ಉಡುಪಿ: ಹೆರ್ಗ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವತಿಯಿಂದ ನೂತನವಾಗಿ ನಿರ್ಮಾಣಗೊಂಡ ಭೋಜನ ಗೃಹ ಶ್ರೀ ದುರ್ಗಾ ಸಭಾ ಭವನವನ್ನು ಧಾರ್ಮಿಕ ಕಾರ್ಯಕ್ರಮದೊಂದಿಗೆ ಫೆ.21ರಂದು ದೇವಸ್ಥಾನ ಆಡಳಿತ ಧರ್ಮದರ್ಶಿ ರಾಘವೇಂದ್ರ ತಂತ್ರಿ, ಲೋಕಾರ್ಪಣೆ ಮಾಡಿದರು.
ದೇವಸ್ಥಾನದ ಶಿವರಾಮ ತಂತ್ರಿ, ಸೀತಾರಾಮ ತಂತ್ರಿ, ಮಾಧವ ತಂತ್ರಿ, ಕೃಷ್ಣಮೂರ್ತಿ ತಂತ್ರಿ, ರಾಮಚಂದ್ರ ತಂತ್ರಿ, ಜ್ಯೋತಿಷಿ ಕಬ್ಯಾಡಿ ಜಯರಾಮ ಆಚಾರ್ಯ,ಪರ್ಕಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಶ್ರೀನಿವಾಸ ಉಪಾಧ್ಯಾಯ, ಜೀರ್ಣೋದ್ಧಾರ ಸಮಿತಿಯ ಮಂಜುನಾಥ ಉಪಾಧ್ಯಾಯ, ಹೆರ್ಗ ಶೇಖರ ಶೆಟ್ಟಿ , ಹೆರ್ಗ ದಿನಕರ ಶೆಟ್ಟಿ ,
ಹೆರ್ಗ ದಿವಾಕರ ಶೆಟ್ಟಿ , ಹೆರ್ಗ ವಿಶ್ವನಾಥ ಶೆಟ್ಟಿ , ಅಪ್ಪು ಮರಕಾಲ ಉಪಸ್ಥಿತರಿದ್ದರು.