Home ಧಾರ್ಮಿಕ ಸುದ್ದಿ ಹಾವಂಜೆ ದೇಗುಲ: ನೂತನ ಪುಷ್ಪರಥ ಸಮರ್ಪಣೆ

ಹಾವಂಜೆ ದೇಗುಲ: ನೂತನ ಪುಷ್ಪರಥ ಸಮರ್ಪಣೆ

354
0
SHARE

ಬ್ರಹ್ಮಾವರ : ಯುವ ಪೀಳಿಗೆಗೆ ಊರಿನ ಸಂಸ್ಕೃತಿ, ಉತ್ತಮ ಸಂಸ್ಕಾರ ನೀಡುವುದು ಹೆತ್ತವರ ಜವಾಬ್ದಾರಿ ಎಂದು ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು. ಅವರು ಹಾವಂಜೆ ಮಹಾಲಿಂಗೇಶ್ವರ  ದೇಗುಲದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ಪುಷ್ಪರಥ ಸಮರ್ಪಣೆ ಮಾಡಿ, ಆಶೀರ್ವಚನ ನೀಡಿದರು.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಹಾವಂಜೆ ತನಿಷ್ಕ ಬಾಣಬೆಟ್ಟು ಸದಾಶಿವ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ದೇಗುಲದ ತಂತ್ರಿ ಹೆರ್ಗ ಜಯರಾಮ ತಂತ್ರಿ, ಮಾಜಿ ಶಾಸಕ ರಘುಪತಿ ಭಟ್‌, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಇರ್ಮಾಡಿ ಶೆಟ್ಟಿಬೆಟ್ಟು ಶಿವರಾಮ ಬಿ.ಶೆಟ್ಟಿ, ಕರ್ಣಾಟಕ ಬ್ಯಾಂಕ್‌ ಚೀಫ್‌ ಜನರಲ್‌ ಮ್ಯಾನೇಜರ್‌ ಎಂ. ರಾಘವೇಂದ್ರ ಭಟ್‌, ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುರೇಶ್‌ ಬಿ. ಶೆಟ್ಟಿ, ಅರ್ಚಕ ರಾಜಾರಾಮ ಮಧ್ಯಸ್ಥ, ಜಿ.ಪಂ. ಸದಸ್ಯ ಜನಾರ್ದನ ತೋನ್ಸೆ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಗ್ರಾ.ಪಂ. ಅಧ್ಯಕ್ಷೆ ವಸಂತಿ ಶೆಡ್ತಿ, ಅಭ್ಯುದಯ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಮಂಜಯ್ಯ ಸಿ. ಶೆಟ್ಟಿ, ಆರೂರು ವಿಷ್ಣುಮೂರ್ತಿ ದೇಗುಲದ ಆಡಳಿತ ಮೊಕ್ತೇಸರ ಡಾ| ಎಂ.ಪಿ. ರಾಘವೇಂದ್ರ ರಾವ್‌, ದಾನಿ ಇರ್ಮಾಡಿ ಶೆಟ್ಟಿಬೆಟ್ಟು ಸಂದೀಪ್‌ ಎಸ್‌. ಶೆಟ್ಟಿ, ಉದ್ಯಮಿಗಳಾದ ಕೃಷ್ಣ ವೈ. ಶೆಟ್ಟಿ ಮುಂಬಯಿ, ಪುಣೂcರು ಗಣೇಶ್‌ ಎಸ್‌. ಹೆಗ್ಡೆ, ಭಾಸ್ಕರ ಶೆಟ್ಟಿ ಮುಂಬಯಿ, ಸದಾನಂದ ಶೆಟ್ಟಿ ಮುಂಬಯಿ, ಬಾಣಬೆಟ್ಟು ಅಜಿತ್‌ ಶೆಟ್ಟಿ, ಲತೇಶ್‌ ಹೆಗ್ಡೆ, ದಯಾನಂದ ಎಂ. ಶೆಟ್ಟಿ, ಉಪ್ಪೂರು ರಾಧಾಕೃಷ್ಣ ಸಿ. ಶೆಟ್ಟಿ, ಮುಂಬಯಿ ಪ್ರಾದೇಶಿಕ ಬಂಟರ ಸಂಘದ ಅಧ್ಯಕ್ಷ ಭಾಸ್ಕರ ವೈ. ಶೆಟ್ಟಿ, ದಿವಾಕರ ಶೆಟ್ಟಿ, ಹಾವಂಜೆ ಕೊಳಲಗಿರಿ ಬಿಲ್ಲವ ಸಂಘದ ಅಧ್ಯಕ್ಷ ದೋಗು ಪೂಜಾರಿ ಉಪಸ್ಥಿತರಿದ್ದರು.

ಈ ಸಂದರ್ಭ ದೇಗುಲದ ಅಭಿವೃದ್ಧಿಗೆ ಶ್ರಮಿಸಿದ, ಪುಷ್ಪರಥದ ದಾನಿ ಹಾವಂಜೆ ಇರ್ಮಾಡಿ ಶೆಟ್ಟಿಬೆಟ್ಟು ಸಂದೀಪ್‌ ಎಸ್‌. ಶೆಟ್ಟಿ ಅವರನ್ನು ಸಮ್ಮಾನಿಸಿ, ಗೌರವಿಸಲಾಯಿತು.
ನೂತನವಾಗಿ ನಿರ್ಮಿಸಲ್ಪಟ್ಟು ಸಮರ್ಪಣೆಯಾದ ಪುಷ್ಪರಥೋತ್ಸವ ನಡೆಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಶಿಕ್ಷಕ ಪ್ರಶಾಂತ್‌ ಶೆಟ್ಟಿ ಹಾವಂಜೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here