Home ಧಾರ್ಮಿಕ ಸುದ್ದಿ ಹರಿಹರ ಪಳ್ಳತ್ತಡ್ಕ: ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜೆ

ಹರಿಹರ ಪಳ್ಳತ್ತಡ್ಕ: ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜೆ

1467
0
SHARE

ಸುಬ್ರಹ್ಮಣ್ಯ : ಹರಿಹರ ಪಳ್ಳತ್ತಡ್ಕ ಶ್ರೀ ಹರಿಹರೇಶ್ವರ ದೇವಸ್ಥಾನ ಹಾಗೂ ಹರಿಹರ, ಬಾಳುಗೋಡು, ಐನಕಿದು ಈ ಮೂರು ಗ್ರಾಮಗಳ ವ್ಯಾಪ್ತಿಗೊಳಪಟ್ಟ ಶ್ರೀ ವರಮಹಾಲಕ್ಷ್ಮೀ ಆಚರಣಾ ಸಮಿತಿ ವತಿಯಿಂದ ಶುಕ್ರವಾರ ಹರಿಹರೇಶ್ವರ ದೇಗುಲದಲ್ಲಿ ಶ್ರೀ ವರಮಹಾಲಕ್ಷ್ಮೀ ಸಾಮೂಹಿಕ ಪೂಜೆ ನೆರವೇರಿತು. ಅರ್ಚಕ ಸುಬ್ರಹ್ಮಣ್ಯ ನರಸಿಂಹ ಭಟ್‌ ಪೂಜಾ ವಿಧಿ ನೆರವೇರಿಸಿದರು.

ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಮಕೃಷ್ಣ ಕುಧ್ಕುಳಿ, ಆಚರಣಾ ಸಮಿತಿ ಗೌರವಾಧ್ಯಕ್ಷರಾದ ತಾರಾ ಮಲ್ಲಾರ ಮತ್ತು ಉಷಾಸೋಮಶೇಖರ್‌, ಅಧ್ಯಕ್ಷೆ ರೇಷ್ಮಾಪ್ರಕಾಶ್‌ ಸೇರಿದಂತೆ ಮೂರು ಗ್ರಾಮಗಳ ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here