Home ಧಾರ್ಮಿಕ ಸುದ್ದಿ ಒಗ್ಗಟ್ಟಿನಿಂದ ಸಂಸ್ಕೃತಿ ರಕ್ಷಣೆ ಸಾಧ್ಯ: ಉಚ್ಚಿಲತ್ತಾಯ ಪದ್ಮನಾಭ ತಂತ್ರಿ

ಒಗ್ಗಟ್ಟಿನಿಂದ ಸಂಸ್ಕೃತಿ ರಕ್ಷಣೆ ಸಾಧ್ಯ: ಉಚ್ಚಿಲತ್ತಾಯ ಪದ್ಮನಾಭ ತಂತ್ರಿ

1074
0
SHARE

ಹರೇಕಳ : ಸರ್ವರ ಕೂಡುವಿಕೆಯಿಂದ ಸನಾತನ ಸಂಸ್ಕೃತಿ ಉಳಿದಿದೆ. ಇಂತಹ ಕೂಡುವಿಕೆ ದೇವಸ್ಥಾನಗಳಿಂದ ಸಾಧ್ಯವಾಗಿದೆ ಎಂದು ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಅವರು ಅಭಿಪ್ರಾಯಪಟ್ಟರು.

ಹರೇಕಳ ಗ್ರಾಮದ ಸಂಪಿಗೆದಡಿಯಲ್ಲಿ ಪುನರ್‌ ನಿರ್ಮಾಣಗೊಳ್ಳಲಿರುವ ಶ್ರೀ ಅರ್ಧನಾರೀಶ್ವರ ದೇವಸ್ಥಾನಕ್ಕೆ ಶುಕ್ರವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ದೇವರು ಕೇವಲ ಹೆಸರು, ಧರ್ಮ ಪುಸ್ತಕಕ್ಕೆ ಸೀಮಿತಗೊಳಿಸಿದಾಗ ಮನುಷ್ಯ ಅಧೋಗತಿ ತಲುಪುತ್ತಾನೆ. ಈಗ ಹರೇಕಳ ಗ್ರಾಮಸ್ಥರು ದೈವ-ದೇವರ ಸಂಕಲ್ಪದಂತೆ ಒಂದಾಗುವಂತಾಗಿದೆ ಎಂದರು.

ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ಟಿ.ಆರ್‌. ಪೂಂಜಾ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ರಾಜೀವ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಪುರೋಹಿತ ಶ್ರೀನಿವಾಸ ಕಲ್ಲೂರಾಯ, ಹಿರಿಯರಾದ ರಘುರಾಮ ಪೂಂಜ, ಕಾರ್ಯಾಧ್ಯಕ್ಷ ದೆಬ್ಬೇಲಿಗುತ್ತು ಮೋಹನ್‌ ದಾಸ್‌ ರೈ, ವಿಖ್ಯಾತ್‌ ರೈ ಹರೇಕಳಗುತ್ತು, ಕೋಶಾಧಿಕಾರಿ ಸದಾಶಿವ ಸಾಮಾನಿ, ಉಪಾಧ್ಯಕ್ಷ ಮಹಾಬಲ ಹೆಗ್ಡೆ ದೆಬ್ಬೇಲಿಗುತ್ತು, ದೇವರಾಜ್‌ ರೈ, ಮನೋಹರ ಶೆಟ್ಟಿ ಸಂಪಿಗೆದಡಿಗುತ್ತು, ಭಜನಾ ಮಂಡಳಿ ಅಧ್ಯಕ್ಷ ದಯಾನಂದ, ವಿಶ್ವನಾಥ ರೈ ಹಾಗೂ ಆನಂದ ಚೌಟ ಉಪಸ್ಥಿತರಿದ್ದರು. ರವೀಂದ್ರ ಶೆಟ್ಟಿ ಉಳಿದೊಟ್ಟು ಸ್ವಾಗತಿಸಿದರು. ರವಿರಾಜ್‌ ರೈ ಎಲ್ಯಾರ್‌ ವಂದಿಸಿದರು. ವಾಮನ್‌ ರಾಜ್‌ ಪಾವೂರು ನಿರೂಪಿಸಿದರು.

LEAVE A REPLY

Please enter your comment!
Please enter your name here