Home ಧಾರ್ಮಿಕ ಸುದ್ದಿ ಹರಿಹರ ದೇಗುಲ: 2ನೇ ದಿನವೂ ಹರಿದು ಬಂತು ಹೊರೆಕಾಣಿಕೆ

ಹರಿಹರ ದೇಗುಲ: 2ನೇ ದಿನವೂ ಹರಿದು ಬಂತು ಹೊರೆಕಾಣಿಕೆ

910
0
SHARE

ಸುಬ್ರಹ್ಮಣ್ಯ : ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಪುನರ್‌ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಎರಡನೇ ದಿನ ರವಿವಾರವೂ
ಹೊರೆಕಾಣಿಕೆ ಅಪಾರ ಪ್ರಮಾಣದಲ್ಲಿ ಸಮರ್ಪಣೆಗೊಂಡಿದೆ. ಕೊಲ್ಲಮೊಗ್ರು, ಕಲ್ಮಕಾರು, ಕರಂಗಲ್ಲು, ಬಾಳುಗೋಡು ಐನೆಕಿದು ಹರಿಹರ ಗ್ರಾಮಗಳಿಂದ ಹಸುರುವಾಣಿ ಮೆರವಣಿಗೆ ನಡೆಯಿತು.

ಕೊಲ್ಲಮೊಗ್ರು, ಕಲ್ಮಕಾರು, ಕರಂಗಲ್ಲು, ಬಾಳುಗೋಡು ಐನೆಕಿದು ಹರಿಹರ ಈ ಗ್ರಾಮಗಳಿಂದ ಹಾಗೂ ಪರಿಸರದ ವಿವಿಧೆಡೆಯ ದೇವಸ್ಥಾನಗಳಿಂದ ಭಕ್ತರು, ವಾಹನ ಮತ್ತು ಕಾಲ್ನಡಿಗೆಯುಲ್ಲಿ ಶಿಸ್ತುಬದ್ಧವಾಗಿ ತರಕಾರಿ, ಅಡಿಕೆ, ತೆಂಗು, ಬಾಳೆಗೊನೆ ಇತ್ಯಾದಿ ಫಲವಸ್ತುಗಳನ್ನು ಹೊತ್ತು ತಂದರು. ಹರಿಹರ ಪಳ್ಳತ್ತಡ್ಕ ಮುಖ್ಯ ಪೇಟೆಯಿಂದ ದೇವಸ್ಥಾನದವರೆಗೆ ಅದ್ದೂರಿ ಮೆರವಣಿಗೆ ನಡೆಯಿತು. ಮುಖ್ಯ ಪೇಟೆಯಲ್ಲಿ ಹಸುರುವಾಣಿ ಮೆರವಣಿಗೆಗೆ ಸ್ವಾಗತ ಕೋರಲಾಯಿತು.

ಮೆರವಣಿಗೆಯಲ್ಲಿ ಕೊಲ್ಲಮೊಗ್ರದ ವಿನಾಯಕ ನಾಸಿಕ್‌ ಬ್ಯಾಂಡ್‌, ಕಲ್ಮಕಾರು, ಕರಂಗಲ್ಲು ಭಾಗದ ಮಂಗಲವಾದ್ಯ, ಬಾಳುಗೋಡು ಗ್ರಾಮದ ವತಿಯಿಂದ ಹುಲಿವೇಷ, ಮಂಗಲವಾದ್ಯ, ಐನಕಿದು ಗ್ರಾಮದವರ ಮಂಗಲವಾದ್ಯಗಳು, ಭಜನಾ ತಂಡಗಳಿಂದ ಕುಣಿತ ಭಜನೆ ಹಾಗೂ ಸಮವಸ್ತ್ರಧಾರಿ ವಿವಿಧ ಸಂಘಟನೆಗಳ ಮಹಿಳೆಯರು, ಪುರುಷರು, ಮಕ್ಕಳು ಪಾಲ್ಗೊಂಡರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೂಜುಗೋಡು, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಮಕೃಷ್ಣ ಕುಧ್ಕುಳಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್‌ ಕೂಜುಗೋಡು ಮೆರವಣಿಗೆಯನ್ನು ಸ್ವಾಗತಿಸಿ ಮೆರವಣಿಗೆಯಲ್ಲಿ ಸಾಗಿದರು.

ಹಸುರುವಾಣಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಪೊಯೆಮಜಲು, ಉಪಾಧ್ಯಕ್ಷರಾದ ಪ್ರಥ್ವಿಚಂದ್ರ ಮುಂಡಾಜೆ, ಗಿರೀಶ್‌ ಕಟ್ಟೆಮನೆ, ಕೆ.ಬಿ. ಅಜಿತ್‌ಕುಮಾರ್‌ ಕೂಜು ಗೋಡು, ಪುರುಷೋತ್ತಮ ಬಟ್ಟೋಡಿ, ಶೇಖರ ಅಂಬೆಕಲ್ಲು, ಸತೀಶ್‌ ಟಿ.ಎನ್‌., ವ್ಯವಸ್ಥಾಪನ ಸಮಿತಿ ಸದಸ್ಯರು, ಬ್ರಹ್ಮಕಲ ಶೋತ್ಸವ ಉಪಸಮಿತಿಗಳ ಅಧ್ಯಕ್ಷರು, ಸದಸ್ಯರುಗಳು, ಕೊಲ್ಲಮೊಗ್ರು, ಕಲ್ಮಕಾರು, ಹರಿಹರ, ಬಾಳುಗೋಡು, ಕಟ್ಟಗೋವಿಂದ ನಗರ, ಕರಂಗಲ್ಲು, ಹರಿಹರ, ಐನಕಿದು, ಭಾಗಗಳ ಭಕ್ತರು ಪಾಲ್ಗೊಂಡಿದ್ದರು.

ಸುತ್ತಮುತ್ತಲ ಗ್ರಾಮಗಳಿಂದ ಭಾರೀ ಪ್ರಮಾಣದಲ್ಲಿ ಹರಿದು ಬಂದ ವಿವಿಧ ರೂಪದ ಹಸುರು ಕಾಣಿಕೆಗಳನ್ನು ದೇವಸ್ಥಾನದ ಉಗ್ರಾಣದಲ್ಲಿ ಸಂಗ್ರಹಿಸಿಡಲಾಯಿತು.

ಸಂಘ ಸಂಸ್ಥೆಗಳ ಸಹಕಾರ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕೊಲ್ಲಮೊಗ್ರು ಎ ಮತ್ತು ಬಿ, ಅಯ್ಯಪ್ಪ ಯುವಕ ಮಂಡಲ ಮತ್ತು ಯುವತಿ ಮಂಡಲ ಉಪ್ಪುಕಳ,
ಸಾರ್ವಜನಿಕ ಗಣೇಶೋತ್ಸವ ಸಮಿತಿ ಕೊಲ್ಲಮೊಗ್ರು, ಮಯೂರ ಗೆಳೆಯರ ಬಳಗ ಕೊಲ್ಲಮೊಗ್ರು, ಅನ್ನಪೂರ್ಣೇಶ್ವರಿ ಚಾರಿಟೆಬಲ್‌ ಟ್ರಸ್ಟ್‌ ಕೊಲ್ಲಮೊಗ್ರು, ಮಿತ್ರ ಬಳಗ ಶಾರದಗುಡ್ಡೆ ಈ ಎಲ್ಲ ಸಂಘ ಸಂಸ್ಥೆಗಳ ಸದಸ್ಯರು ಹಾಗೂ ಊರ ಪರವೂರ ಭಕ್ತರು ಸ್ವಯಂ ಸೇವಕರಾಗಿ ಸಹಕರಿಸಿದರು.

ತಂತ್ರಿಗಳಿಗೆ ಅದ್ದೂರಿ ಸ್ವಾಗತ ದೇಗುಲದಲ್ಲಿ ಫೆ. 24ರ ತನಕ ನಡೆಯಲಿರುವ ಪುನರ್‌ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ವೈದಿಕ ಕಾರ್ಯಕ್ರಮಗಳನ್ನು ನೆರವೇರಿಸಿಕೊಡಲಿರುವ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳನ್ನು ಹರಿಹರ ಶಾಲಾ ಬಳಿಯಿಂದ ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ವಿವಿಧ ಸಮಿತಿಗಳಿಂದ, ಊರವರಿಂದ ಸ್ವಾಗತಿಸಿಸಲಾಯಿತು. ಸಮವಸ್ತ್ರಧಾರಿ ಮಹಿಳೆಯರು ಪೂರ್ಣಕುಂಭ ಸ್ವಾಗತದ ಮೂಲಕ ತೆರೆದ ಜೀಪಿನಲ್ಲಿ ಬಂದ ತಂತ್ರಿಗಳನ್ನು ದೇವಸ್ಥಾನದಲ್ಲಿ ಸ್ವಾಗತಿಸಿದರು.

ಪ್ರಧಾನ ಅರ್ಚಕ ಸುಬ್ರಹ್ಮಣ್ಯ ನರಸಿಂಹ ಭಟ್‌, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೂಜುಗೋಡು, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಮಕೃಷ್ಣ ಕುಧ್ಕುಳಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್‌ ಕೂಜುಗೋಡು, ಆರ್ಥಿಕ ಸಮಿತಿ ಅಧ್ಯಕ್ಷ ಭವಾನಿಶಂಕರ ಪಿಂಡಿಮನೆ, ಬ್ರಹ್ಮಕಲಶೋತ್ಸವ ಉಪಸಮಿತಿ ಮುಖ್ಯಸ್ಥರು, ಸದಸ್ಯರು, ವಿವಿಧ ಸಂಘಟನೆಗಳ ಸದಸ್ಯರು, ಊರ ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here