ಹೆಬ್ರಿ: ಜ್ಞಾನ ಮತ್ತು ಭಕ್ತಿ ಹಕ್ಕಿಗಳಲ್ಲಿರುವ ಎರಡು ರೆಕ್ಕೆಗಳಿದ್ದಂತೆ. ಭಗವಂತನನ್ನು ಪ್ರೀತಿಯಿಂದ ಆರಾಧನೆ ಮಾಡುವುದೇ ನಿಜವಾದ ಭಕ್ತಿ. ನಿಷ್ಕಲ್ಮಶ ಭಕ್ತಿಯಿಂದ ದೇವರನ್ನು ಭಜಿಸಿದಾಗ ಉತ್ತಮ ಜ್ಞಾನವನ್ನು ಪಡೆಯುತ್ತೇವೆ ಎಂದು ಉಡುಪಿ ಸೋದೆಮಠದ ಆಸ್ಥಾನ ಪುರೋಹಿತ, ಪ್ರಸಿದ್ಧ ವಿದ್ವಾನ್ ಗಿರಿರಾಜ ಉಪಾಧ್ಯಾಯ ಹೇಳಿದರು.
ಅವರು ಮುದ್ರಾಡಿ ಗ್ರಾಮದ ಬಲ್ಲಾಡಿ ಮಠದ ಶ್ರೀ ವಿಠಲ ದೇವರ ಸನ್ನಿಧಿಯಲ್ಲಿ ನಡೆದ ಲಕ್ಷ ತುಳಸಿ ಅರ್ಚನೆಯಲ್ಲಿ ಭಾಗವಹಿಸಿ ಧಾರ್ಮಿಕ ಪ್ರವಚನ ನೀಡಿದರು.
ಗಿಲ್ಲಾಳಿ ಪದ್ಮನಾಭ ಆಚಾರ್ಯ ಮತ್ತು ಮಠದ ಆನುವಂಶಿಕ ಆಡಳಿತ ಧರ್ಮದರ್ಶಿ ವಾಸುದೇವ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ನಡೆಯಿತು. ಬಲ್ಲಾಡಿ ಚಂದ್ರಶೇಖರ್ ಭಟ್ ನಿರೂಪಿಸಿ, ವಂದಿಸಿದರು.