Home ಧಾರ್ಮಿಕ ಸುದ್ದಿ ಗುರುಪುರ: ವಜ್ರದೇಹಿ ಜಾತ್ರೆ ಆರಂಭ

ಗುರುಪುರ: ವಜ್ರದೇಹಿ ಜಾತ್ರೆ ಆರಂಭ

1272
0
SHARE

ಗುರುಪುರ: ಶ್ರೀ ವಜ್ರದೇಹಿ ಮಠ ಗುರುಪುರದ ರಾಮಾಂಜನೇಯ ದೇವರ ಸನ್ನಿಧಿಯಲ್ಲಿ ಗುರುವಾರ ಬೆಳಗ್ಗೆ ಸ್ವಸ್ತಿ ಪುಣ್ಯಾಹ, ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತದೊಂದಿಗೆ ಜಾತ್ರೆ ಆರಂಭಗೊಂಡಿತು.

ಬಳಿಕ ದ್ವಾದಶ ನಾರಿಕೇಳ ಮಹಾಗಣಪತಿಯಾಗ, ಉಗ್ರಾಣ ಮುಹೂರ್ತ, ನವಕಲಶಾಭಿಷೇಕ ಹಾಗು ಬಹು ಅಪರೂಪವಾದ ವಿಶೇಷ ಸಾನಿಧ್ಯ ಹೊಂದಿರುವ “ಕೂರ್ಮ ಮಹಾಸಾಲಿಗ್ರಾಮ’ ಮತ್ತು ಅನಂತ ಪದ್ಮನಾಭ ಮಹಾ ಸಾಲಿಗ್ರಾಮಕ್ಕೆ ಮಹಾಮಜ್ಜನ, ಮಹಾಪೂಜೆ ನಡೆದು ಪ್ರಸಾದ ವಿತರಿಸಲಾಯಿತು. ಸಂಜೆ 5 ಗಂಟೆಗೆ ದೇವರಿಗೆ ರಂಗಪೂಜೆ, ದೇವರ ಬಲಿ ಉತ್ಸವ, ಕಟ್ಟೆಪೂಜೆ, ದೇವರ ಶಯನ ಕವಾಟ ಬಂಧನ ನಡೆಯಿತು.

ಶುಕ್ರವಾರ ಮಧ್ಯಾಹ್ನ ದೇವರ ಬಲಿ ಹೊರಟು, ಅನ್ನಛತ್ರದಲ್ಲಿ ಪಲ್ಲಪೂಜೆ ನಡೆಸಲಾಯಿತು. ಎಲ್ಲ ಕೈಕಂರ್ಯವು ವಜ್ರದೇಹಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here