Home ಧಾರ್ಮಿಕ ಸುದ್ದಿ ‘ವೈವಿಧ್ಯದಲ್ಲಿ ಏಕತೆ ಕಾಣುವ ಸನಾತನ ಸಂಸ್ಕೃತಿ’

‘ವೈವಿಧ್ಯದಲ್ಲಿ ಏಕತೆ ಕಾಣುವ ಸನಾತನ ಸಂಸ್ಕೃತಿ’

ಮಠಕ್ಕೆ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಭೇಟಿ

1454
0
SHARE
ವಿನಾಯಕ ಮಠಕ್ಕೆ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಭೇಟಿ ನೀಡಿದರು.

ಹಳೆಯಂಗಡಿ: ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಏಕತೆಯಿಂದ ವಿಭಿನ್ನತೆಯನ್ನು ನಾವು ಕಾಣಬಹುದು, ಸಮಾಜದ ಪರಿವರ್ತನೆಯಲ್ಲಿ ಅಭಿಪ್ರಾಯವಿದ್ದರೂ ಸಹ ಅಲ್ಲಿ ಭಿನ್ನಾಭಿಪ್ರಾಯ ಇರಬಾರದು ಎಂದು ಕಟಪಾಡಿ ಶ್ರೀ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠದ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ಹಳೆಯಂಗಡಿಯ ಶ್ರೀ ದುರ್ಗಾಪುರಮೇಶ್ವರೀ ವಿನಾಯಕ ಮಠಕ್ಕೆ ತಮ್ಮ 15ನೇ ಚಾತುರ್ಮಾಸ್ಯ ವ್ರತಾಚರಣೆಯ ಪೂರ್ವಭಾವಿಯಾಗಿ ಜು. 2ರಂದು ಭೇಟಿ ನೀಡಿ ಆಶೀರ್ವಚನ ನೀಡಿದರು.

ನ್ಯಾಯವಾದಿ ಕೆ.ಎಂ. ಗಂಗಾಧರ ಆಚಾರ್ಯ ಕೊಂಡೆವೂರು ಮಾತನಾಡಿದರು. ಮೂಲ್ಕಿಯ ಶ್ರೀ ಕಾಳಿಕಾಂಬ ಕ್ಷೇತ್ರದಿಂದ ಆಗಮಿಸಿದ ಸ್ವಾಮೀಜಿಯವರನ್ನು ಸ್ವಾಗತಿಸಲಾಯಿತು. ಹಳೆಯಂಗಡಿ ಕ್ಷೇತ್ರಕ್ಕೆ ಆಮಂತ್ರಣ ಪತ್ರಿಕೆಯನ್ನು ನೀಡಿ, ಕೋಟೆಕಾರು ಮತ್ತು ಮಂಗಳೂರಿನ ಕಾಳಿಕಾಂಬ ಕ್ಷೇತ್ರಕ್ಕೆ ಭೇಟಿ ನೀಡಲು ತೆರಳಿದರು.

ಸಮಿತಿಯ ಅಧ್ಯಕ್ಷ ಬಿ. ಸೂರ್ಯಕುಮಾರ್‌ ಆಚಾರ್ಯ ಹಳೆಯಂಗಡಿ, ಗೌ. ಪ್ರ. ಕಾ. ಲೋಕೇಶ್‌ ಎಂ.ಬಿ. ಆಚಾರ್‌, ಕಂಬಾರು, ಕೋಶಾಧಿಕಾರಿ ಬಂಬ್ರಾಣ ಯಜ್ಞೇಶ್‌ ಆಚಾರ್ಯ ಮಂಗಳೂರು, ಗುರುಸೇವಾ ಪ.ಕೇ.ಸ. ಅಧ್ಯಕ್ಷ ಮಧು ಆಚಾರ್ಯ ಮೂಲ್ಕಿ, ಆನೆಗುಂದಿ ಶ್ರೀ ಸರಸ್ವತೀ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷ ಟಿ. ಸುಧಾಕರ ಆಚಾರ್ಯ, ಹಳೆಯಂಗಡಿಯ ಶ್ರೀ ದುರ್ಗಾಪರಮೇಶ್ವರೀ ವಿನಾಯಕ ಮಠದ ಮೊಕ್ತೇಸರ ಬಿ. ದಿವಾಕರ ಆಚಾರ್ಯ, ಬಿ. ಚಂದ್ರಕುಮಾರ್‌, ಬಿ. ಗಜೇಂದ್ರಕುಮಾರ್‌, ಎಚ್. ತುಕಾರಾಮ ಆಚಾರ್ಯ, ಬಿ. ಉಮೇಶ್‌ ಆಚಾರ್ಯ, ಬಿ. ದಾಮೋದರ ಆಚಾರ್ಯ, ಬಿ. ಭವಾನಿಶಂಕರ ಆಚಾರ್ಯ, ಸೂರಜ್‌ಕುಮಾರ್‌, ದಿವ್ಯಾ ಸೂರಜ್‌ಕುಮಾರ್‌, ಉದಯಕುಮಾರ್‌, ಕಟ್ಟಡ ಸಮಿತಿಯ ಅಧ್ಯಕ್ಷ ಪೃಥ್ವೀರಾಜ್‌ ಆಚಾರ್ಯ, ದಿನೇಶ್‌ ಆಚಾರ್ಯ, ಶಿಲ್ಪಿ ಶಿವಪ್ರಸಾದ್‌ ಆಚಾರ್ಯ, ಮೊಕ್ತೇಸರ ಸುಧಾಕರ ಆಚಾರ್ಯ, ಜಗದೀಶ್‌ ಆಚಾರ್ಯ ಮಾನಂಪಾಡಿ, ಜಗದೀಶ್‌ ಆಚಾರ್ಯ, ಜಯಶೀಲ ಆಚಾರ್ಯ, ದಿವಾಕರ ಆಚಾರ್ಯ, ಕೆ. ಜಗದೀಶ್‌, ಯುವರಾಜ್‌ ಆಚಾರ್ಯ, ಜಗದೀಶ್‌ ಆಚಾರ್ಯ ಪಡುಪಣಂಬೂರು ಉಪಸ್ಥಿತರಿದ್ದರು. ಮಧು ಆಚಾರ್ಯ ನಿರೂಪಿಸಿದರು.

LEAVE A REPLY

Please enter your comment!
Please enter your name here