Home ಧಾರ್ಮಿಕ ಕಾರ್ಯಕ್ರಮ ಹಟ್ಟಿಯಂಗಡಿ: ಸಂಕಷ್ಟಹರ ಚತುರ್ಥಿ ಮಹಾಪೂಜೆ

ಹಟ್ಟಿಯಂಗಡಿ: ಸಂಕಷ್ಟಹರ ಚತುರ್ಥಿ ಮಹಾಪೂಜೆ

1612
0
SHARE

ಕುಂದಾಪುರ: ಕುಂದಾಪುರ ಸಮೀಪದ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಮಹೋತ್ಸವದ ಅಂಗವಾಗಿ ದೇಗುಲದ ಆಡಳಿತ ಧರ್ಮದರ್ಶಿ ಎಚ್‌. ರಾಮಚಂದ್ರ ಭಟ್‌, ಪ್ರಧಾನ ಅರ್ಚಕರಾದ ಬಾಲಚಂದ್ರ ಭಟ್‌ ಅವರ ನೇತೃತ್ವದಲ್ಲಿ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಕಷ್ಟಹರ ಚತುರ್ಥಿ ಮಹಾಪೂಜೆ ಜರಗಿತು.

ದೇಗುಲದ ಸಂಪೂರ್ಣ ಪುಷ್ಪ ಅಲಂಕಾರ ಸೇವೆಯನ್ನು ಸುರತ್ಕಲ್‌ನ ಜೆ.ಡಿ. ವೀರಪ್ಪ ನಡೆಸಿಕೊಟ್ಟರು. ಉತ್ಸವಾದಿ ಸೇವೆಗಳು, ಚೆಂಡೆವಾದನ, ಮೂರ್ತಿಧಾರಕರಿಂದ ನರ್ತನ ಸೇವೆ ನಡೆಯಿತು. ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಪ್ರತಿದಿನ ಸಂಜೆ ಕದ್ರಿ ರಮೇಶನಾಥ್‌ ಮತ್ತು ಹರಿದಾಸ ಡೋಗ್ರ ಮತ್ತು ಬಳಗದವರಿಂದ ಸ್ಯಾಕ್ಸೋಫೋನ್‌ ಕಛೇರಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here