ಉಡುಪಿ : ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಧಾರ್ಮಿಕ, ಸಾಹಿತ್ಯ ಕ್ಷೇತ್ರದ ಶಕ್ತಿ. ಅವರು ಸಮಾಜ, ಸಂಘ ಸಂಸ್ಥೆಗಳನ್ನು ಬೆಳಗುವವರು ಎಂದು ಪರ್ಯಾಯ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದರು.
ಜ್ಞಾನ ಮಂದಾರ ಅಕಾಡೆಮಿ ಬೆಂಗಳೂರು ಮತ್ತು ರಾಧಾಕೃಷ್ಣ ನೃತ್ಯ ಅಕಾಡೆಮಿ ಮುಂಬೈ ಆಶ್ರಯದಲ್ಲಿ ರವಿವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಲಾಗಿದ್ದ ಕನ್ನಡ ಕಲಾ ಪ್ರತಿಭೋತ್ಸವ, ಬಸವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು – 75 ಸಂಭ್ರಮದ ಪ್ರಯುಕ್ತ “ಶಿಲೆಯ ಹೂವು’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಆಕ್ಷೇಪಗಳನ್ನು ನಿರ್ಲಕ್ಷಿಸಿ ಒಳಿತನ್ನೇ ಬಯಸುತ್ತಾ ಒಳಿತನ್ನೇ ಸಮಾಜಕ್ಕೆ ನೀಡುತ್ತಾ ಎಲ್ಲರನ್ನು ಒಗ್ಗೂಡಿಸುವ ವಿಶಿಷ್ಟ ಸಾಮರ್ಥ್ಯದ ಪುನರೂರು ಅವರು ಉದ್ಯಮಿಯಾಗಿದ್ದರೂ
ಧಾರ್ಮಿಕ, ಸಾಹಿತ್ಯ, ಸಾಂಸ್ಕೃತಿಕ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮ ಅಪಾರ ಕೊಡುಗೆ ನೀಡುತ್ತಾ ಬಂದಿದ್ದಾರೆ ಎಂದು ಶ್ರೀಗಳು ಹೇಳಿದರು.
ಅದಮಾರು ಮಠದ ಕಿರಿಯ ಯತಿ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ “ಯಾವುದೇ ದೇಶದ ಅಭಿವೃದ್ಧಿ ಕೇವಲ ಮೂಲಸೌಕರ್ಯದ ಅಭಿವೃದ್ಧಿಯಿಂದ ಮಾತ್ರ ಅಳೆಯಲ್ಪಡುವುದಿಲ್ಲ. ಅಲ್ಲಿನ ಕಲೆ, ಸಾಹಿತ್ಯ ಚಟುವಟಿಕೆಗಳು ಕೂಡ ಸಮೃದ್ಧವಾಗಿದ್ದಾಗ ಅದು ಅಭಿವೃದ್ಧಿಯೆಂದೆನಿಸುತ್ತದೆ. ಕಲಾ ಪ್ರತಿಭೋತ್ಸವದಂತಹ ಕಾರ್ಯಕ್ರಮಗಳು ಕಲೆ, ಸಂಸ್ಕೃತಿ ಉಳಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಹರಿಕೃಷ್ಣ ಪುನರೂರು ಅವರ ಬದುಕು, ವ್ಯಕ್ತಿತ್ವ ಮತ್ತು ಸಾಧನೆ ಇತರರಿಗೆ ಮಾದರಿ’ ಎಂದು ಹೇಳಿದರು.
ಸಾಹಿತಿ ಪೊಳಲಿ ಮಹೇಶ್ ಹೆಗ್ಡೆ ಶುಭಾಶಂಸನೆಗೈದರು. ಬೆಂಗಳೂರಿನ ಆರ್.ಎನ್.ಎಸ್. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ| ಸುಧೀರ್ ಪೈ ಕೆ.ಎಲ್, ನ್ಯಾಯವಾದಿ ಮೋರ್ಲಾ ರತ್ನಾಕರ ಶೆಟ್ಟಿ, ಮುಡಿಪು ಸೂರಜ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಮಂಜುನಾಥ ಎಸ್.ರೇವಣಕರ್, ರಾಮೃಷ್ಣ ಕೊಡಂಚ, ಗುರುರಾಜ್ ಉಪಾಧ್ಯಾಯ, ಜ್ಞಾನ
ಮಂದಾರ ಅಕಾಡೆಮಿಯ ಸಂಸ್ಥಾಪಕ ಎಚ್.ಜೆ. ಸೋಮಶೇಖರ, ನಿರ್ದೇಶಕಿ ವಿದುಷಿ ಸುಕನ್ಯಾ ಭಟ್ ಉಪಸ್ಥಿತರಿದ್ದರು. ಹೇಮಲತಾ ಗಣೇಶ್ ಕಜೆಗದ್ದೆ ಮತ್ತು ಆರ್ಜೆ ಪ್ರಸನ್ನ ಕಾರ್ಯಕ್ರಮ ನಿರ್ವಹಿಸಿದರು.
ಬಸವಶ್ರೀ ಪ್ರಶಸ್ತಿ ಪ್ರದಾನ ಗುಣಕರ್ ಡಿ.ಶೆಟ್ಟಿ, ಡಾ| ಎಸ್. ಜಿ.ಹಿರೇಮs…, ಚಿತ್ತರಂಜನ್ ಬೋಳಾರ, ದೇವಿಪ್ರಸಾದ್ ಕಾನತ್ತೂರು, ಬಿ.ಕೆ.ಮಾಧವ ರಾವ್, ಶೇಖರ ಅಜೆಕಾರು, ಹರ್ಷ ಕರುಣಾಕರ ಸೇರ್ಕಜೆ, ಬಿ.ಕೆ. ಮೀನಾಕ್ಷಿ ಶಾಂತಪ್ಪ ಗೌಡ ಪಾಲ್ತಾಜೆ, ಎನ್.ಎಸ್. ರಾಕೇಶ್ ಅವರಿಗೆ ಪಲಿಮಾರು ಶ್ರೀಗಳು “ಬಸವಶ್ರೀ’ ಪ್ರಶಸ್ತಿ ಪ್ರದಾನ ಮಾಡಿದರು.
ಸಾಧಕ ಮಕ್ಕಳಿಗೆ “ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.