ಬೈಂದೂರು: ಹಳಗೇರಿ ಶ್ರೀ ಕೊಕ್ಕೇಶ್ವರ ದೇವಸ್ಥಾನದ ವರ್ಧಂತ್ಯುತ್ಸವ ಮತ್ತು ನೂತನ ನಂದಿ ಪ್ರತಿಷ್ಠೆ, ಹೊರಪೌಳಿ ಲೋಕಾರ್ಪಣೆ ಎ. 19ರಂದು ನಡೆಯಿತು.
ನೂತನ ನಂದಿ ಪ್ರತಿಷ್ಠೆ ಹಾಗೂ ಹೊರಪೌಳಿ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಧಾರ್ಮಿಕ ಮುಂದಾಳು ಅಪ್ಪಣ್ಣ ಹೆಗ್ಡೆ, ಅನ್ನದಾನದ ಸೇವಾಕರ್ತರಾದ ಸುಧಾಕರ ಶೆಟ್ಟಿ, ನಾರಾಯಣ ಆಚಾರ್ಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ತೇಜಪ್ಪ ಶೆಟ್ಟಿ, ಕೃಷ್ಣ ಕಾರಂತ ಅವರನ್ನು ಸಮ್ಮಾನಿಸಲಾಯಿತು.
ಸಮ್ಮಾನ ಸ್ವೀಕರಿಸಿ ಮಾತನಾಡಿದ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ, ದೇವಸ್ಥಾನದಲ್ಲಿ ನಡೆಯುವ ಧಾರ್ಮಿಕ ಕಾರ್ಯಗಳು ಧಾರ್ಮಿಕ ಕೇಂದ್ರದ ಶಕ್ತಿಯನ್ನು ವೃದ್ಧಿಸುತ್ತವೆ. ನಿರಂತರ ಧಾರ್ಮಿಕ ಚಟುವಟಿಕೆಗಳು ದೇವಸ್ಥಾನದಲ್ಲಿ ನಡೆಯುವುದರಿಂದ ಶಕ್ತಿ ಉದ್ದೀಪನಗೊಳ್ಳುತ್ತದೆ ಎಂದರು. ಈ ಸಂದರ್ಭದಲ್ಲಿ ದೇವಸ್ಥಾನದ ಸಮಿತಿ ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ಉಪಸ್ಥಿತರಿದ್ದರು.