ಮಹಾನಗರ: ಬೋಳಾರ ಹಳೆಕೋಟೆ ಶ್ರೀ ಮಾರಿಯಮ್ಮ ಮಹಿಷ ಮರ್ಧಿನಿ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿಯಂದು ಸಾರ್ವಜನಿಕ ಮಹಾ ಚಂಡಿಕಾಯಾಗ ಗೋಪಾಲಕೃಷ್ಣ ತಂತ್ರಿ ಯವರ ನೇತೃತ್ವದಲ್ಲಿ ನಡೆಯಿತು.
ಮನಪಾ ಸದಸ್ಯೆ ರತಿಕಲಾ, ಪ್ರಮುಖ ರಾದ ನಾಗೇಶ್ ಬೋಳಾರ್, ಪ್ರದೀಪ್ ಆಳ್ವ, ಭಾಸ್ಕರ ಶೆಟ್ಟಿ, ನವೀನ್ ಸುವರ್ಣ, ಶಿವಪ್ರಸಾದ್ ಅವರು ಯಾಗ ಸಂಬಂಧಿಸಿ ನಡೆದ ಕಾರ್ಯಕ್ರಮ ಉದ್ಘಾಟಿಸಿದರು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ತಾರನಾಥ ಶೆಟ್ಟಿ ಬೋಳಾರ್, ಸದಸ್ಯರಾದ ವೇಣುಗೋಪಾಲ್ ಪುತ್ರನ್, ಸೀತಾರಾಮ ಎ., ಬಿ. ಕೇಶವ ಶೆಟ್ಟಿ, ಜಗದೀಶ್, ದಿನೇಶ್ ಪಿ.ಎಸ್., ಪ್ರಫುಲ್ಲಾರಾಜ್ ಮತ್ತು ಪ್ರಧಾನ ಅರ್ಚಕ ನಾರಾಯಣ ಭಟ್ ಹಾಗೂ ಜೀರ್ಣೋ ದ್ಧಾರ ಸಮಿತಿ ಅಧ್ಯಕ್ಷ ನವನೀತ ಶೆಟ್ಟಿ ಕದ್ರಿ, ದೇವಸ್ಥಾನದ ಕಾರ್ಯ ನಿರ್ವ ಹಣಾಧಿಕಾರಿ, ಭಕ್ತವೃಂದ ಮೊದಲಾ ದವರು ಉಪಸ್ಥಿತರಿದ್ದರು. ಮಧ್ಯಾಹ್ನ ಮಹಾಪೂಜೆಯ ಅನಂತರ ಮಹಾ ಅನ್ನಸಂತರ್ಪಣೆ ಜರಗಿತು.