Home ಧಾರ್ಮಿಕ ಸುದ್ದಿ ಹರಿಹರ ಪಳ್ಳತ್ತಡ್ಕ ಕ್ಷೇತ್ರ: ಮಾರ್ಚ್‌ನೊಳಗೆ ಬ್ರಹ್ಮಕಲಶೋತ್ಸವ

ಹರಿಹರ ಪಳ್ಳತ್ತಡ್ಕ ಕ್ಷೇತ್ರ: ಮಾರ್ಚ್‌ನೊಳಗೆ ಬ್ರಹ್ಮಕಲಶೋತ್ಸವ

376
0
SHARE

ಸುಬ್ರಹ್ಮಣ್ಯ : ಹರಿಹರ ಪಳ್ಳತ್ತಡ್ಕದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಮುಂದಿನ ಮಾರ್ಚ್‌ ತಿಂಗಳ ಒಳಗೆ ಬ್ರಹ್ಮಕಲಶೋತ್ಸವ ನಡೆಸಲು ನಿರ್ಧರಿಸಲಾಯಿತು. ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ. ರಾಮಕೃಷ್ಣ ಕುಧ್ಕುಳಿ ಅವರ ಅಧ್ಯಕ್ಷತೆಯಲ್ಲಿ ದೇಗುಲದಲ್ಲಿ ಗುರುವಾರ ನಡೆದ ವ್ಯವಸ್ಥಾಪನ ಸಮಿತಿ ಹಾಗೂ ಕೂಡುಕಟ್ಟಿನ ಭಕ್ತರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಶನಿಪೂಜೆಗೆ ಪ್ರಸಿದ್ಧಿ ಪಡೆದ ಹರಿಹರೇಶ್ವರ ದೇಗುಲದಲ್ಲಿ 2003ರಲ್ಲಿ ಬ್ರಹ್ಮಕಲಶ ನೆರವೇರಿತ್ತು. ದೇಗುಲಕ್ಕೆ ಸಂಬಂಧಿಸಿ ಇತ್ತೀಚೆಗೆ ನಡೆದ ಪ್ರಶ್ನೆ ಚಿಂತನೆಯಲ್ಲಿ ದೇಗುಲದಲ್ಲಿ ಬಾಕಿ ಇರುವ ಅಭಿವೃದ್ಧಿ ಕೆಲಸ ಪೂರ್ಣಗೊಳಿಸಿ ಬ್ರಹ್ಮಕಲಶ ನಡೆಸುವ ಕುರಿತ ವಿಷಯ ಪ್ರಸ್ತಾವಕ್ಕೆ ಬಂದಿತ್ತು. ಪ್ರಶ್ನೆ ವೇಳೆ ದೈವಜ್ಞರು ದೇಗುಲದ ಜೀರ್ಣೋದ್ಧಾರಕ್ಕೆ ಸಂಬಂಧಿಸಿ ಸಲಹೆ ನೀಡಿದ್ದರು. ಆದಷ್ಟು ಬೇಗನೆ ಬ್ರಹ್ಮಕಲಶ ನೆರವೇರಿಸುವುದು ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದರಂತೆ ಸಭೆ ಕರೆಯಲಾಗಿತ್ತು.

ದೇಗುಲದ ಕೆಲ ಅಭಿವೃದ್ಧಿ ಕಾರ್ಯಗಳಿಗೆ ಹಾಗೂ ಬ್ರಹ್ಮಕಲಶೋತ್ಸವಕ್ಕೆ ಸುಮಾರು ಒಂದೂವರೆ ಕೋ.ರೂ. ಅಂದಾಜು ಮೊತ್ತ ತಗುಲಲಿದ್ದು, ಧನ ಸಂಗ್ರಹಿಸುವ ಕುರಿತು ಕಾರೊÂàನ್ಮುಖವಾಗುವಂತೆ ನಿರ್ಧರಿಚ ಸಲಾಯಿತು. ದೇಗುಲದ ಬಾಕಿ ಇರುವ ಅಭಿವೃದ್ಧಿ ಕಾರ್ಯಗಳನ್ನು ಮುಗಿಸಿಕೊಂಡು ಮುಂದೆ ತಂತ್ರಿಗಳ ಸಮಯಾವಕಾಶ ಕೇಳಿಕೊಂಡು ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಬ್ರಹ್ಮಕಲಶೋತ್ಸವ ನಡೆಸುವುದೆಂದು ನಿರ್ಧರಿಸಲಾಯಿತು.

ಸಮಿತಿ ರಚನೆ
ಬ್ರಹ್ಮಕಲಶೋತ್ಸವ ಸಮಿತಿ ರಚಿಸಲಾ ಯಿತು. ಮುಂದಿನ ದಿನಗಳಲ್ಲಿ ಉಪಸ ಮಿತಿಗಳನ್ನು ರಚಿಸಿಕೊಂಡು ಈಗಿಂದಲೇ ಸಿದ್ಧತೆ ನಡೆಸುವ ಕುರಿತು ಸಭೆಯಲ್ಲಿ ನಿರ್ಣಯಿಸಲಾಯಿತು. ಜಿಲ್ಲಾ ಧಾರ್ಮಿಕ ಪರಿಷತ್‌ ವತಿಯಿಂದ ಅಭಿವೃದ್ಧಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಪರಿಷತ್‌ ಸದಸ್ಯೆ ಹೇಳಿದರು.

ವ್ಯವಸ್ಥಾಪನ ಸಮಿತಿ ಸದಸ್ಯರಾದ ದಿವಾಕರ ಮುಂಡಾಜೆ, ಉಷಾ ಪ್ರಭಾಕರ, ನಿತಿನ್‌ ಬಾಳುಗೋಡು, ಶೋಭಮಣಿ ಮಲ್ಲಾರ, ಮಾಜಿ ಆಡಳಿತ ಮೊಕ್ತೇಸರ ಡಾ| ಚಂದ್ರಶೇಖರ ಕಿರಿಭಾಗ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್‌ ಕೂಜುಗೋಡು, ಕಿಶೋರು ಕೂಜುಗೋಡು, ಭವಾನಿ ಶಂಕರ ಪಿಂಡಿಮನೆ, ಜನಾರ್ದನ ಗುಂಡಿಹಿತ್ಲು ದೇಗುಲದ ಅರ್ಚಕ ಸುಬ್ರಹ್ಮಣ್ಯ ಭಟ್‌, ದೇಗುಲದ ಕಚೇರಿಯ ಲೋಕನಾಥ ಕಿರಿಭಾಗ ಉಪಸ್ಥಿತರಿದ್ದರು.

ಕೂಡುಕಟ್ಟಿನ ಸುಮಾರು ಐನೂರಕ್ಕೂ ಅಧಿಕ ಮಂದಿ ಭಕ್ತರು ಪಾಲ್ಗೊಂಡಿದ್ದರು. ದೇಗುಲದಲ್ಲಿ ಸಾಮೂಹಿಕ ಬಲಿವಾಡು ಕೂಟ ಮತ್ತು ಮಧ್ಯಾಹ್ನ ಸಾಮೂಹಿಕ ದೇವತಾ ಪ್ರಾರ್ಥನೆ ನಡೆಸಲಾಯಿತು.

LEAVE A REPLY

Please enter your comment!
Please enter your name here