ಗುರುಪುರ: ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದ ಜೀರ್ಣೋದ್ಧಾರ ಪ್ರಕ್ರಿಯೆ ನಡೆಯುತ್ತಿದ್ದು, ಫೆಬ್ರವರಿ 3- 7ರ ವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನೂತನವಾಗಿ ನಿರ್ಮಿಸಲಾದ ಧ್ವಜಸ್ತಂಭದ (ಕೊಡಿಮರ) ಪ್ರತಿಷ್ಠಾಪನೆ ಶುಕ್ರವಾರ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರಗಿತು.
ಭಂಡಾರಮನೆಯಲ್ಲಿ ದೈವದ ಪಾತ್ರಿಗಳಾದ ಚಂದ್ರಹಾಸ ಪೂಜಾರಿ ಕೌಡೂರು ಮತ್ತು ತನಿಯಪ್ಪ ಪೂಜಾರಿಯವರ ನೇತೃತ್ವದಲ್ಲಿ ಪೂಜೆ ನೆರವೇರಿದ ಬಳಿಕ, ಅಶ್ವತ್ಥಕಟ್ಟೆ ಬಳಿ ಇರಿಸಲಾಗಿದ್ದ ನೂತನ ಕೊಡಿಮರಕ್ಕೆ ವಾಸುದೇವ ಭಟ್ ಮತ್ತು ಅಣ್ಣು ಭಟ್ ಪೂಜೆ ನೆರೆವೇರಿಸಿದರು.
ಬಳಿಕ ಕೊಡಿಮರವನ್ನು ದೇವಸ್ಥಾನದ ಅಂಗಣಕ್ಕೆ ತಂದು, ಪ್ರತಿಷ್ಠಾಪನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಆಡಳಿತ ಮೋಕ್ತೇಸರ ಪ್ರಮೋದ್ ಕುಮಾರ್ ರೈ, ಗುತ್ತುಗಳ ಯಜಮಾನರು ಹಾಗೂ ಊರ ಹತ್ತು ಸಮಸ್ತರು ದೈವಸ್ಥಾನದಲ್ಲಿ ಹಾಜರಿದ್ದರು. ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕಾಗಿ ಚಪ್ಪರ ಮುಹೂರ್ತವೂ ಇದೇ ವೇಳೆ ನೆರವೇರಿತು.