Home ಧಾರ್ಮಿಕ ಸುದ್ದಿ ನೂತನ ಗರ್ಭಗುಡಿ ಸಮರ್ಪಣೆ, ಪುನಃಪ್ರತಿಷ್ಠೆ, ಧಾರ್ಮಿಕ ಕಾರ್ಯಕ್ರಮ

ನೂತನ ಗರ್ಭಗುಡಿ ಸಮರ್ಪಣೆ, ಪುನಃಪ್ರತಿಷ್ಠೆ, ಧಾರ್ಮಿಕ ಕಾರ್ಯಕ್ರಮ

ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಸೂರಿಮಣ್ಣು ಮಠ

995
0
SHARE

ಹೆಬ್ರಿ: ಸುಮಾರು 500 ವರ್ಷಗಳ ಇತಿಹಾಸವಿರುವ ಹೆಬ್ರಿ ತಾ| ಶಿವಪುರ ಗ್ರಾ.ಪಂ. ವ್ಯಾಪ್ತಿಯ ಸೂರಿಮಣ್ಣು ಮಠ ಲಕ್ಷ್ಮೀನಾರಾಯಣ ದೇವಸ್ಥಾನ ಇದೀಗ 75 ಲಕ್ಷ ರೂ. ವೆಚ್ಚ ದಲ್ಲಿ ಜೀರ್ಣೋದ್ಧಾರಗೊಂಡಿದ್ದು ಬ್ರಹ್ಮ ಕಲಶೋತ್ಸವದ ಸಂಭ್ರಮದದಲ್ಲಿದೆ

ಕ್ಷೇತ್ರದ ಅರ್ಚಕ, ದೇವಸ್ಥಾನದ ಮುಖ್ಯಸ್ಥ ಸದಾಶಿವ ಉಪಾಧ್ಯಾಯ ಅವರ ಮುಂದಾಳತ್ವದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಹುಣ್ಸೆಅಡಿ ಸುರೇಶ್‌ ಶೆಟ್ಟಿ, ಗುಂಡಾಳ ಸದಾಶಿವ ಶೆಟ್ಟಿ, ಪ್ರಸನ್ನ ಶೆಟ್ಟಿ, ಊರಿನ ಗಣ್ಯರ ನೇತೃತ್ವದಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ನೂತನ ವಾಗಿ ಶ್ರೀ ಲಕ್ಷ್ಮೀನಾರಾಯಣ ದೇವರ ಭವ್ಯ ಶಿಲಾಮಯ ಗರ್ಭಗುಡಿ, ಸುತ್ತುಪೌಳಿ, ತೀರ್ಥಮಂಟಪ,ಯಾಗಶಾಲೆ, ಸಭಾ ಮಂಟಪ ನಿರ್ಮಾಣಗೊಂಡಿದೆ.

ಮೇ 9ರಿಂದ 12ರ ತನಕ ದೇವರ ಪುನಃ ಪ್ರತಿಷ್ಠೆ, ಬ್ರಹ್ಮಕಲಾಭಿಷೇಕ. ಭಜನ ಮಂಗಲೋತ್ಸವ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ. ಮೇ 9ರಂದು ಋತ್ವಿಜರ ಸ್ವಾಗತದ ಬಳಿಕ ತೋರಣ ಮುಹೂರ್ತ ಸಹಿತ ಬ್ರಹ್ಮಕಲಶೋತ್ಸವದ ಧಾರ್ಮಿಕ ವಿಧಿ ವಿಧಾನಗಳಿಗೆ ಚಾಲನೆ ದೊರೆಯಲಿದೆ. 10ರಂದು ಶಿರೂರು ಮತ್ತು ಸೋದೆ ವಾದಿರಾಜ ಮಠದ ಪಟ್ಟದ ದೇವರ ಪೂಜೆ ಬಳಿಕ ವೇ|ಮೂ| ಪಾಡಿಗಾರು ಶ್ರೀನಿವಾಸ ತಂತ್ರಿ ಅವರ ನೇತೃತ್ವದಲ್ಲಿ ಮತ್ತು ರಾಘವೇಂದ್ರ ಉಪಾಧ್ಯಾಯ ಚೇಳಾೖರು ಅವರ‌ ಮಾರ್ಗದರ್ಶನದಲ್ಲಿ ಶ್ರೀ ಸೋದೆ ವಾದಿರಾಜ ಮಠದ ಶ್ರೀ ವಿಶ್ವಲ್ಲಭ ತೀರ್ಥ ಶ್ರೀಪಾದರ ದಿವ್ಯ ಹಸ್ತದಲ್ಲಿ ದೇವರ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ನಡೆಯಲಿದೆ.

ಸಾರ್ವಜನಿಕ ಅನ್ನ ಸಂತರ್ಪಣೆ, ಧಾರ್ಮಿಕ ಸಭೆ, ಭೂತರಾಜರಿಗೆ ವಿಶೇಷ ಪರಿವಾರ ಪೂಜೆ, ದೈವಗಳಿಗೆ ನೇಮೋತ್ಸವ ನಡೆಯಲಿದೆ. ಮೇ 11ರಂದು ಭಜನ ಮಂಗಲೋತ್ಸವದ ಆರಂಭ, ವಿಷ್ಣುಯಾಗ, ಚಂಡಿಕಾ ಯಾಗ, ಮಹಾಪೂಜೆ, ರಾತ್ರಿ ರಂಗಪೂಜೆ ನಡೆದು 12ರ ಸೂರ್ಯೋದಯದ ವರೆಗೆ ಭಜನೆ ಮಂಗಲೋತ್ಸವ ನಡೆಯಲಿದೆ.

ಮೇ 10ರಂದು ಧಾರ್ಮಿಕ ಸಭೆ
ಮೇ 10ರಂದು ಸಂಜೆ ಅದಮಾರು ಮಠಾದೀಶ ವಿಶ್ವಪ್ರಿಯ ತೀರ್ಥ ಶ್ರೀಪಾದರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಸೋದೆ ವಾದಿರಾಜ ವ್ಮಠದ ವಿಶ್ವವಲ್ಲಭ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ.

ಶಾಸಕ ಸುನಿಲ್ ಕುಮಾರ್‌, ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ, ಸಂಸದೆ ಶೋಭಾ ಕರಂದ್ಲಾಜೆ, ಉಡುಪಿ ಶಾಸಕ ರಘುಪತಿ ಭಟ್, ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ, ಉದ್ಯಮಿ ಗುರ್ಮೆ ಸುರೇಶ ಶೆಟ್ಟಿ, ಕ್ಯಾ.ಗಣೇಶ್‌ ಕಾರ್ಣಿಕ್‌, ಶ್ರೀಕ್ಷೇತ್ರ ಧ.ಗ್ರಾ.ಯೋ. ಕಾರ್ಕಳ ತಾ|ಯೋಜನಾಧಿಕಾರಿ ಕೃಷ್ಣ ಟಿ ಭಾಗವಹಿಸಲಿದ್ದಾರೆ ಎಂದು ಬ್ರಹ್ಮಕಲಾಭಿಷೇಕ ಸಮಿತಿಯ ಅಧ್ಯಕ್ಷ ಹುಣ್ಸೆಯಡಿ ಸುರೇಶ ಶೆಟ್ಟಿ ಮತ್ತು ದೇವಸ್ಥಾನದ ಮುಖ್ಯಸ್ಥ ಸದಾಶಿವ ಉಪಾಧ್ಯಾಯ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here