Home ಧಾರ್ಮಿಕ ಸುದ್ದಿ ‘ಮಾರ್ಗದರ್ಶನ ನೀಡುವುದು ಪುಣ್ಯ ಕಾರ್ಯ’

‘ಮಾರ್ಗದರ್ಶನ ನೀಡುವುದು ಪುಣ್ಯ ಕಾರ್ಯ’

ಬೈರಿಕಟ್ಟೆ ಮುನವ್ವಿರುಲ್‌ ಇಸ್ಲಾಂ ಮದ್ರಸ: ಹಜ್‌ ತರಬೇತಿ ಶಿಬಿರ, ಸಮ್ಮಾನ

1023
0
SHARE

ಕನ್ಯಾನ:ಬೈರಿಕಟ್ಟೆ ಜಲಾಲಿಯಾ ಜುಮಾ ಮಸೀದಿ ಮತ್ತು ಮವೂನತುಲ್‌ ಇಸ್ಲಾಂ ಯುವಜನ ಕಮಿಟಿ ಆಶ್ರಯದಲ್ಲಿ ಹಜ್‌ ತರಬೇತಿ ಶಿಬಿರ ಬೈರಿಕಟ್ಟೆ ಮುನವ್ವಿರುಲ್‌ ಇಸ್ಲಾಂ ಮದ್ರಸದಲ್ಲಿ ಶನಿವಾರ ನಡೆಯಿತು. ಮಹ್‌ಮೂದುಲ್‌ಫೈಝಿ ವಾಲೆ ಮುಂಡೋವು ಕಾರ್ಯಕ್ರಮ ಉದ್ಘಾಟಿಸಿ, ಪವಿತ್ರ ಹಜ್‌ ಯಾತ್ರೆ ತ್ಯಾಗದಿಂದ ಕೂಡಿದೆ. ಹಜ್‌ ಯಾತ್ರೆಗೈಯುವವರಿಗೆ ಶಿಬಿರ ಮೂಲಕ ಮಾರ್ಗದರ್ಶನ ನೀಡುವ ಕಾರ್ಯವು ಕೂಡ ಪುಣ್ಯ ಕಾರ್ಯವಾಗಿದೆ ಎಂದು ಶುಭ ಹಾರೈಸಿದರು.

ದಕ ವಕ್ಫ್ ಸಲಹಾ ಸಮಿತಿ ಸದಸ್ಯ ರಶೀದ್‌ ವಿಟ್ಲ ಮಾತನಾಡಿ, ಹಜ್‌ ಯಾತ್ರಿಕರಿಗೆ ಜು. 7ರಂದು ದೇರಳಕಟ್ಟೆ ಆಸ್ಪತ್ರೆಯಲ್ಲಿ ಚುಚ್ಚುಮದ್ದು ಶಿಬಿರವನ್ನು ಆಯೋಜಿಸಲಾಗಿದೆ. ಭಾರತದಿಂದ ಪ್ರತಿವರ್ಷ 1.75 ಲಕ್ಷ ಮಂದಿ ಯಾತ್ರೆಗೆ ತೆರಳುತ್ತಾರೆ. ಕಳೆದ 9 ವರ್ಷಗಳಿಂದ ಮಂಗಳೂರು ವಿಮಾನ ನಿಲ್ದಾಣದಿಂದ
ನಿರಂತರವಾಗಿ ಹಜ್‌ ಯಾತ್ರೆ ತೆರಳುತ್ತಾರೆ ಎಂದು ತಿಳಿಸಿದರು. ಬೈರಿಕಟ್ಟೆ ಜುಮಾ ಮಸೀದಿ ಖತೀಬು ಎನ್‌.ಎ. ಅಬ್ದುರ್ರಹ್ಮಾನ್‌ ಮದನಿ ಜೆಪ್ಪು ದುಆ ಆಶೀರ್ವಚನ ನೀಡಿದರು. ನ್ಯಾಯವಾದಿ ಡಿ.ಬಿ. ಅಬ್ದುಲ್‌ ಖಾದರ್‌ ಅಧ್ಯಕ್ಷತೆ ವಹಿಸಿದ್ದರು. ಅಲ್‌ ಹಾಜ್‌ ಅಬ್ದುಲ್‌ ಹಮೀದ್‌ ಬಾಖವಿ ವಿಷಯ ಮಂಡನೆ ಮಾಡಿದರು.
ಎ.ಎಸ್‌. ಮಾಣಿಪ್ಪಾಡಿ, ಅಬ್ದುಲ್ಲ ಹಾಜಿ ಮೊದಲಾದವರು ಉಪಸ್ಥಿತರಿದ್ದರು. ಮಸೀದಿ ಅಧ್ಯಕ್ಷ ಅಬೂಬಕ್ಕರ್‌ ಬೈರಿಕಟ್ಟೆ, ಯೂಸುಫ್‌ ಕಾಡುಮನೆ, ಇಸ್ಮಾಯಿಲ್‌ ಡಿ. ದೇಲಂತಬೆಟ್ಟು, ಯೂಸುಫ್‌ ಮುಸ್ಲಿಯಾರ್‌ ಸೇರಾಜೆ, ಹಾಜಿ ಎ. ಉಸ್ಮಾನ್‌ ಕರೋಪಾಡಿ, ರಶೀದ್‌ ವಿಟ್ಲ ಅವರನ್ನು ಸಮ್ಮಾನಿಸಲಾಯಿತು. ಅಲ್‌ಹಾಜ್‌ ಸಲೀಂ ಮದನಿಬೈರಿಕಟ್ಟೆ ಸ್ವಾಗತಿಸಿ, ಇಸಾಕ್‌ ಸಅದಿ ಖೀರಾಅತ್‌ ಪಠಿಸಿದರು. ಅಬ್ದುಲ್ಲ ಕುಂಞ ಕೆ. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here