Home ಧಾರ್ಮಿಕ ಸುದ್ದಿ ಹಳೆಯಂಗಡಿ: ಅಯ್ಯಪ್ಪ ಸ್ವಾಮಿ ಮಂಡಲ ಪೂಜೆ, ಗುರುವಂದನೆ

ಹಳೆಯಂಗಡಿ: ಅಯ್ಯಪ್ಪ ಸ್ವಾಮಿ ಮಂಡಲ ಪೂಜೆ, ಗುರುವಂದನೆ

953
0
SHARE

ಹಳೆಯಂಗಡಿ: ಇಲ್ಲಿನ ಹಳೆಯಂಗಡಿ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಮಂಡಲ ಪೂಜೆ ಮತ್ತು ಗುರುವಂದನೆ ಕಾರ್ಯಕ್ರಮವು ಜರಗಿತು.

ಬೆಳಗ್ಗೆ ಗಣಹೋಮ, ಸೀಯಾಳಾಭಿಷೇಕ, ವಿವಿಧ ಭಜನ ಮಂಡಳಿಗಳಿಂದ ಭಜನ ಸಂಕೀರ್ತನೆ, ಪಡಿ ಪೂಜೆ, ಮಹಾ ಪೂಜೆಯೊಂದಿಗೆ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ಮಂದಿರದ ವಾಸು ಗುರುಸ್ವಾಮೀಯವರನ್ನು ಭಕ್ತವೃಂದದ ಅಧ್ಯಕ್ಷ ದಿನೇಶ್‌ ಮತ್ತು ಉಪಾಧ್ಯಕ್ಷ ಕರುಣಾಕರ್‌ ಗೋಳಿದಡಿ ಹಾಗೂ ಸದಸ್ಯರು ವಿಶೇಷವಾಗಿ ಸಮ್ಮಾನಿಸಿದರು.

ಮಂದಿರದಲ್ಲಿ ಒಟ್ಟು 39 ಮಂದಿ ಅಯ್ಯಪ್ಪ ಮಾಲಾಧಾರಿಗಳು ವ್ರತಾಚರಣೆಯಲ್ಲಿ ತೊಡಗಿದ್ದಾರೆ.

LEAVE A REPLY

Please enter your comment!
Please enter your name here