ಹೆಬ್ರಿ: ನಿತ್ಯ ಭಗವಂತನ ಸ್ಮರಣೆಯೊಂದಿಗೆ ಉತ್ತಮ ಕೆಲಸಗಳನ್ನು ಮಾಡಿ ಭಕ್ತಿ ಮಾರ್ಗದಿಂದ ನಮ್ಮ ಜೀವನ ನಡೆಸಿದಾಗ ಮುಕ್ತಿ ಸಾಧ್ಯ ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು. ಅವರು ಶ್ರೀ ಗುರು ರಾಘವೇಂದ್ರ ಸೇವಾ ಟ್ರಸ್ಟ್ ಪ್ರಾಣ ಹೀಲಿಂಗ್ ಸೆಂಟರ್ ಮಂಗಳೂರು, ಜಾಗೃತಿ ಫೌಂಡೇಶನ್ ರಿ. ವಿಕಾಸ್ ಭಾರತ್ ಟ್ರಸ್ಟ್ ಇದರ ಸಂಯುಕ್ತ ಆಶ್ರಯದಲ್ಲಿ ಎಸ್.ವಿ.ಟಿ. ಕಾಲೇಜಿನ ಅಂಡಾರು ವಿಠ್ಠಲ ರುಕ್ಮಿಣಿ ಕಿಣಿ ಸಭಾಭವನದಲ್ಲಿ ಹನುಮಾನ್ ಚಾಲಿಸ್ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯ ಉದಯ್ ಕೋಟ್ಯಾನ್, ಕುಕ್ಕುಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಜೇಶ್ ರಾವ್, ಪ್ರಾಣ ಹೀಲಿಂಗ್ ಸೆಂಟರ್ ಮುಖ್ಯಸ್ಥ ಪೃಥ್ವಿನ್, ನೀರೆ ಬೈಲೂರು ಗ್ರಾ.ಪಂ. ಮಾಜಿ ಅಧ್ಯಕ್ಷ ರಮೇಶ್ ಕಲ್ಲೊಟ್ಟೆ,, ಮಂಜುನಾಥ್, ಜಾಗೃತಿ ಫೌಂಡೇಶನ್ ಇದರ ಟ್ರಸ್ಟಿ ಆನಂದ್ರಾಯ ನಾಯಕ್, ಮ್ಯಾನೇಜಿಂಗ್ ಟ್ರಸ್ಟಿ ಡಾ| ಕಾಂತಿ ಹರೀಶ್, ಶಾಲಾ ಅಧ್ಯಕ್ಷ ರತ್ನಾಕರ್ ಅಮೀನ್ ಉಪಸ್ಥಿತರಿದ್ದರು. ಶಿಕ್ಷಕಿ ಶ್ವೇತಾ ನಿರೂಪಿಸಿದರು. ಜ್ಯೋತಿ
ರಮೇಶ್ ವಂದಿಸಿದರು.