Home ಧಾರ್ಮಿಕ ಕಾರ್ಯಕ್ರಮ ಹಟ್ಟಿಯಂಗಡಿ ದೇಗುಲ: ಸಿದ್ಧಿವಿನಾಯಕನಿಗೆ 108 ಕಲಶಾಭಿಷೇಕ, ಕನಕಾಭಿಷೇಕ

ಹಟ್ಟಿಯಂಗಡಿ ದೇಗುಲ: ಸಿದ್ಧಿವಿನಾಯಕನಿಗೆ 108 ಕಲಶಾಭಿಷೇಕ, ಕನಕಾಭಿಷೇಕ

1265
0
SHARE

ಕುಂದಾಪುರ: ಸಮೀಪದ ಕಾರಣಿಕ ಕ್ಷೇತ್ರ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಪ್ರತಿಷ್ಠಾ ವರ್ಧಂತಿಯ ಅಂಗವಾಗಿ ಮಂಗಳವಾರ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.

ಧಾರ್ಮಿಕ ಮಹೋತ್ಸವದ ಅಂಗವಾಗಿ ನವಗ್ರಹ ಹವನ, ಬ್ರಹ್ಮಣಸ್ಪತಿಸೂಕ್ತ ಹವನ, ಶ್ರೀಸೂಕ್ತ ಹವನ, ಪುರುಷ ಸೂಕ್ತ ಹವನ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮತ್ತು ಹವನ, ಧನ್ವಂತರಿ ಹವನ, ನವಾಕ್ಷರೀ ಮಂತ್ರಜಪ ಹಾಗೂ ಹವನ, ರುದ್ರಪಾರಾಯಣ ಹಾಗೂ ರುದ್ರ ಹವನ, ದುರ್ಗಾ ಹೋಮ, ಅಥರ್ವಶೀರ್ಷ ಹವನ, ಲಲಿತ ಸಹಸ್ರನಾಮ ಹವನ, ಚಂಡಿಕಾ ಪಾರಾಯಣ, ಅಧಿವಾಸ ಹವನ, ಕಲಾತತ್ವ ಹವನಗಳು ನಡೆಯಿತು.

ದೇವಳದ ಧರ್ಮದರ್ಶಿ ಹೆಚ್. ಬಾಲಚಂದ್ರ ಭಟ್ ಅವರ ನೇತೃತ್ವದಲ್ಲಿ ಶ್ರೀ ಸ್ವಾಮಿಗೆ 108 ಕಲಶಾಭಿಷೇಕ, ಕನಕಾಭಿಷೇಕ ವಿಧ್ಯುಕ್ತವಾಗಿ ಜರುಗಿತು.

LEAVE A REPLY

Please enter your comment!
Please enter your name here