Home ಧಾರ್ಮಿಕ ಸುದ್ದಿ ಹರಿಹರ: ದೇಗುಲ ಅಭಿವೃದ್ಧಿಗೆ4 ಲಕ್ಷ ರೂ. ಧನ ಸಹಾಯ

ಹರಿಹರ: ದೇಗುಲ ಅಭಿವೃದ್ಧಿಗೆ4 ಲಕ್ಷ ರೂ. ಧನ ಸಹಾಯ

616
0
SHARE

ಸುಬ್ರಹ್ಮಣ್ಯ: ಇತಿಹಾಸ ಪ್ರಸಿದ್ಧ ಶ್ರೀ ಹರಿಹರೇಶ್ವರ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಮುಂದಿನ ಫೆಬ್ರವರಿ ತಿಂಗಳಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ.

ಪೂರ್ವಭಾವಿಯಾಗಿ ದೇಗುಲ ಅಭಿವೃದ್ಧಿಗೆ ನಿಧಿ ಸಂಗ್ರಹ ನಡೆಯುತ್ತಿದ್ದು, ಶ್ರೀ ಹರಿಹರೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಆರ್ಥಿಕ ಸಮಿತಿ ಅಧ್ಯಕ್ಷ ಭವಾನಿಶಂಕರ ಪಿಂಡಿಮನೆ ಅವರ ಪುತ್ರಿ ಶುಭಾ ಪಿಂಡಿಮನೆ ಅವರು ದೇಗುಲ ಅಭಿವೃದ್ಧಿಗೆ ಈ ಹಿಂದೆ 3 ಲಕ್ಷ ರೂ. ಧನಸಹಾಯ ನೀಡಿದ್ದು, ಬುಧವಾರ ಭವಾನಿಶಂಕರ ಪಿಂಡಿಮನೆ ಮೂಲಕ 1 ಲಕ್ಷ ರೂ. ಧನಸಹಾಯ ನೀಡಿದರು. ಈ ಮೂಲಕ ಒಟ್ಟು 4 ಲಕ್ಷ ರೂ. ಆರ್ಥಿಕ ನೆರವು ನೀಡಿದ್ದಾರೆ. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಮಕೃಷ್ಣ ಕುಧ್ಕುಳಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್‌ ಕೂಜುಗೋಡು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕಿಶೋರು ಕೂಜುಗೋಡು, ಕೇಶವಮೂರ್ತಿ ಭಟ್‌ ಪಳ್ಳತ್ತಡ್ಕ, ಹೊನ್ನಪ್ಪ ಪೊಯೆಮಜಲು. ತೇಜಕುಮಾರ ಮುಂಡೋಕಜೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here