75 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಭಜನಾ ಮಂದಿರಕ್ಕೆ ಗುತ್ತಿಗೆದಾರ ಲೋಕೇಶ್ ಅಮೀನ್, ಧನಂಜಯ ಸಾಲ್ಯಾನ್, ಮತ್ತು ಮಂದಿರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಮೋಹನ್‌ದಾಸ್ ಹೆಜಮಾಡಿ ಶಿಲಾನ್ಯಾಸ ನೆರವೇರಿಸಿದರು. ಅರ್ಚಕ ಹರಿ ಭಟ್ ಮತ್ತು ಅನಂತ್ ಭಟ್ ಧಾರ್ಮಿಕ ವಿಧಿ ನೆರವೇರಿಸಿದರು.
ಬೆಳಗಾವಿ ರಾಮ್‌ದೇವ್ ಗ್ರೂಪ್ ಆಫ್ ಹೋಟೆಲ್ಸ್ ಎಂಡಿ ಬೋಳ ರಘುರಾಮ ಶೆಟ್ಟಿ, ಪಡುಬಿದ್ರಿ ಕೊಡಮಣಿತ್ತಾಯ ದೈವಸ್ಥಾನದ ಕೇಶವ ಕೆ. ಅಮೀನ್, ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ದಯಾನಂದ ಹೆಜಮಾಡಿ, ಮೂಲ್ಕಿ ನಾಲ್ಕುಪಟ್ಣ ಮೊಗವೀರ ಸಭಾ ಅಧ್ಯಕ್ಷ ಗುರುವಪ್ಪ ಕೋಟ್ಯಾನ್, ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ, ಗೀತಾ ಸಾಲ್ಯಾನ್ ಮುಖ್ಯ ಅತಿಥಿಗಳಾಗಿದ್ದರು.
ಮಂದಿರದ ಆಡಳಿತ ಮಂಡಳಿಯ ಅಧ್ಯಕ್ಷ ಉಮಾಶಂಕರ್ ಅಮೀನ್, ಉಪಾಧ್ಯಕ್ಷರಾದ ಭೋಜ ಕೋಟ್ಯಾನ್ ಮತ್ತು ತಾರನಾಥ ಅಮೀನ್, ಕಾರ್ಯದರ್ಶಿ ಬಿ. ಬಿ. ವೇಣುಗೋಪಾಲ್, ಮಹಿಳಾ ಮಂಡಳಿ ಅಧ್ಯಕ್ಷೆ ಸಹನಾ ವೇಣುಗೋಪಾಲ್, ಜಯಕರ್ ಹೆಜಮಾಡಿ, ಹರೀಶ್ ಶಾಂತಿ, ದೊಂಬ ಕೆ.ಪೂಜಾರಿ, ಹೇಮಾನಂದ ಪುತ್ರನ್, ರವೀಂದ್ರ ಕೋಟ್ಯಾನ್, ಜಿನರಾಜ್ ಬಂಗೇರ, ಚೆನ್ನಪ್ಪ ಕೆ. ಸುವರ್ಣ, ಸದಾಶಿವ ಕೋಟ್ಯಾನ್, ವಿಠಲ ಕಾಂಚನ್, ವಾಮನ ಕೋಟ್ಯಾನ್ ನಡಿಕುದ್ರು, ವಿನೋದ್ ಕೋಟ್ಯಾನ್, ವಸಂತ ದೇವಾಡಿಗ, ನಿರಂಜನ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಪತ್ರಕರ್ತ ಪರಮಾನಂದ ಸಾಲ್ಯಾನ್ ಕಾರ್ಯಕ್ರಮ ನಿರ್ವಹಿಸಿದರು. ಮೋಹನ್‌ದಾಸ್ ಹೆಜಮಾಡಿ ಸ್ವಾಗತಿಸಿದರು. ಶಿವರಾಮ ಜಿ. ಅಮೀನ್ ವಂದಿಸಿದರು.