ಹೆಬ್ರಿ : ಹೆಬ್ರಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ಜೀಣೋದ್ಧಾರದ ಪ್ರಯುಕ್ತ ನೂತನವಾಗಿ ನಿರ್ಮಿಸಿದ ಸುತ್ತುಪೌಳಿ ಸಮರ್ಪಣೆ, ಕಲಶಾಭಿಷೇಕ ಕಾರ್ಯಕ್ರಮ ಫೆ. 5ರಂದು ತಂತ್ರಿಗಳಾದ ಪ್ರೇಮಚಂದ್ರ ಐತಾಳ್ ಅವರ ಧಾರ್ಮಿಕ ನೇತೃತ್ವದಲ್ಲಿ ಅರ್ಚಕ ವೃಂದದ ಸಹಕಾರದೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಬೆಳಗ್ಗೆ ಕಲಶಾಧಿವಾಸ ಹೋಮ, ಕಲಶ ಪ್ರತಿಷ್ಠೆ, ದ್ರವ್ಯ ಕಲಶಾಭಿಷೇಕ, ಸುತ್ತುಪೌಳಿ ಸಮರ್ಪಣೆ, ಮಹಾಪೂಜೆ ನಡೆಯಿತು. ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡರು. ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ತಾರಾನಾಥ ಬಲ್ಲಾಳ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ನಾಯಕ್ ಮೊದಲಾದವರಿದ್ದರು.